ಮಹಾರಾಷ್ಟ್ರ : ರತ್ನಗಿರಿ ತಾಲೂಕಿನ ಜೈಗಢದಿಂದ ನಾವಿಡ್-2 ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸುಮಾರು ಆರು ನಾವಿಕರು ನಾಪತ್ತೆಯಾಗಿದ್ದಾರೆ.
ಐದು ದಿನ ಕಳೆದರೂ ಮೀನುಗಾರಿಕೆಗೆ ತೆರಳಿದ್ದ ದೋಣಿ ವಾಪಸ್ ಬಾರದ ಹಿನ್ನೆಲೆ ಬೋಟ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೀನುಗಾರಿಕಾ ಬೋಟ್ ಜೈಗಢದ ನಾಸಿರ್ ಹುಸೇನ್ ಮಿಯಾನ್ ಸಂಸಾರೆ ಎಂಬುವರ ಮಾಲೀಕತ್ವದ್ದಾಗಿದೆ.
ಅಕ್ಟೋಬರ್ 26ರಂದು ಜೈಗಢದಿಂದ ಮೀನುಗಾರಿಕೆಗೆ ಬೋಟ್ ತೆರಳಿತ್ತು. ಇದೀಗ ಕಾಣೆಯಾಗಿರುವ ಎಲ್ಲಾ ಮೀನುಗಾರರು ಸಖರಿಯಾಗರ್ ನಿವಾಸಿಗಳು ಎನ್ನಲಾಗಿದೆ.
ಸ್ಥಳೀಯ ಮೀನುಗಾರರು ಮತ್ತು ಕೋಸ್ಟ್ ಗಾರ್ಡ್‌ನಿಂದ ನಾಪತ್ತೆಯಾದ ಬೋಟ್ ಹಾಗೂ ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕಾರು ಅಪಘಾತ: ರಾಯಚೂರು ಮೂಲದ ಮೂವರ ದುರ್ಮರಣ