ಅಂಬಾಲಾ, ಹರಿಯಾಣ: ಇಂದು ಹರಿಯಾಣದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಂಬಾಲದ ಬಾಲನಾ ಗ್ರಾಮದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಸುದ್ದಿ ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬಂದ ನಂತರ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಲನ ಮೂಡಿದೆ.
ಒಂದೇ ಕುಟುಂಬದ ಆರು ಜನರ ಶವಗಳು ಪತ್ತೆ: ಗ್ರಾಮದ ಸುಖ್ವಿಂದರ್ ಸಿಂಗ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ತಂದೆ ಸಂಗತ್ ರಾಮಾ ಮತ್ತು ತಾಯಿ ಮಹೀಂದ್ರಾ ಮನೆಯಲ್ಲಿ ಇರುತ್ತಿದ್ದರು. ಪತ್ನಿ ರೀನಾ ಗೃಹಿಣಿಯಾಗಿದ್ದು, ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದರು. ಏಕಾಏಕಿ ಸುಖ್ವಿಂದರ್ ಸೇರಿದಂತೆ ಕುಟುಂಬದ ಆರೂ ಸದಸ್ಯರ ಶವಗಳು ಪತ್ತೆಯಾಗಿವೆ.
ಸುಖ್ವಿಂದರ್ ಬರೆದ ಡೆತ್ನೋಟ್ ಪತ್ತೆ: ಕುಟುಂಬದ ಸದಸ್ಯ ಸುಖ್ವಿಂದರ್ ಸಿಂಗ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ತಂದೆ ಸಂಗತ್ ರಾಮ್ ಮತ್ತು ತಾಯಿ ಮಹೀಂದ್ರಾ, ಸುಖ್ವಿಂದರ್ ಪತ್ನಿ ರೀನಾ, 7 ವರ್ಷದ ಮಗಳು ಜಸ್ಸಿ ಮತ್ತು 5 ವರ್ಷದ ಮಗಳು ಅಶು ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಸುಖ್ವಿಂದರ್ ಸಾವಿಗೆ ಶರಣಾದ ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಪೊಲೀಸರು ಮುಂದಿನ ಕಾರ್ಯ ಕೈಗೊಂಡಿದ್ದಾರೆ.
ಓದಿ: ಅಥಣಿ.. ಪತ್ನಿ ಸಾವನ್ನಪ್ಪಿದ ಎರಡು ದಿನಗಳ ಬಳಿಕ ಮನನೊಂದು ಪತಿ ಆತ್ಮಹತ್ಯೆ
ಕಂಪನಿ ಕಿರುಕುಳಕ್ಕೆ ಕುಟುಂಬವೇ ಬಲಿ: ಡೆತ್ನೋಟ್ನಲ್ಲಿ ಸುಖ್ವಿಂದರ್ ಅವರು ಕೆಲಸ ಮಾಡುತ್ತಿದ್ದ ಕಂಪನಿಯು ತನಗೆ ಕಿರುಕುಳ ನೀಡಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದೆ ಎಂದು ಆರೋಪಿಸಿದ್ದಾರೆ ಅಂತಾ ಹೇಳಲಾಗುತ್ತಿದೆ. ನನ್ನ ಸಾವಿಗೆ ಸಾಯಿ ಹೊಂಡಾ ಯಮುನಾ ನಗರದ ಮಾಲೀಕರು ಕಾರಣ.
ನನ್ನ ಬಳಿ ಹಣ ಕೇಳಿ ಕೆಲಸದಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕುತ್ತಿದ್ದರು ಎಂದು ಡೆತ್ನೋಟ್ನಲ್ಲಿ ಸುಖ್ವಿಂದರ್ ಸಿಂಗ್ ಉಲ್ಲೇಖಿಸಿದ್ದಾರೆ. ಈ ಘಟನೆ ಕುರಿತು ತನಿಖೆ ನಡೆಸುವುದಾಗಿ ಅಂಬಾಲ ಡಿಎಸ್ಪಿ ಜೋಗಿಂದರ್ ಶರ್ಮಾ ಹೇಳಿದ್ದಾರೆ.
ಮಗಳ ಜನ್ಮದಿನದಂದೇ ನಡೀತು ದುರಂತ: ಬಂದಿರುವ ಮಾಹಿತಿಯ ಪ್ರಕಾರ ಇಂದು ಸುಖ್ವಿಂದರ್ ಅವರ 5 ವರ್ಷದ ಮಗಳು ಆಸು ಜನ್ಮದಿನವಿತ್ತು. ಅದಕ್ಕಾಗಿ ಸಂಬಂಧಿಕರ ಮನೆಯಲ್ಲಿ ಕೆಲವು ಸಿದ್ಧತೆಗಳೂ ನಡೆಯುತ್ತಿದ್ದವು. ಆದರೆ, ಇದ್ದಕ್ಕಿದ್ದಂತೆ ಕುಟುಂಬ ಸದಸ್ಯರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು ಮನೆಯ ಮೇಲ್ಛಾವಣಿಯಿಂದ ಒಳಗೆ ಹೋಗಿ ನೋಡಿದಾಗ ಎಲ್ಲರೂ ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಗ್ರಾಮಸ್ಥರು ಮತ್ತು ಸಂಬಂಧಿಕರು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.
ಓದಿ: ವರ್ಕ್ ಫ್ರಂ ಹೋಮ್ ಎಫೆಕ್ಟ್ಗೆ ಟೆಕ್ಕಿ ಬಲಿ.. ಅತ್ತೆ, ಪತ್ನಿ ಕಿರುಕುಳಕ್ಕೆ ನವವಿವಾಹಿತ ಆತ್ಮಹತ್ಯೆ