ETV Bharat / bharat

ಇಸ್ರೇಲ್ ದಾಳಿ​ಗೆ ಅಮೆರಿಕ ಬೆಂಬಲ : ಮ್ಯಾಗ್ಸೆಸ್ಸೆ ಪ್ರಶಸ್ತಿ ವಾಪಸ್​ಗೆ ಸಂದೀಪ್​ ಪಾಂಡೆ ನಿರ್ಧಾರ - ಮ್ಯಾಗ್ಸೆಸ್ಸೆ ಪ್ರಶಸ್ತಿ

ಇಸ್ರೇಲ್ ದಾಳಿ​ಗೆ ಅಮೆರಿಕ ಬೆಂಬಲ ಸೂಚಿಸಿರುವುದಕ್ಕೆ ರಾಮನ್​ ಮ್ಯಾಗ್ಸೆಸ್ಸೆ ಪ್ರಶಸ್ತಿ ವಾಪಸ್​ ಮಾಡುವುದಾಗಿ ಸಾಮಾಜಿಕ ಕಾರ್ಯಕರ್ತ ಸಂದೀಪ್​ ಪಾಂಡೆ ಘೋಷಿಸಿದ್ದಾರೆ.

social-activist-sandeep-pandey-returns-magsaysay-award-over-us-support-to-israeli-attack-in-gaza
ಇಸ್ರೇಲ್ ದಾಳಿ​ಗೆ ಅಮೆರಿಕ ಬೆಂಬಲ : ಮ್ಯಾಗ್ಸೆಸ್ಸೆ ಪ್ರಶಸ್ತಿ ವಾಪಸ್​ಗೆ ಸಂದೀಪ್​ ಪಾಂಡೆ ನಿರ್ಧಾರ
author img

By PTI

Published : Jan 2, 2024, 11:06 PM IST

ನವದೆಹಲಿ : ಇಸ್ರೇಲ್​ ಮತ್ತು ಪ್ಯಾಲೇಸ್ತೇನ್ ಹಮಾಸ್​ ಉಗ್ರರ ನಡುವಿನ​ ಸಂಘರ್ಷ ಮುಂದುವರೆದಿದೆ. ಇಸ್ರೇಲ್​ ಗಾಜಾ ಪಟ್ಟಿ ಮೇಲೆ ಪ್ರಬಲ ದಾಳಿಯನ್ನು ಮುಂದುವರೆಸಿದ್ದು, ಇಂದು ನೂರಾರು ಜನರು ಸಾವನ್ನಪ್ಪಿದ್ದಾರೆ. ಗಾಜಾ ಪಟ್ಟಿ ಮೇಲಿನ ಇಸ್ರೇಲ್​ ದಾಳಿಗೆ ಅಮೆರಿಕ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಸಂದೀಪ್​ ಪಾಂಡೆ ತಮ್ಮ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂದೀಪ್​ ಪಾಂಡೆ, ಇಸ್ರೇಲ್​ ದಾಳಿಗೆ ಅಮೆರಿಕ ಬೆಂಬಲಿಸಿರುವುದಕ್ಕೆ ನನಗೆ ನೀಡಲಾಗಿರುವ ರಾಮನ್​ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಹಿಂತಿರುಗಿಸಲು ನಿರ್ಧರಿಸಿದ್ದೇನೆ. ಇದರ ಜೊತೆಗೆ ಅಮೆರಿಕದ ವಿಶ್ವ ವಿದ್ಯಾಲಯದಿಂದ ಪಡೆದಿರುವ ಎರಡು ಮಾಸ್ಟರ್​ ಆಫ್​ ಸೈನ್ಸ್​ ಪದವಿಯನ್ನು ಹಿಂತಿರುಗಿಸುವುದಾಗಿ ಅವರು ಹೇಳಿದ್ದಾರೆ.

ರಾಕ್​ಫೆಲ್ಲರ್​ ಫೌಂಡೇಶನ್​ ಎಂಬ ಸಂಸ್ಥೆಯು ಮ್ಯಾಗ್ಸೆಸ್ಸೆ ಪ್ರಶಸ್ತಿ ಮೊತ್ತವನ್ನು ನೀಡುತ್ತದೆ. ಸಂದೀಪ್​ ಪಾಂಡೆ ಈ ಪ್ರಶಸ್ತಿ ಸ್ವೀಕರಿಸಿದ ವಿಭಾಗದ ಮೊತ್ತವನ್ನು ಫೋರ್ಡ್​ ಫೌಂಡೇಶನ್​ ಕೊಟ್ಟಿದೆ. ಈ ಎರಡೂ ಫೌಂಡೇಶನ್​ಗಳು ಅಮೆರಿಕ ಮೂಲದ್ದಾಗಿವೆ. ಈಗ ಇಸ್ರೇಲ್​ ದಾಳಿಗೆ ಅಮೆರಿಕ ಬೆಂಬಲ ಸೂಚಿಸಿದ್ದರಿಂದ ತಮ್ಮ ಪ್ರಶಸ್ತಿಯನ್ನು ವಾಪಸ್​ ನೀಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಪ್ಯಾಲೇಸ್ತೇನ್​ ಪ್ರಜೆಗಳ ಮೇಲಿನ ಇಸ್ರೇಲ್​ ದಾಳಿಗೆ ಅಮೆರಿಕ ಬೆಂಬಲು ಸೂಚಿಸಿದೆ. ಇಸ್ರೇಲ್​ ದಾಳಿಗೆ ಸುಮಾರು 21,500ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಸ್ರೇಲ್​ ತನ್ನ ಶಸ್ತ್ರಾಸ್ತ್ರ ದಾಳಿಯನ್ನು ಮುಂದುವರೆಸಿದೆ ಎಂದು ತಿಳಿಸಿದ್ದಾರೆ. 2002ರಲ್ಲಿ ಸಂದೀಪ್​ ಪಾಂಡೆ ಅವರಿಗೆ ರಾಮನ್​ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ನೀಡಲಾಗಿತ್ತು. ಪಾಂಡೆ ಸೋಷಿಯಲಿಸ್ಟ್​ ಪಾರ್ಟಿ(ಇಂಡಿಯಾ)ಯಲ್ಲಿ ಗುರುತಿಸಿಕೊಂಡಿದ್ದಾರೆ.

ಇಸ್ರೇಲ್​ - ಹಮಾಸ್​ ಸಂಘರ್ಷ : 2023ರ ಅಕ್ಟೋಬರ್​ 7ರಂದು ಹಮಾಸ್​ ಉಗ್ರರು ಇಸ್ರೇಲ್ ಮೇಲೆ ರಾಕೆಟ್​ ದಾಳಿ ನಡೆಸಿದ್ದರು. ಉಗ್ರರ ದಾಳಿಗೆ ಇಸ್ರೇಲ್​ನಲ್ಲಿ ಸುಮಾರು 1200 ಮಂದಿ ಸಾವನ್ನಪ್ಪಿದ್ದು, 240ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದರು.

ಇದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ದಾಳಿ ನಡೆಸಿದ್ದು, ಗಾಜಾಪಟ್ಟಿಯಲ್ಲಿ ಸುಮಾರು 21,900 ಜನರನ್ನು ಹತ್ಯೆ ಮಾಡಿತ್ತು. ಇದರಲ್ಲಿ ಮೂರನೇ ಎರಡು ಭಾಗದಷ್ಟು ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್​ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ದಾಳಿಯಲ್ಲಿ ಇಸ್ರೇಲ್​ನ 173 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್​ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟು 8,000 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್​ ಹೇಳಿಕೊಂಡಿದೆ. ಗಾಜಾದಲ್ಲಿ ಶೇ. 85ರಷ್ಟು ಜನರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಒಟ್ಟು 2.3 ಮಿಲಿಯನ್ ಜನರು ಗಾಜಾದಿಂದ ವಲಸೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಸಾಕ್ಷ್ಯಾಧಾರಗಳ ಕೊರತೆ: 2019ರ ಐಪಿಎಲ್ ಬೆಟ್ಟಿಂಗ್ ಹಗರಣ ಪ್ರಕರಣಗಳ ಮುಚ್ಚಿದ ಸಿಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.