ಭುವನೇಶ್ವರ (ಒಡಿಶಾ): ಹಾವಿನ ವಿಷ ಕಳ್ಳಸಾಗಣೆ ದಂಧೆ ನಡೆಸುತ್ತಿದ್ದ ಓರ್ವ ಮಹಿಳೆ ಸೇರಿದಂತೆ 6 ಮಂದಿಯನ್ನ ಭುವನೇಶ್ವರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಅರಣ್ಯ ಅಧಿಕಾರಿ ಅಶೋಕ್ ಮಿಶ್ರಾ, ಆರೋಪಿಗಳಿಂದ ಬರ್ಗಢ್ ಪ್ರದೇಶದಿಂದ ಖರೀದಿಸಿದ 1 ಲೀಟರ್ ಹಾವಿನ ವಿಷ ಹಾಗೂ 5 ಮಿಲಿ ಲೀಟರ್‌ಗಳ ಐದು ಬಾಟಲ್ಗಳನ್ನು ವಶಪಡಿಸಿಕೊಂಡಿದ್ದೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೊತ್ತ 1 ಕೋಟಿ ರೂಪಾಯಿಯಾಗಿದೆ. ಒಂದು ಲೀಟರ್ ವಿಷವನ್ನು ಸಂಗ್ರಹಿಸಲು ಸುಮಾರು 200 ಕೋಬ್ರಾಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
ಈ ಪ್ರಕರಣದಲ್ಲಿ ಭಾಗಿಯಾದ ಆರು ಜನರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9, 39, 44, 49 ಮತ್ತು 51ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಓದಿ: ನಿಲ್ಲಿಸಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ: ಐವರು ಮಹಿಳೆಯರು ಸೇರಿ 8 ಯಾತ್ರಾರ್ಥಿಗಳು ದುರ್ಮರಣ