ETV Bharat / bharat

₹16 ಕೋಟಿ ಬೆಲೆಯ ಚುಚ್ಚುಮದ್ದು ಸ್ವೀಕರಿಸಿತು ಕಂದಮ್ಮ! - ಆಮದು ಮಾಡಿಕೊಂಡ ಚುಚ್ಚುಮದ್ದು

ಒಂದು ಅಥವಾ ಎರಡು ದಿನಗಳಲ್ಲಿ ಆಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಪೋಷಕರು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ..

baby
baby
author img

By

Published : Feb 27, 2021, 9:01 PM IST

ಮುಂಬೈ(ಮಹಾರಾಷ್ಟ್ರ): ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಆರು ತಿಂಗಳ ಹೆಣ್ಣು ಮಗು ತೀರಾ ಕಾಮತ್‌ಗೆ ₹16 ಕೋಟಿ ಬೆಲೆಯ ಚುಚ್ಚುಮದ್ದು ನೀಡಲಾಯಿತು.

ಈ ಮಗು ಎಸ್‌ಎಂಎ ಟೈಪ್ 1 ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿತ್ತು. ಝೊಲ್ಜೆನ್ಸ್ಮ ಚುಚ್ಚುಮದ್ದು ಪಡೆಯುವ ಮೂಲಕ ಮಗು ಈ ಮಾರಕ ಕಾಯಿಲೆಯ ವಿರುದ್ಧ ಗೆಲುವು ದಾಖಲಿಸಲು ಸಿದ್ಧವಾಗಿದೆ.

ಈ ಅಪರೂಪದ ರೋಗವು ಚಿಕಿತ್ಸೆ ಹೊಂದಿದ್ದರೂ, ಅದರ ವೆಚ್ಚವು ಮಗುವಿನ ಪೋಷಕರ ಆರ್ಥಿಕ ಸಾಮರ್ಥ್ಯ ಮೀರಿತ್ತು. ಈ ಇಂಜೆಕ್ಷನ್‌ನ ಯುಎಸ್​ನಿಂದ ಆಮದು ಮಾಡಿಕೊಳ್ಳಬೇಕಾಗಿತ್ತು ಮತ್ತು ಅದರ ಬೆಲೆ 16 ಕೋಟಿ ರೂಪಾಯಿಗಳಷ್ಟಿತ್ತು.

ಚುಚ್ಚುಮದ್ದು ಸ್ವೀಕರಿಸಿದ ಕಂದಮ್ಮ..

ಆದರೆ, ಮಗುವಿನ ತಂದೆ ತಮ್ಮ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿದರು. ಚುಚ್ಚುಮದ್ದಿನ ಮೇಲಿನ ಆಮದು ಸುಂಕ ಮತ್ತು ಜಿಎಸ್‌ಟಿಯನ್ನು ಕೇಂದ್ರ ಸರ್ಕಾರವು ಮನ್ನಾ ಮಾಡಿತು. ಡೋಸೇಜ್ ನೀಡಿದ ನಂತರ ಮಗು ಈಗ ವೈದ್ಯಕೀಯ ವೀಕ್ಷಣೆಯಲ್ಲಿದೆ.

ಒಂದು ಅಥವಾ ಎರಡು ದಿನಗಳಲ್ಲಿ ಆಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಪೋಷಕರು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.