ETV Bharat / bharat

ಭೀಕರ ರಸ್ತೆ ಅಪಘಾತ.. 6 ಮಂದಿ ದುರ್ಮರಣ, ಹಲವರಿಗೆ ಗಾಯ - ಉತ್ತರ ಪ್ರದೇಶದಲ್ಲಿ ಇತ್ತೀಚಿನ ಸುದ್ದಿ

ಉತ್ತರ ಪ್ರದೇಶದ ದೆವರಿಯಾದಲ್ಲಿ ಸೋಮವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಆರು ಮಂದಿ ಸಾವನ್ನಪ್ಪಿ ಕೆಲವರು ಗಾಯಗೊಂಡಿದ್ದಾರೆ.

Six killed, several injured in road mishap in Uttar Pradesh
ಭೀಕರ ರಸ್ತೆ ಅಪಘಾತ: 6 ಮಂದಿ ಸಾವು, ಹಲವರಿಗೆ ಗಾಯ
author img

By

Published : Apr 19, 2022, 9:09 AM IST

ದೆವರಿಯಾ(ಉತ್ತರ ಪ್ರದೇಶ): ಎಸ್‌ಯುವಿ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ದೆವರಿಯಾದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. ಗೌರಿ ಬಜಾರ್-ರುದ್ರಾಪುರ ರಸ್ತೆಯ ಇಂದೂಪುರ ಕಾಳಿ ಮಂದಿರ ತಿರುವಿನ ಬಳಿ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಶುಭಂ ಗುಪ್ತಾ, ರಾಮ್ ಪ್ರಕಾಶ್ ಸಿಂಗ್, ವಶಿಷ್ಠ್​ ಸಿಂಗ್, ಜೋಗನ್ ಸಿಂಗ್, ಅಂಕುರ್ ಪಾಂಡೆ, ದೇವದತ್ ಪಾಂಡೆ ಮತ್ತು ಬಸ್ ಸವಾರ ರಮಾನಂದ್ ಮೌರ್ಯ ಎಂದು ಗುರುತಿಸಲಾಗಿದೆ. ರಾತ್ರಿ 11.30ಕ್ಕೆ ಎಸ್​ಯುವಿ ಕಾರಿನಲ್ಲಿದ್ದವರು ಸಮಾರಂಭವೊಂದನ್ನು ಮುಗಿಸಿಕೊಂಡು ರುದ್ರಾಪುರ ರಸ್ತೆಯ ಮೂಲಕ ಹಿಂದಿರುಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಬಸ್ ಎಸ್​ಯುವಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀಪತಿ ಮಿಶ್ರಾ ಹೇಳಿದರು.

ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವರನ್ನು ರಕ್ಷಿಸಿದ್ದಾರೆ. ಐವರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮದ್ವೆಯಾದ್ರೂ ವಿವಾಹೇತರ ಸಂಬಂಧ ; ಹೆಂಡ್ತಿ ಥಳಿಸಿ, ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಗಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.