ETV Bharat / bharat

ಆ ವಿಡಿಯೋಗಳನ್ನು ನೋಡುತ್ತಲೇ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರು ಬಾಲಕರು - ಬಿಹಾರ ಅಪರಾಧ ಸುದ್ದಿ

ಅಶ್ಲೀಲ ವಿಡಿಯೋ ನೋಡುತ್ತಾ ಇಬ್ಬರು ಬಾಲಕಿಯರ ಮೇಲೆ ಆರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರ ಶೇಖ್​ಪುರ ಜಿಲ್ಲೆಯಲ್ಲಿ ನಡೆದಿದೆ.

minors gang rape two young girls in bihar, Bihar crime news, Bihar gangrape news, ಬಿಹಾರದಲ್ಲಿ ಬಾಲಕಿಯರ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ, ಬಿಹಾರ ಅಪರಾಧ ಸುದ್ದಿ, ಬಿಹಾರ ಸಾಮೂಹಿಕ ಅತ್ಯಾಚಾರ ಸುದ್ದಿ,
ಸಾಮೂಹಿಕ ಅತ್ಯಾಚಾರ ಎಸಗಿದ ಆರು ಬಾಲಕರು
author img

By

Published : Mar 9, 2022, 10:38 AM IST

ಶೇಖ್‌ಪುರ (ಬಿಹಾರ): ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿದ ಆರು ಬಾಲಕರು ಹೊಲದಲ್ಲಿ ತರಕಾರಿ ಸಂಗ್ರಹಿಸಲು ಹೋಗಿದ್ದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

8 ಮತ್ತು 9 ವರ್ಷ ವಯಸ್ಸಿನ ಸಂತ್ರಸ್ತರು ಕೃತ್ಯದ ನಡೆದ ನಂತರ ತಮ್ಮ ಮನೆಗೆ ವಾಪಸ್​ ಆಗಿದ್ದಾರೆ. ಈ ವೇಳೆ ಬಾಲಕಿಯೊಬ್ಬರ ಆರೋಗ್ಯ ಹದಗೆಟ್ಟಿದೆ. ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಇದಾದ ನಂತರ ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆದಿದೆ.

ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರೆ ಉಳಿದವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅತ್ಯಾಚಾರ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸ್ಮಾರ್ಟ್‌ಫೋನ್ ಬಳಸುವ ಮೂಲಕ ನಾವು ಇದರ ಬಗ್ಗೆ ತಿಳಿದುಕೊಂಡಿದ್ದೇವೆ ಅಂತಾ ಬಾಲಕರು ತಿಳಿಸಿದ್ದಾರೆ.

ಬಾರ್ಬಿಘಾ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸಂತ್ರಸ್ತೆಯರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳು ನಮಗೆ 5 ರೂ ನೀಡಿದ್ದರು. ಅವರು ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದರು ಎಂದು ಅತ್ಯಾಚಾರಕ್ಕೊಳಗಾದ ಬಾಲಕಿಯರು ಇನ್ಸ್​ಪೆಕ್ಟರ್​ ಎದುರು ಹೇಳಿದ್ದಾರೆ. ಸಂತ್ರೆಸ್ತೆಯರ ಹೇಳಿಕೆ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.