ETV Bharat / bharat

ಬಿಹಾರದಲ್ಲಿ ರೈಲು ದುರಂತ: ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲಿನ ಆರು ಬೋಗಿಗಳು: ನಾಲ್ವರ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ - ರೈಲು ಅಪಘಾತ

ದೆಹಲಿ - ಕಾಮಾಖ್ಯ ಈಶಾನ್ಯ ಎಕ್ಸ್‌ಪ್ರೆಸ್‌ನ ಆರು ಬೋಗಿಗಳು ಹಳಿತಪ್ಪಿದ ಘಟನೆ ಬಿಹಾರದ ಬಕ್ಸರ್​ ಜಿಲ್ಲೆಯಲ್ಲಿ ನಡೆದಿದೆ.

ಬಿಹಾರದದಲ್ಲಿ ರೈಲು ದುರಂತ: ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲಿನ ಆರು ಬೋಗಿಗಳು

author img

By ETV Bharat Karnataka Team

Published : Oct 12, 2023, 1:57 AM IST

Updated : Oct 12, 2023, 7:36 AM IST

ಪಾಟ್ನಾ (ಬಿಹಾರ): ಬಿಹಾರದ ಬಕ್ಸರ್​ ಜಿಲ್ಲೆಯಲ್ಲಿ ರೈಲು ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೆಹಲಿ - ಕಾಮಾಖ್ಯ ಈಶಾನ್ಯ ಎಕ್ಸ್‌ಪ್ರೆಸ್‌ನ ಆರು ಬೋಗಿಗಳು ಹಳಿತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಬಕ್ಸರ್ ಜಿಲ್ಲೆಯ ರಘುನಾಥಪುರ ನಿಲ್ದಾಣದ ಬಳಿ ಬುಧವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. 23 ಬೋಗಿಗಳನ್ನು ಹೊಂದಿರುವ ರೈಲು ಬೆಳಗ್ಗೆ 7:40ಕ್ಕೆ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನಿಂದ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • #WATCH | Bihar: Visuals from the Raghunathpur station in Buxar, where 21 coaches of the North East Express train derailed last night

    Restoration work is underway. pic.twitter.com/xcbXyA2MyG

    — ANI (@ANI) October 12, 2023 " class="align-text-top noRightClick twitterSection" data=" ">

ರಾತ್ರಿ 9:53 ಕ್ಕೆ ರೈಲು ಹಳಿ ತಪ್ಪಿದ್ದು, ಮತ್ತು ಕನಿಷ್ಠ ಎರಡು ಎಸಿ III ಶ್ರೇಣಿಯ ಕೋಚ್‌ಗಳು ಹಳಿ ತಪ್ಪಿ ಪಕ್ಕಕ್ಕೆ ಉರುಳಿಬಿದ್ದಿವೆ, ಆದರೆ ಇತರ ನಾಲ್ಕು ಬೋಗಿಗಳು ಟ್ರ್ಯಾಕ್‌ಗಳನ್ನು ಬಿಟ್ಟು ಬೇರೆ ಕಡೆ ಜಿಗಿದಿವೆ ಎಂಬುದನ್ನು ಸೆರೆಯಾದ ಕೆಲವು ದೃಶ್ಯಗಳು ತೋರಿಸುತ್ತಿವೆ. ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಬಕ್ಸರ್ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ತಿಳಿಸಿದ್ದಾರೆ. ಕನಿಷ್ಠ 50 ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಪಡೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  • #WATCH | North East Express train derailment | Buxar SP Manish Kumar says, "All people have been rescued. Around 25-30 are injured and have been sent to hospital and one has died. We are unable to check one coach and effort is underway to check that coach..."#Bihar pic.twitter.com/dWLC1bjlzf

    — ANI (@ANI) October 11, 2023 " class="align-text-top noRightClick twitterSection" data=" ">

ಘಟನೆಯ ನಂತರ ತಕ್ಷಣವೇ ಪರಿಹಾರ ಕಾರ್ಯ ಆರಂಭಿಸಲಾಗಿದೆ. ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯರ ತಂಡಗಳು ಸ್ಥಳಕ್ಕೆ ಧಾವಿಸಿವೆ. ಇದುವರೆಗೆ ನಾಲ್ಕೈದು ಜನರು ಸಾವನ್ನಪ್ಪಿರುವ ಮಾಹಿತಿ ಸಿಕ್ಕಿದೆ ಎಂದು ಬಕ್ಸರ್​ ಜಿಲ್ಲಾಧಿಕಾರಿ ಅಂಶುಲ್ ಅಗರ್ವಾಲ್ ತಿಳಿಸಿದ್ದಾರೆ. ಸದ್ಯ, ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹೆಚ್ಚಿನ ಪರಿಹಾರ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.

  • #WATCH | Buxar, Bihar: I was there in AC coach. Suddenly a noise was heard. People were screaming. Many people fell on me...'' says a passenger who got injured during North East Express train derailment pic.twitter.com/KOSlTGlPPr

ಹಲವು ರೈಲುಗಳ ಸಂಚಾರ ರದ್ದು: ಅಪಘಾತದ ಹಿನ್ನೆಲೆಯಲ್ಲಿ ಕಾಶಿ ಪಾಟ್ನಾ ಜನ ಶತಾಬ್ದಿ ಎಕ್ಸ್‌ಪ್ರೆಸ್ (15125) ಮತ್ತು ಪಾಟ್ನಾ ಕಾಶಿ ಜನ ಶತಾಬ್ದಿ ಎಕ್ಸ್‌ಪ್ರೆಸ್ (15126) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಈಸ್ಟ್ ಸೆಂಟ್ರಲ್ ರೈಲ್ವೆ ವಲಯ ಹೊರಡಿಸಿದ ಪ್ರಕಟಣೆ ತಿಳಿಸಿದೆ.

  • #WATCH | Bihar: North East Express train derailment: A special train arrives at the Raghunathpur station to bring stranded passengers.

    As per the General Manager of East Central Railway, 4 people died and several injured after 21 coaches of the North East Express train derailed… pic.twitter.com/saoNhROl6w

ಪರ್ಯಾಯ ಮಾರ್ಗ: ಪುಣೆ-ದಾನಪುರ್ ಎಸ್‌ಎಫ್ ಎಕ್ಸ್‌ಪ್ರೆಸ್ (12149), ಪಾಟ್ಲಿಪುತ್ರ ಎಸ್‌ಎಫ್ ಎಕ್ಸ್‌ಪ್ರೆಸ್ (12141), ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ (12424), ವಿಕ್ರಮಶಿಲಾ ಎಕ್ಸ್‌ಪ್ರೆಸ್ (12368), ಕಾಮಾಖ್ಯ ಎಕ್ಸ್‌ಪ್ರೆಸ್ (15623), ಗುವಾಹಟಿ 3) , ರಾಜೇಂದ್ರ ನಗರ ಟರ್ಮಿನಲ್ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್ (12310), ಭಾಗಲ್ಪುರ್ ಗರೀಬ್ ರಥ ಎಕ್ಸ್‌ಪ್ರೆಸ್ (22406), Anvt Rdp ಎಕ್ಸ್‌ಪ್ರೆಸ್ (22488) ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಈ ಎಲ್ಲ ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಈಸ್ಟ್​ ಸೆಂಟ್ರಲ್​​ ರೈಲ್ವೆ ತಿಳಿಸಿದೆ.

ಇದನ್ನು ಓದಿ: ಉತ್ತರ ಪ್ರದೇಶದಲ್ಲಿ ರೈಲು ಅವಘಡ: ತಪ್ಪಿದ ಅನಾಹುತ

Last Updated : Oct 12, 2023, 7:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.