ತೂತುಕುಡಿ (ತಮಿಳುನಾಡು): ಭಯೋತ್ಪಾದಕರು ಒಳನುಸುಳುವಿಕೆ ಮತ್ತು ಮಾದಕವಸ್ತು ಕಳ್ಳಸಾಗಾಣೆ ತಡೆಯುವ ನಿಟ್ಟಿನಲ್ಲಿ ಇಲ್ಲಿನ ಕೋಸ್ಟ್ಗಾರ್ಡ್ಗಳು ಗಸ್ತು ತಿರುಗುತ್ತಿದ್ದರು. ಈ ವೇಳೆ ಕನ್ಯಾಕುಮಾರಿಯಿಂದ 10 ನಾಟಿಕಲ್ ಮೈಲಿ ದೂರದಲ್ಲಿ ಶ್ರೀಲಂಕಾ ಮೂಲದ ದೋಣಿ ಕಂಡು ಬಂದಿದ್ದು, ಇದರಲ್ಲಿ ಮಾದಕ ವಸ್ತು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ದೋಣಿ ಕಂಡು ಬಂದ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ಗಳು ತೀವ್ರ ಶೋಧ ನಡೆಸಿದ್ದು, ಖಾಲಿ ಡೀಸೆಲ್ ಟ್ಯಾಂಕ್‌ನಲ್ಲಿ ತುಂಬಿದ್ದ ಸುಮಾರು 100 ಕೆಜಿ ಹೆರಾಯಿನ್ ಪ್ಯಾಕೇಟ್‌ಗಳು, 20 ಸಣ್ಣ ಪೆಟ್ಟಿಗೆಗಳ ಸ್ಫಟಿಕ ಮೆಥ್ ಬೆಟಮೈನ್ ಮತ್ತು 5 ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು ₹500 ಕೋಟಿ ಎಂದು ಅಂದಾಜಿಸಲಾಗಿದೆ. ಕೇವಲ ಮಾದಕ ವಸ್ತುಗಳ ಮೌಲ್ಯ ₹100 ಕೋಟಿ ಎಂದು ತಿಳಿದು ಬಂದಿದೆ.
ಕೋಸ್ಟ್‌ಗಾರ್ಡ್ ಗಸ್ತು ತಿರುಗುತ್ತಿದ್ದ ಹಡಗು ಇಂದು ಬೆಳಗ್ಗೆ 7.30ಕ್ಕೆ ತೂತುಕುಡಿ ಬಂದರಿಗೆ ತಲುಪಿದೆ. ದೋಣಿಯಲ್ಲಿದ್ದ ಆರು ಜನರನ್ನು ದಕ್ಷಿಣ ನಾರ್ಕೋಟಿಕ್ಸ್ ವಿಭಾಗದ ದಕ್ಷಿಣ ಪ್ರಾದೇಶಿಕ ನಿರ್ದೇಶಕ ಬ್ರೂನೋ, ತೂತುಕುಡಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ರಾ ಗುಪ್ತಚರ ಅಧಿಕಾರಿಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಲಾಗಿದೆ.
ನೀಂಡು ಕುಲಸೂರ್ಯ ಸಥಮಾನ್ಯುಯೆಲ್ (40), ವನಕುಲ ಸೂರ್ಯಜೀವನ್ (30), ಸಮೀರಾ (32), ವರ್ಣಕುಲ ಸೂರ್ಯ ಜೀವನ್ (29), ಮ್ಯಾನುಯೆಲ್ ಜೀವನ್ ಪ್ರಸನ್ನ (29) ಮತ್ತು ನಿಶಾಂತ್ ಗಮಗೆ (37) ಬಂಧಿತರು.
ಪ್ರಾಥಮಿಕ ತನಿಖೆಯಲ್ಲಿ ಅವರು ನೆಗೊಂಬೊ ಪ್ರದೇಶದಿಂದ ದೋಣಿ ಬಾಡಿಗೆಗೆ ಪಡೆದು ಪಾಕಿಸ್ತಾನಕ್ಕೆ ಡ್ರಗ್ಸ್ ಖರೀದಿಸಲು ತೆರಳಿದ್ದರು ಎಂದು ತಿಳಿದು ಬಂದಿದೆ. ಅದೇ ಸಮಯದಲ್ಲಿ ಇರಾನ್‌ನಿಂದ ಬಂದ ಜನರು ಸಹ ದೋಣಿಯಲ್ಲಿ ಡ್ರಗ್ಸ್ ತುಂಬಿದ್ದಾರೆ. ಇದನ್ನು ಆಸ್ಟ್ರೇಲಿಯಾಕ್ಕೆ ಸಾಗಿಸುವುದು ಅವರ ಯೋಜನೆಯಾಗಿತ್ತು. ಹಿಂದೂ ಮಹಾಸಾಗರವನ್ನು ಸಮೀಪಿಸುವಾಗ, ದೋಣಿಯ ಡೀಸೆಲ್ ತೊಟ್ಟಿಯಲ್ಲಿ ಸಮಸ್ಯೆ ಕಂಡು ಬಂತು.
ಹೀಗಾಗಿ ದೋಣಿಯನ್ನು ಮುಂದೆ ಕಳುಹಿಸಲು ಸಾಧ್ಯವಾಗಲಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಇನ್ನು ಆ ಸಮಯದಲ್ಲಿ, ಅಲ್ಲಿನ ಗಾಳಿಯ ವೇಗವು ಕನ್ಯಾಕುಮಾರಿ ಕರಾವಳಿಯಿಂದ 10 ನಾಟಿಕಲ್ ಮೈಲಿ ದೂರದಲ್ಲಿರುವ ಹಿಂದೂ ಮಹಾಸಾಗರಕ್ಕೆ ದೋಣಿ ಬಂದಿದೆ ಎನ್ನಲಾಗಿದೆ.
ಸದ್ಯ ಕೋಸ್ಟ್ ಗಾರ್ಡ್ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಆರು ಜನರನ್ನು ಬಂಧಿಸಿ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. ಮಾದಕ ದ್ರವ್ಯಗಳನ್ನು ಕೇಂದ್ರ ಮಾದಕ ವಸ್ತು ವಿಭಾಗದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಬಂಧಿತ 6 ಜನರನ್ನು ತೂತುಕುಡಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.