ETV Bharat / bharat

ಬಹುಮಹಡಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ: ಮೃತರ ಸಂಖ್ಯೆ 8ಕ್ಕೆ ಏರಿಕೆ, 51 ಮಂದಿ ಗಾಯ, ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ...

ಮಹಾರಾಷ್ಟ್ರದ ಗೋರೆಗಾಂವ್‌ನಲ್ಲಿರುವ ಜಿ+5 ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು , ಹಲವರು ಗಾಯಗೊಂಡಿದ್ದಾರೆ. 40 ಜನರನ್ನು ರಕ್ಷಿಸಲಾಗಿದ್ದು, ಗಾಯಾಳುಗಳ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

Fire at G plus 5 building in Goregaon
ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ಆರು ಮಂದಿ ಸಾವು, ಹಲವರಿಗೆ ಗಾಯ, ಮುಂದುವರಿದ ರಕ್ಷಣಾ ಕಾರ್ಯ...
author img

By ETV Bharat Karnataka Team

Published : Oct 6, 2023, 8:04 AM IST

Updated : Oct 6, 2023, 2:05 PM IST

ಮುಂಬೈ (ಮಹಾರಾಷ್ಟ್ರ): ಗೊರಗಾನ್‌ನಲ್ಲಿರುವ ಜಿ+5 ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ 51 ಮಂದಿ ಗಾಯಗೊಂಡಿದ್ದು, 14 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮುಂಬೈನ ಟ್ರಾಮಾ ಕೇರ್ ಮತ್ತು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಪಶ್ಚಿಮ ಗೋರೆಗಾಂವ್‌ನ ಆಫ್ ಎಂಜಿ ರಸ್ತೆಯಲ್ಲಿರುವ ಜೈ ಭವಾನಿ ಕಟ್ಟಡದಲ್ಲಿ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇನ್ನೂ ಅನೇಕ ಜನರು ಕಟ್ಟಡದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿಯಿದ್ದು, ಅವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದರು.

  • Pained to know about loss of lives in the fire incident at #Goregaon, Mumbai.
    We are in touch with BMC & Mumbai Police officials & all the assistance is being provided.
    My deepest condolences to the families who lost their loved ones and wishing speedy recovery to the injured…

    — Devendra Fadnavis (@Dev_Fadnavis) October 6, 2023 " class="align-text-top noRightClick twitterSection" data=" ">

ಅಧಿಕಾರಿಗಳ ಮಾಹಿತಿ ಪ್ರಕಾರ, ಗೋರೆಗಾಂವ್‌ನ ಎಂಜಿ ರಸ್ತೆಯಲ್ಲಿರುವ ಜೈ ಭವಾನಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯು ನೆಲದ ಮೇಲಿನ ಅಂಗಡಿಗಳು, ಸ್ಕ್ರ್ಯಾಪ್ ವಸ್ತುಗಳು ಮತ್ತು ನಿಲುಗಡೆ ಮಾಡಿದ ವಾಹನಗಳಿಗೂ ಆವರಿಸಿದೆ. ಟೆರೇಸ್ ಸೇರಿದಂತೆ ವಿವಿಧ ಮಹಡಿಗಳಲ್ಲಿ ಜನರು ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಘಟನೆಯಲ್ಲಿ ಸುಮಾರು 30 ವಾಹನಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

  • #WATCH | Goregaon Fire | Mumbai: Latest visuals from the spot.

    A fire broke out in Mumbai's Goregaon area late last night in which a total of 51 persons were injured. 7 deaths have been reported so far. Whereas the condition of 5 is critical, 35 persons are being treated and 4… pic.twitter.com/3VlaU99NCY

    — ANI (@ANI) October 6, 2023 " class="align-text-top noRightClick twitterSection" data=" ">

ಮುಖ್ಯ ಅಗ್ನಿಶಾಮಕ ಅಧಿಕಾರಿ ಮಾಹಿತಿ: ''2006ರಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ಈ ಕಟ್ಟಡ ನಿರ್ಮಿಸಲಾಗಿದ್ದು, ಇದರೊಳಗೆ ಅಗ್ನಿಶಾಮಕ ವ್ಯವಸ್ಥೆ ಇರಲಿಲ್ಲ. ಲಿಫ್ಟ್ ಹಳೆಯದಾಗಿತ್ತು. ಅಪಾರ ಪ್ರಮಾಣದ ಹೊಗೆಯು ಲಿಫ್ಟ್ ನಾಳದ ಮೂಲಕ ಹೊರಗೆ ಬರುತ್ತಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ನಂದಿಸಲಾಗಿದೆ. ಎಂಟು ಅಗ್ನಿಶಾಮಕ ವಾಹನಗಳು, ಐದು ಜಂಬೋ ವಾಟರ್ ಟ್ಯಾಂಕರ್‌ಗಳು, ಮೂರು ಸ್ವಯಂಚಾಲಿತ ಟರ್ನ್ ಟೇಬಲ್‌ಗಳು, ಒಂದು ಟರ್ನ್ ಟೇಬಲ್ ಲ್ಯಾಡರ್, ಕ್ವಿಕ್ ರೆಸ್ಪಾನ್ಸ್ ವಾಹನ ಮತ್ತು ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅಂಬಲ್ಗೇಕರ್ ತಿಳಿಸಿದರು.

''ಬೆಳಗಿನ ಜಾವ 3 ಗಂಟೆಗೆ ದೊಡ್ಡ ಸ್ಫೋಟ ಸಂಭವಿಸಿದೆ. ಆ ಸ್ಫೋಟದ ಶಬ್ದಕ್ಕೆ ನಾವು ಎಚ್ಚರಗೊಂಡೆವು. ನಂತರ ಕಟ್ಟಡದಿಂದ ಕೆಳಗೆ ಇಳಿದು ಬಂದು ನೋಡಿದಾಗ ಬೆಂಕಿ ಕಾಣಿಸಿಕೊಂಡಿತು'' ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಹೋದ್ಯೋಗಿಯಿಂದ ಗುಂಡಿನ ದಾಳಿ: ಮೂವರು ಅಧಿಕಾರಿಗಳು ಸೇರಿ ಐವರು ಸೇನಾ ಸಿಬ್ಬಂದಿಗೆ ಗಾಯ

Last Updated : Oct 6, 2023, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.