ಕೋಲ್ಕತ್ತಾ (ಪಶ್ಚಿಮ ಬಂಗಾಳ): 'ಈಟಿವಿ ಬಾಂಗ್ಲಾ'ದಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಜೀ 24 ಘಂಟಾ ಎಂಬ ಬೆಂಗಾಳಿ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರಾಗಿದ್ದ ಅಂಜನ್ ಬಂಡೋಪಾಧ್ಯಾಯ (56) ಕೋವಿಡ್ಗೆ ಬಲಿಯಾಗಿದ್ದಾರೆ.
ಸೋಂಕು ದೃಢಪಟ್ಟ ಬಳಿಕ ಬಂಡೋಪಾಧ್ಯಾಯರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ ಇವರು ಕೊನೆಯುಸಿರೆಳೆದಿದ್ದಾರೆ.
ಅಂಜನ್ ಅವರು ಆನಂದ ಬಜಾರ್ ಪತ್ರಿಕೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಈಟಿವಿ ಬಾಂಗ್ಲಾದಲ್ಲಿ ಸುದ್ದಿವಾಚಕರಾಗಿ ಹಾಗೂ ಆನಂದ ಬಜಾರ್ ಗ್ರೂಪ್ ಡಿಜಿಟಲ್ ವಿಭಾಗ (ಎಬಿಪಿ ಡಿಜಿಟಲ್)ದಲ್ಲಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಕೋವಿಡ್ನಿಂದ ಹಿರಿಯ ಪತ್ರಕರ್ತ ಸುನಿಲ್ ಜೈನ್ ನಿಧನ: ಪ್ರಧಾನಿ ಮೋದಿ ಸಂತಾಪ
ಅಂಜನ್ ಬಂಡೋಪಾಧ್ಯಾಯ ಅವರು ಪಶ್ಚಿಮ ಬಂಗಾಳ ರಾಜ್ಯದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯರ ಸಹೋದರರೂ ಆಗಿದ್ದು, ಇವರ ಸಾವಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿ, ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.