ETV Bharat / bharat

Watch Video: ನೀರೆಯರನ್ನೆ ನಾಚಿಸಿದ 'ಗಜರಾಣಿ': ರೂಪಾ ಬುದ್ಧಿವಂತಿಕೆಗೆ ಜನ ಫಿದಾ - ಅಹೆರಿ ತಹಸಿಲ್‌ನ ಕಮಲಾಪುರದ ಆನೆ ಶಿಬಿರ

ಮಹಾರಾಷ್ಟ್ರ ರಾಜ್ಯದ ಕಮಲಾಪುರ ಆನೆ ಶಿಬಿರದಲ್ಲಿರುವ ಆನೆ ರೂಪಾ ತನ್ನ ಬಾಯಾರಿಕೆ ತೀರಿಸಿಕೊಳ್ಳಲು ಬೋರ್​​ವೆಲ್​ ಪಂಪ್​​ ಮೊರೆ ಹೋಗಿದ್ದಾಳೆ. ನೀರು ಕುಡಿಯಲು ಜನರು ಪಂಪ್​ ಮಾಡುವದನ್ನು ನೋಡಿದ ರೂಪಾ ತಾನೂ ಅವರಂತೆ ಪಂಪ್​ ಮಾಡುವುದನ್ನ ಕಲಿತಿದ್ದಾಳೆ ಎಂದು ಅರಣ್ಯ ಸಿಬ್ಬಂದಿ ಹೇಳುತ್ತಾರೆ.

female-elephant-pumping-tubewell-to-drink-water
ಕೈ ಪಂಪ್​​ ಮಾಡಿ ನೀರು ಕುಡಿದ ಆನೆ
author img

By

Published : Jun 7, 2021, 4:31 PM IST

Updated : Jun 7, 2021, 8:49 PM IST

ಗಡಚಿರೋಲಿ( ಮಹಾರಾಷ್ಟ್ರ): ಬುದ್ಧಿವಂತ ಹೆಣ್ಣು ಆನೆಯೊಂದು ಕೈ ಪಂಪ್​ ಮಾಡಿ ನೀರು ಕುಡಿದು ದಾಹ ತಿರಿಸಿಕೊಂಡ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಗಜರಾಣಿಯ ಟಾಲೆಂಟ್​​ಗೆ ಫುಲ್​ ಫಿದಾ ಆಗಿದ್ದಾರೆ.

ಈ ಅಪರೂಪದ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಅಹೆರಿ ತಹಸಿಲ್‌ನ ಕಮಲಾಪುರದ ಆನೆ ಶಿಬಿರದಲ್ಲಿ ನಡೆದಿದೆ. ಶಿಬಿರದಲ್ಲಿರುವ ಆನೆ ರೂಪಾ ತನ್ನ ಬಾಯಾರಿಕೆ ತೀರಿಸಿಕೊಳ್ಳಲು ಕೈ ಪಂಪ್​​ ಮೊರೆ ಹೋಗಿದ್ದಾಳೆ.

ಕೈ ಪಂಪ್​​ ಮಾಡಿ ನೀರು ಕುಡಿದ ಗಜರಾಣಿ

ಅರಣ್ಯ ಸಿಬ್ಬಂದಿ ಹೇಳುವಂತೆ, ನೀರು ಕುಡಿಯಲು ಜನರು ಕೈ ಪಂಪ್​ ಬಳಸುವುದನ್ನು​ ನೋಡಿದ ರೂಪಾ ತಾನೂ ಪಂಪ್​ ಮಾಡುವುದನ್ನ ಕಲಿತಿದ್ದಾಳೆ. ಆನೆಗಳಿಗೆ ಇಲ್ಲಿ ನೀರು ಕುಡಿಯಲು ದೊಡ್ಡ ಸರೋವರವಿದ್ದರೂ ಕೆಲವೊಮ್ಮೆ ಪಂಪ್​ ಮಾಡುವ ಮೂಲಕ ಆನೆ ನೀರು ಕುಡಿಯುತ್ತದೆ ಎಂದು ಹೇಳುತ್ತಾರೆ. ಪ್ರವಾಸಿಗರೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Last Updated : Jun 7, 2021, 8:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.