ETV Bharat / bharat

SBI ಎಟಿಎಂನಿಂದ ನೋಟುಗಳ ಬದಲಿಗೆ ಹೊರಬಂದ ಹಾವಿನ ಮರಿಗಳು... ಬೆಚ್ಚಿಬಿದ್ದ ಜನರು

ಉತ್ತರಾಖಂಡ್​​ನ ನೈನಿತಾಲ್​ನಲ್ಲಿ ಎಟಿಎಂನಲ್ಲಿ ಹಣದ ಬದಲಿಗೆ ಬಂದವು ಹಾವಿನ ಮರಿಗಳು: ಹತ್ತು ಹಾವಿನ ಮರಿಗಳನ್ನು ಸುರಕ್ಷಿತವಾಗಿ ಹೊರ ತೆಗೆದ ಉರಗ ತಜ್ಞ

ಎಟಿಎಂನಲ್ಲಿ ಹಾವಿನ ಮರಿಗಳು ಪ್ರತ್ಯಕ್ಷ
ಎಟಿಎಂನಲ್ಲಿ ಹಾವಿನ ಮರಿಗಳು ಪ್ರತ್ಯಕ್ಷ
author img

By

Published : May 24, 2023, 8:03 PM IST

ಹಾವಿನ ಮರಿಗಳನ್ನು ರಕ್ಷಣೆ ಮಾಡಿದ ಉರಗ ತಜ್ಞ

ನೈನಿತಾಲ್ (ಉತ್ತರಾಖಂಡ) : ಎಟಿಎಂ ಎಂದರೇ ಮೊದಲು ನೆನಪಾಗುವುದೇ ಗರಿ ಗರಿ ನೋಟುಗಳನ್ನು ತೆಗೆಯುವ ಯಂತ್ರ ಎಂದು. ಆದರೇ ಇಲ್ಲೊಂದು ಎಸ್​ಬಿಐ ಎಟಿಎಂನಿಂದ ನೋಟುಗಳು ಹೊರಬರುವ ಬದಲು ಹಾವಿನ ಮರಿಗಳು ಹೊರ ಬಂದು ಜನರಲ್ಲಿ ಅಚ್ಚರಿ ಜತೆಗೆ ಭಯವನ್ನೂ ಉಂಟು ಮಾಡಿದೆ. ಉತ್ತರಾಖಂಡದ ರಾಮನಗರ ಎಂಬಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದೆ. ಎಟಿಎಂನಿಂದ ಹಾವು ಹೊರಬಂದಿದ್ದರಿಂದ ಹಣ ಡ್ರಾ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಜನ ಎಟಿಎಂನಲ್ಲಿ ನೋಟಿನ ಬದಲು ಹಾವುಗಳ ಮರಿಗಳು ಬಂದಿದ್ದರಿಂದ ಹಣ ಬಿಡಿಸಿಕೊಳ್ಳಲು ಬಂದವರು ಪೇರಿ ಕಿತ್ತಿದ್ದಾರೆ.

ನಿನ್ನೆ (ಮಂಗಳವಾರ) ಸಂಜೆ ರಾಮನಗರದ ಕೋಸಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಶಾಖೆಯ ಎಟಿಎಂನಲ್ಲಿ ಕೆಲವರು ಎಟಿಎಂನಿಂದ ಹಣ ತೆಗೆಯಲು ಬಂದಿದ್ದರು. ಈ ವೇಳೆ ವ್ಯಕ್ತಿಯೊಬ್ಬ ತನ್ನ ಎಟಿಎಂ ಕಾರ್ಡ್ ಅನ್ನು ಯಂತ್ರಕ್ಕೆ ಹಾಕಿದಾಗ, ಯಂತ್ರದ ಕೆಳಭಾಗದಲ್ಲಿ ಹಾವು ಕಾಣಿಸಿಕೊಂಡಿದೆ. ನಂತರ ಗಾಬರಿಯಿಂದ ಎಟಿಎಂನಿಂದ ಹೊರಬಂದ ವ್ಯಕ್ತಿ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ : ಮೋದಿ ದುರಹಂಕಾರಿ ಎಂದ ಸಿಸೋಡಿಯಾ: ಮಾಜಿ ಡಿಸಿಎಂ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋದ್ರಾ ಪೊಲೀಸರು?

ಘಟನಾ ಸ್ಥಳದಲ್ಲಿ ಕಾಲ್ತುಳಿತ : ಅಷ್ಟರಲ್ಲೇ ಅಲ್ಲಿನ ಜನರು ಹಾವನ್ನು ಕಂಡು ಭಯಬೀತರಾಗಿದ್ದು, ಗಾಬರಿಯಿಂದ ಆ ಸ್ಥಳದಿಂದ ತಪ್ಪಿಸಿ ಕೊಳ್ಳಲು ಯತ್ನಿಸಿದ್ದಾರೆ. ಹೀಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಘಟನಾ ಸ್ಥಳದಲ್ಲಿ ಕಾಲ್ತುಳಿತ ಕೂಡಾ ಉಂಟಾಗಿತ್ತು ಎಂದು ಎಟಿಎಂನಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ನರೇಶ ದಾಲಕೋಟಿ ಮಾಹಿತಿ ನೀಡಿದ್ದಾರೆ.

ಈ ಘಟನೆ ನಡೆದ ಬಳಿಕ ಬ್ಯಾಂಕ್ ಶಾಖೆಯೊಳಗೆ ಕೆಲಸದಲ್ಲಿ ನಿರತರಾಗಿದ್ದ ಅಧಿಕಾರಿಗಳು, ನೌಕರರು ಸಹ ಗೊಂದಲಕ್ಕೊಳಗಾಗಿ ಕೆಲ ಕಾಲ ಆತಂಕಗೊಂಡಿದ್ದರು. ಇದೇ ವೇಳೆ ಎಟಿಎಂನಿಂದ ಹಾವು ಬಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಕೆಲಕಾಲ ಎಟಿಎಂ ಬಂದ್ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೀಗ ಹಾಕಿದರು.

ಇದನ್ನೂ ಓದಿ : ವಿಶೇಷ ಜುಬ್ಬ ಧರಿಸುವ ಮೂಲಕ ಮಕ್ಕಳ ಲಸಿಕೆ ಕುರಿತು ವಿಶೇಷ ಜಾಗೃತಿ: ಇವರ ಕಾರ್ಯಕ್ಕೆ ಮೆಚ್ಚಲೇಬೇಕು

ಬಳಿಕ ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಸ್ನೇಕ್ ಆ್ಯಂಡ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಹಾಗೂ ಉರಗ ತಜ್ಞ ಚಂದ್ರಸೇನ್ ಕಶ್ಯಪ್ ಅವರು ಆಗಮಿಸಿದರು. ಎಟಿಎಂ ಒಳಗೆ ಹಾವು ಹಿಡಿಯುವ ಕಾರ್ಯಾಚರಣೆ ಆರಂಭಿಸಿದಾಗ ಎಟಿಎಂನಲ್ಲಿ ಇನ್ನು ಹಲವು ಹಾವಿನ ಮರಿಗಳು ಇರುವುದು ಪತ್ತೆಯಾಗಿದೆ. ಒಂದರ ಹಿಂದೆ ಒಂದರಂತೆ ಹತ್ತು ಹಾವಿನ ಮರಿಗಳನ್ನು ಉರಗ ತಜ್ಞ ಹೊರತೆಗೆದಿದ್ದಾನೆ.

ಎಟಿಎಂ ಮಷಿನ್​ನಿಂದ ಹೊರ ತೆಗೆದ ಹಾವಿನ ಮರಿಗಳನ್ನು ರಕ್ಷಿಸಿಸಲಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾರ್ಯವನ್ನೂ ಅಲ್ಲಿಗೆ ಬಂದ ಉರುಗ ತಜ್ಞ ಮಾಡಿದ್ದಾನೆ. ಈ ಸಂದರ್ಭದಲ್ಲಿ ಮಾತನಾಡಿದ ಉರಗ ತಜ್ಞ ಚಂದ್ರಸೇನ್ ಕಶ್ಯಪ್ ಅವರು, ಎಟಿಎಂನಿಂದ ರಕ್ಷಿಸಲಾದ ಹಾವುಗಳು ತುಂಬಾ ವಿಷಕಾರಿಯಾಗಿದ್ದು, ಅಪಕಾರಿಯೂ ಹೌದು, ಅವುಗಳನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಜನ ಭಯಪಡಬೇಕಾಗಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ : ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ವಿಲೇಜ್ ಫೀಲ್ಡ್ ಅಸಿಸ್ಟೆಂಟ್​​: ಬಾಡಿಗೆ ಮನೆಯಲ್ಲಿ ಪತ್ತೆಯಾಯ್ತು 17 ಕೆಜಿ ಚಿನ್ನಾಭರಣ, ಕೋಟಿ ಹಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.