ETV Bharat / bharat

ಪೊಲೀಸ್ ಠಾಣೆಗೆ ಹಾವುಗಳ ರಕ್ಷಣೆ: ಇಡುಕ್ಕಿಯಲ್ಲೊಂದು ಅಚ್ಚರಿ !

ಕೇರಳದ ಪೊಲೀಸ್ ಠಾಣೆಯೊಂದಕ್ಕೆ ಹಾವುಗಳು ರಕ್ಷಣೆ ನೀಡುತ್ತಿವೆ. ಅರಣ್ಯದಲ್ಲಿನ ಮಂಗಗಳು ಪೊಲೀಸ್ ಸ್ಟೇಷನ್​ಗೆ ನುಗ್ಗುವುದನ್ನು ತಡೆಗಟ್ಟಲು ಪೊಲೀಸರು ಹಾವುಗಳ ನೆರವು ಪಡೆದಿದ್ದಾರೆ.

ಪೊಲೀಸ್ ಠಾಣೆಗೆ ಹಾವುಗಳ ರಕ್ಷಣೆ
Snakes are saviours of this police station
author img

By

Published : Sep 15, 2022, 4:35 PM IST

ಇಡುಕ್ಕಿ (ಕೇರಳ): ಪೊಲೀಸರನ್ನು ಸಮಾಜದ ರಕ್ಷಕರು ಎಂದು ಕರೆಯಲಾಗುತ್ತದೆ. ಆದರೆ, ಇಡುಕ್ಕಿಯಂಥ ಅರಣ್ಯ ಪ್ರದೇಶದಲ್ಲಿನ ಪೊಲೀಸರು ಮಾತ್ರ ತಮ್ಮ ರಕ್ಷಣೆಗೆ ಇನ್ನೊಬ್ಬರನ್ನು ಅವಲಂಬಿಸಿದ್ದಾರೆ. ಅರಣ್ಯದಲ್ಲಿನ ಮಂಗಗಳು ಪೊಲೀಸ್ ಸ್ಟೇಷನ್​ಗೆ ನುಗ್ಗುವುದನ್ನು ತಡೆಗಟ್ಟಲು ಪೊಲೀಸರು ಹಾವುಗಳ ನೆರವು ಪಡೆದಿದ್ದಾರೆ.

ಕೇರಳ ತಮಿಳುನಾಡು ಗಡಿಯಲ್ಲಿರುವ ಕುಂಬುಮೆಟ್ಟು ಪೊಲೀಸ್ ಠಾಣೆಯ ಪೊಲೀಸರು ಮಂಗಗಳ ಕಾಟ ತಡೆಯಲು ಇಂಥದೊಂದು ವಿನೂತನ ಐಡಿಯಾ ಮಾಡಿದ್ದಾರೆ. ಠಾಣೆಯ ಕಟ್ಟಡದ ಸುತ್ತಮುತ್ತ ರಬ್ಬರ್ ಹಾವುಗಳನ್ನು ಇಟ್ಟು ಕೋತಿಗಳು ಹೆದರಿ ಓಡುವಂತೆ ಮಾಡಿರುವ ಈ ಪೊಲೀಸರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪಕ್ಕದ ಅರಣ್ಯದಿಂದ ದಾರಿ ತಪ್ಪಿ ಬರುತ್ತಿದ್ದ ಕೋತಿಗಳ ಪಡೆ ಸೃಷ್ಟಿಸುವ ಅನಾಹುತದಿಂದ ಬೇಸತ್ತ ಪೊಲೀಸರು ಕೊನೆಗೂ ಈ ಹಾವಿನ ಉಪಾಯವನ್ನು ಪ್ರಯೋಗಿಸಿದ್ದು, ಅದು ಸಾಕಷ್ಟು ಯಶಸ್ವಿಯಾಗಿದೆ.

ನೈಜ ಹಾವುಗಳನ್ನು ಹೋಲುವ ಚೀನಾ ನಿರ್ಮಿತ ರಬ್ಬರ್ ಹಾವುಗಳು ಪೊಲೀಸ್ ಠಾಣೆ ಕಟ್ಟಡದ ಗ್ರಿಲ್, ಸಮೀಪದ ಮರಗಳ ಕೊಂಬೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕುಳಿತಿರುವುದನ್ನು ಇಲ್ಲಿ ಕಾಣಬಹುದು.

ರಬ್ಬರ್ ಹಾವುಗಳನ್ನು ಕಟ್ಟಿದ ನಂತರ ಯಾವುದೇ ಕೋತಿ ಠಾಣೆಯ ಬಳಿ ಬಂದಿಲ್ಲ ಎಂದು ಕುಂಬುಮೆಟ್ಟು ಸಬ್ ಇನ್ಸ್​​​​ಪೆಕ್ಟರ್ ಪಿ.ಕೆ. ಲಾಲಭಾಯ್ ಹೇಳಿದ್ದಾರೆ. ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಬ್ಬರ್ ಹಾವುಗಳನ್ನು ಕಟ್ಟಿದರೆ ಮಂಗಗಳ ಕಾಟ ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಈ ಪ್ರಯೋಗವು ನಿಜವಾಗಿಯೂ ಯಶಸ್ವಿಯಾಗಿದೆ ಎಂದು ಅವರು ನುಡಿದರು.

ಇದನ್ನೂ ಓದಿ: ಎಂಥಾ ವಿಚಿತ್ರ.. ತುಂಡರಿಸಿದ ನಾಗರ ಹಾವಿನ ತಲೆ ಕಚ್ಚಿ ವ್ಯಕ್ತಿ ಸಾವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.