ETV Bharat / bharat

ತಂಗಿಗೆ ಕಿರುಕುಳ: ಪ್ರಶ್ನಿಸಿ ಕಪಾಳಮೋಕ್ಷ ಮಾಡಿದ್ದ ಅಣ್ಣನ ಕೊಲೆಗೈದ ಅಪ್ರಾಪ್ತರು

ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ತನ್ನ ಸಹೋದರಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿ ಕಪಾಳಮೋಕ್ಷ ಮಾಡಿದ್ದರಿಂದ ಸೇಡು ಸಾಧಿಸಿದ ಇಬ್ಬರು ಅಪ್ರಾಪ್ತ ಬಾಲಕರು ಆಕೆಯ ಅಣ್ಣನನ್ನು ಕೊಲೆ ಮಾಡಿದ್ದಾರೆ.

slap-for-molesting-sister-to-take-revenge-minors-killed-the-student-by-stabbing-him-with-a-knife
ತಂಗಿಗೆ ಕಿರುಕುಳ: ಪ್ರಶ್ನಿಸಿ ಕಪಾಳಮೋಕ್ಷ ಮಾಡಿದ್ದ ಅಣ್ಣನ ಕೊಲೆಗೈದ ಅಪ್ರಾಪ್ತರು
author img

By

Published : Oct 29, 2022, 3:52 PM IST

ನವದೆಹಲಿ: ತನ್ನ ತಂಗಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಇಲ್ಲಿನ ಪಟೇಲ್ ನಗರದ ನಿವಾಸಿ ಮನೋಜ್ ಕುಮಾರ್ ನೇಗಿ ಎಂಬಾತನೇ ಹತ್ಯೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈ ಕೊಲೆ ಮಾಡಿದ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಲಾಗಿದೆ.

ಕೆಲ ದಿನಗಳ ಹಿಂದೆ ಇಬ್ಬರು ಹುಡುಗರು ಮನೋಜ್ ಕುಮಾರ್ ನೇಗಿ ಅವರ ಸಹೋದರಿಗೆ ಕಿರುಕುಳ ನೀಡಿದ್ದರು. ಇದನ್ನು ಮನೋಜ್​ ಪ್ರಶ್ನಿಸಿದ್ದ. ಅಲ್ಲದೇ, ಆರೋಪಿಗಳಿಗೆ ಕಪಾಳಮೋಕ್ಷ ಮಾಡಿದ್ದ ಎನ್ನಲಾಗಿದೆ. ಇದರಿಂದ ಮನೋಜ್​ ಮೇಲೆ ದ್ವೇಷ ಹೊಂದಿದ್ದ ಹುಡುಗರು, ಈ ಸೇಡು ತೀರಿಸಿಕೊಳ್ಳಲೆಂದು ಶುಕ್ರವಾರ ರಾತ್ರಿ ಮನೋಜ್​ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ.

ವಿದ್ಯಾರ್ಥಿ ಮನೋಜ್​ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕಂಪ್ಯೂಟರ್ ತರಗತಿ ಮುಗಿಸಿ ತನ್ನ ಮನೆಗೆ ಹೋಗುತ್ತಿದ್ದ. ಈ ವೇಳೆ ದಾರಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಆತನನ್ನು ಸುತ್ತುವರಿದು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮನೋಜ್​ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆ ಸಂಬಂಧ ಹತ್ಯೆಯಾದ ಮನೋಜ್​ ತಂದೆ ಚಂದನ್​ ಸಿಂಗ್​ ನೇಗಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳಾದ ಅಪ್ರಾಪ್ತ ಬಾಲಕರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬಾಲಕಿಗೆ ಅಶ್ಲೀಲ ಚಿತ್ರಗಳ ಮೆಮೊರಿ ಕಾರ್ಡ್ ನೀಡಿದ ಆರೋಪ: ಕಲ್ಲಡ್ಕ ನಿವಾಸಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.