ETV Bharat / bharat

ಭೀಕರ ಅಪಘಾತ: ಹೈ ಟೆನ್ಷನ್​ ವೈರ್​ ಬಿದ್ದುಆಟೋದಲ್ಲಿ ಕೃಷಿ ಕೆಲಸಕ್ಕೆ ಹೋಗುತ್ತಿದ್ದ 5 ಮಂದಿ ಸಜೀವ ದಹನ

ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಆಟೋ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಐದು ಮಂದಿ ಸಜೀವ ದಹನವಾಗಿದ್ದಾರೆ.

AUTO ACCIDENT
AUTO ACCIDENT
author img

By

Published : Jun 30, 2022, 8:35 AM IST

Updated : Jun 30, 2022, 12:44 PM IST

ಶ್ರೀ ಸತ್ಯಸಾಯಿ(ಆಂಧ್ರಪ್ರದೇಶ): ಚಲಿಸುತ್ತಿದ್ದ ಆಟೋ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಐದು ಮಂದಿ ಸಜೀವ ದಹನವಾಗಿರುವ ಘಟನೆ ಶ್ರೀ ಸತ್ಯಸಾಯಿ ಜಿಲ್ಲೆಯ ತಾಡಿಮರ್ರಿ ವಲಯದಲ್ಲಿ ನಡೆದಿದೆ.

ಗುಡಂಪಲ್ಲಿಯಿಂದ ಚಿಲ್ಲಕೊಂಡಯ್ಯಪಲ್ಲಿಗೆ ಇಂದು ಬೆಳಗ್ಗೆ 5 ಮಂದಿ ಕೃಷಿ ಕೆಲಸಕ್ಕೆ ಆಟೋದಲ್ಲಿ ಹೋಗುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿ ಕಟ್ಟಾಗಿ ಬಿದ್ದಿದೆ. ಪರಿಣಾಮ ಒಮ್ಮೆಲೆ ಆಟೋಗೆ ಬೆಂಕಿ ಹೊತ್ತಿಕೊಂಡಿದ್ದು, 5 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಮೃತರನ್ನು ಗುಡ್ಡಂಪಲ್ಲಿ ನಿವಾಸಿಗಳು ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಆಟೋ ಚಾಲಕ ಪೋತುಲಯ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಲಕ್ಷ್ಮಿ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಟ್ಟಲಪಲ್ಲಿ ಆರ್ ಟಿಡಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಕಣ್ಣೆದುರೇ ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ಥಳೀಯರು ಓಡಿ ಬಂದರೂ ರಕ್ಷಿಸಲಾಗಲಿಲ್ಲ. ತಕ್ಷಣ ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಿದರೂ ಇವರೆಲ್ಲರ ಪ್ರಾಣ ಉಳಿಸಲಾಗಲಿಲ್ಲ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ ಅಷ್ಟರಲ್ಲಾಗಲೇ ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಕಾರ್ಮಿಕರನ್ನು ಗುರುತಿಸುವುದು ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಲೀಕರೊಬ್ಬರ ತೋಟದಲ್ಲಿ ಕಳೆ ತೆಗೆಯಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಾಂಬ್ ಸ್ಕ್ವಾರ್ಡ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ ವಿಧಿವಶ: ಕಣ್ಣೀರಿಟ್ಟ ಸಿಬ್ಬಂದಿ

Last Updated : Jun 30, 2022, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.