ETV Bharat / bharat

ರೈಲ್ವೆ ಕಾರ್ಯಾಗಾರದಲ್ಲಿನ 62 ಕೆಲಸಗಾರರಿಗೆ ವಕ್ಕರಿಸಿದ ಕೊರೊನಾ! - ಮಹಾರಾಷ್ಟ್ರದಲ್ಲಿ ಹೆಚ್ಚಾದ ಕೊರೊನಾ

ಮುಂಬೈನ ಮಹಾಲಕ್ಷ್ಮಿ ಪ್ರದೇಶದ ರೈಲ್ವೆ ಕಾರ್ಯಾಗಾರದ 62 ಕಾರ್ಮಿಕರಲ್ಲಿ ಕೊರೊನಾ ದೃಢಪಟ್ಟಿದೆ.

ರೈಲ್ವೆ ಕಾರ್ಯಾಗಾರದಲ್ಲಿನ 62 ಕೆಲಸಗಾರಿಗೆ ಕೊರೊನಾ

author img

By

Published : Jan 9, 2022, 3:27 PM IST

ಮುಂಬೈ (ಮಹಾರಾಷ್ಟ್ರ): ಮುಂಬೈನ ಮಹಾಲಕ್ಷ್ಮಿ ಪ್ರದೇಶದ ರೈಲ್ವೆ ವರ್ಕ್‌ಶಾಪ್‌ನ ಒಟ್ಟು 62 ಮಂದಿ ಕಾರ್ಮಿಕರಿಗೆ ಕೋವಿಡ್​ ದೃಢಪಟ್ಟಿದೆ. ಕಾರ್ಯಾಗಾರದಲ್ಲಿ ಒಟ್ಟು 500 ಮಂದಿ ಕೆಲಸಗಾರರಿದ್ದರು ಎಂದು ತಿಳಿದುಬಂದಿದೆ.

ಮುಂಬೈ ಕಳೆದ 24 ಗಂಟೆಗಳಲ್ಲಿ 20,318 ಹೊಸ COVID-19 ಪ್ರಕರಣಗಳನ್ನು ದಾಖಲಿಸಿದೆ ಎಂದು ಬೃಹತ್​​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಶನಿವಾರ ಮಾಹಿತಿ ನೀಡಿತ್ತು.

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದ ರಾಜಧಾನಿಯಲ್ಲಿ 71,019 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ವಾಣಿಜ್ಯನಗರಿಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 8,95,098ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Watch Video-ಬದರಿನಾಥ ದೇವಾಲಯದಲ್ಲಿ ಹಿಮಪಾತದ ಸುಂದರ ದೃಶ್ಯ

ಕಳೆದ 24 ಗಂಟೆಗಳಲ್ಲಿ ಒಟ್ಟು 6,003 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 7,70,056ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಐವರು ಮಾರಣಾಂತಿಕ ವೈರಸ್‌ಗೆ ಪ್ರಾಣ ಕಳೆದುಕೊಂಡಿದ್ದು, ಮುಂಬೈನಲ್ಲಿ ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ 16,399 ಕ್ಕೆ ತಲುಪಿದೆ. ರಾಜ್ಯದಲ್ಲಿ ಪ್ರಸ್ತುತ 1,06,037 ಸಕ್ರಿಯ ಕೊರೊನಾ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.