ಕೃಷ್ಣಾ(ಆಂಧ್ರಪ್ರದೇಶ): ಆಟೋ ರಿಕ್ಷಾಗೆ ಲಾರಿ ಡಿಕ್ಕಿಯಾಗಿ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನೂಜಿವೀಡು ಮಂಡಲಂನ ಗೊಲ್ಲಪಲ್ಲಿಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ವಿಜಯವಾಡ, ನೂಜಿವೀಡು ಆಸ್ಪತ್ರೆಗಳಿಗೆ ರವಾನಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳನ್ನು ತಾಂಡಾವೊಂದರ ಕಾರ್ಮಿಕರು ಎನ್ನಲಾಗಿದ್ದು, ಮೃತರನ್ನು ರಮೇಶ್, ಭುಕಿಯಾ ನಾಗರಾಜ್, ಬಾನಾವತು ಸ್ವಾನಾ, ಭುಕಿಯಾ ಸೋಮ್ಲಾ, ಬುರ್ಮಾವತ್ ಬೇಬಿ, ಬಾನಾವತು ನಾಗು ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.