ETV Bharat / bharat

ನಿದ್ದೆಗಣ್ಣಲ್ಲಿದ್ದ ಪತ್ನಿಯನ್ನು ರೈಲು ಹಳಿ ಮೇಲೆ ತಳ್ಳಿ ಮಕ್ಕಳೊಂದಿಗೆ ಪರಾರಿಯಾದ​ ಪತಿ - ನಿದ್ದೆ ಕಣ್ಣಿನಲ್ಲಿದ್ದ ಪತ್ನಿಯನ್ನ ರೈಲ್ವೆ ಹಳಿ

ಪ್ಲಾಟ್‍ಫಾರ್ಮ್ ಬೆಂಚ್‍ನಲ್ಲಿ ನಿದ್ದೆಗಣ್ಣಲ್ಲಿದ್ದ ಪತ್ನಿಯನ್ನು ರೈಲು ಹಳಿ ಮೇಲೆ ತಳ್ಳಿ ಮಕ್ಕಳೊಂದಿಗೆ ಪರಾರಿಯಾದ​ ಪತಿ- ಮಹಾರಾಷ್ಟ್ರದಲ್ಲಿ ಪ್ರಕರಣ.

Vasai Railway Station Wife
Vasai Railway Station Wife
author img

By

Published : Aug 23, 2022, 4:14 PM IST

Updated : Aug 23, 2022, 4:46 PM IST

ಪಾಲ್ಘರ್​(ಮಹಾರಾಷ್ಟ್ರ): ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​​​ನಲ್ಲಿ ಮಲಗಿದ್ದ ಪತ್ನಿಯನ್ನು ಎಬ್ಬಿಸಿ ರೈಲು ಹಳಿ ಮೇಲೆ ತಳ್ಳಿರುವ ಭಯಾನಕ ಘಟನೆ ಮಹಾರಾಷ್ಟ್ರದ ವಸಾಯಿ ರೈಲು ನಿಲ್ದಾಣದಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಪ್ರಕರಣ ನಡೆದಿದೆ. ಪ್ಲಾಟ್​ ಫಾರ್ಮ್​​ನಲ್ಲಿ ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ಪತ್ನಿಯನ್ನು ದಿಢೀರ್​ ಎಬ್ಬಿಸಿರುವ ಗಂಡ, ಆಕೆಯನ್ನು ರೈಲು ಹಳಿ ಮೇಲೆ ತಳ್ಳಿದ್ದಾನೆ. ಈ ವೇಳೆ ವೇಗವಾಗಿ ಬಂದಿರುವ ಎಕ್ಸ್​ಪ್ರೆಸ್​ ರೈಲು ಮಹಿಳೆ ಮೇಲೆ ಹರಿದಿದೆ. ಇದರ ಬೆನ್ನಲ್ಲೇ ಇಬ್ಬರು ಮಕ್ಕಳೊಂದಿಗೆ ಮಹಿಳೆಯ ಪತಿ ಪರಾರಿಯಾಗಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯಾವಳಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಕೆ ಮಾಡಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಪತ್ನಿಯನ್ನ ರೈಲ್ವೆ ಹಳಿ ಮೇಲೆ ತಳ್ಳಿ ಮಕ್ಕಳೊಂದಿಗೆ ಎಸ್ಕೇಪ್​ ಆದ ಪತಿ

ಇದನ್ನೂ ಓದಿ: ಮೂವರು ಹೆಣ್ಣು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ: ರೈಲ್ವೆ ಹಳಿ ಮೇಲೆ ಶವ ಪತ್ತೆ

ಮಲಗಿದ್ದ ಹೆಂಡತಿಯನ್ನ ಏಕಾಏಕಿಯಾಗಿ ಎಚ್ಚರ ಮಾಡಿರುವ ಕಾರಣ ನಿದ್ದೆಗಣ್ಣಲ್ಲಿ ಮಹಿಳೆಗೆ ಏನೂ ಗೊತ್ತಾಗಿಲ್ಲ. ಈ ವೇಳೆ ಹೆಂಡತಿಯನ್ನು ರೈಲು ಹಳಿಯ ಪಕ್ಕದಲ್ಲಿ ಕರೆದುಕೊಂಡು ಹೋಗಿ ನಿಂತಿದ್ದು, ಎಕ್ಸ್​​ಪ್ರೆಸ್​ ರೈಲು ಬರುತ್ತಿದ್ದಂತೆ ರಭಸವಾಗಿ ತಳ್ಳಿದ್ದಾನೆ. ಹೆಂಡತಿ ಮೇಲಿನ ಕೋಪದಿಂದಾಗಿ ಆತ ಈ ರೀತಿಯಾಗಿ ನಡೆದುಕೊಂಡಿರುವ ಶಂಕೆ ಇದೆ ಎಂದು ಹೇಳಲಾಗ್ತಿದೆ.

Last Updated : Aug 23, 2022, 4:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.