ಗುಂಟೂರು (ಆಂಧ್ರಪ್ರದೇಶ) : ದುರಂತ ಘಟನೆಯೊಂದು ಸಂಭವಿಸಿ ಆರು ಜನ ಸುಟ್ಟು ಕರಕಲಾದ ಘಟನೆ ರೆಪಲ್ಲೆ ತಾಲೂಕಿನ ಲಂಕವಾನಿದಿಬ್ಬ ಬಳಿ ನಡೆದಿದೆ. ರಾತ್ರಿ ಮಲಗಿದ್ದ ವೇಳೆ ಕರೆಂಟ್ ತಂತಿ ಶೆಡ್ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮೃತರು ರಾಮಮೂರ್ತಿ, ಕಿರಣ್, ಮನೋಜ್, ವಂಡಬೋ, ಮಹೇಂದ್ರ, ಒಡಿಶಾ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಘಟನೆಯ ಕಾರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆದ್ರೆ ಬೆಂಕಿ ಇಲ್ಲದೆ ಶೆಡ್ ಒಳ ಭಾಗದಲ್ಲಿ ಸುಟ್ಟಿರುವುದರ ಬಗ್ಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ಹೇಳೋದೇ ಬೇರೆಯಾಗಿದೆ.
ಈ ದುರ್ಘಟನೆಗೆ ಶಾಕ್ ಸರ್ಕ್ಯೂಟ್ ಕಾರಣವಾಗಿಲ್ಲ. ಶೆಡ್ನಲ್ಲಿರುವ ರಾಸಾಯನಿಕದಿಂದ ಈ ಘಟನೆ ನಡೆದಿರಬಹುದೆಂದು ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ ಈ ಘಟನೆ ಮೇಲೆ ಬಹಳಷ್ಟು ಅನುಮಾನಗಳು ಮೂಡುತ್ತಿವೆ. ಘಟನಾ ಸ್ಥಳಕ್ಕೆ ಮಾಧ್ಯಮಗಳಿಗೆ ಪೊಲೀಸರು ಅನುಮತಿ ನೀಡುತ್ತಿಲ್ಲ.