ನವದೆಹಲಿ: ಖ್ಯಾತ ಪಂಜಾಬಿ ಗಾಯಕ ಹನಿ ಸಿಂಗ್‌ಗೆ ಜೀವ ಬೆದರಿಕೆ ಕರೆ ಬಂದಿದೆ. ಕೆನಡಾದಲ್ಲಿರುವ ದರೋಡೆಕೋರ ಗೋಲ್ಡಿ ಬ್ರಾರ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಗೆ ಹನಿ ಸಿಂಗ್ ದೂರು ನೀಡಿದ್ದಾರೆ. ಇಡೀ ಕುಟುಂಬದ ಸುರಕ್ಷತೆಗಾಗಿ ಅವರು ಮನವಿ ಮಾಡಿದ್ದಾರೆ. ಸಂಪೂರ್ಣ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಗೋಲ್ಡಿ ಬ್ರಾರ್ ಹೆಸರಿನಲ್ಲಿ ಬರುತ್ತಿರುವ ಫೋನ್ ಬೆದರಿಕೆ ಕರೆಗಳ ಧ್ವನಿ ಮಾಹಿತಿಯನ್ನು ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಕನ ಹೇಳಿಕೆಯನ್ನು ಪರಿಶೀಲಿಸುವುದರ ಜೊತೆಗೆ, ದೆಹಲಿ ಪೊಲೀಸರ ವಿಶೇಷ ಸೆಲ್ ವಿಭಾಗವೂ ಬೆದರಿಕೆ ಕರೆಯ ಸಂಪೂರ್ಣ ವಿವರಗಳನ್ನು ಸಂಗ್ರಹಿಸುತ್ತಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹನಿ ಸಿಂಗ್, "ನನಗೆ ನಿರಂತರವಾಗಿ ಬೆದರಿಕೆ ಕರೆಗಳು ಮತ್ತು ಧ್ವನಿ ಸಂದೇಶಗಳು ಬರುತ್ತಿವೆ. ವಿದೇಶಿ ಸಂಖ್ಯೆಯಿಂದ ಕರೆಗಳು ಬಂದಿವೆ. ಇಂತಹ ಬೆದರಿಕೆ ಬಂದಿರುವುದು ಇದೇ ಮೊದಲು. ಸಾರ್ವಜನಿಕರು ನನ್ನ ಮೇಲೆ ಯಾವಾಗಲೂ ಪ್ರೀತಿ ತೋರುತ್ತಾರೆ. ಇಲ್ಲಿಯವರೆಗೆ ಯಾರಿಂದಲೂ ಬೆದರಿಕೆ ಕರೆಗಳು ಬಂದಿರಲಿಲ್ಲ" ಎಂದು ತಿಳಿಸಿದರು.
ಮುಸೇವಾಲಾ ಹತ್ಯೆ ಪ್ರಕರಣದಲ್ಲಿ ಗೋಲ್ಡಿ ಬ್ರಾರ್ ಹೆಸರು : ಜನಪ್ರಿಯ ಪಂಜಾಬಿ ಗಾಯಕ ಸಿಧು ಮುಸೇವಾಲಾ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೆಸರು ಮುಂಚೂಣಿಗೆ ಬಂದಿತ್ತು. ಮಾಧ್ಯಮ ವರದಿಗಳ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಅವರಂತಹ ಭಯಾನಕ ದರೋಡೆಕೋರರೊಂದಿಗೆ ಜತೆಗೆ ಗೋಲ್ಡಿ ಬ್ರಾರ್ ಅವರು ಸಿಧು ಮುಸೇವಾಲಾ ಹತ್ಯೆಗೆ ಸಂಚು ರೂಪಿಸಿದ್ದರು. ಈಗ ಅವರು ಕೆನಡಾದಲ್ಲಿ ಇದ್ದಾರೆ. ಅವರ ವಿರುದ್ಧ ಎನ್‌ಐಎ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಕೋಚಿಂಗ್ ತರಗತಿಗೆ ತೆರಳುತ್ತಿದ್ದ 20 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳು ಆಕೆಯನ್ನು ಹತ್ಯೆ ಮಾಡಿದ್ದಾರೆ. ಪ್ರಕರಣ ಮಂಗಳವಾರ ರಾಜಸ್ಥಾನದ ಬಿಕಾನೇರ್‌ನಲ್ಲಿ ಬೆಳಕಿಗೆ ಬಂದಿದ್ದು, ಖಜುವಾಲಾ ಪ್ರದೇಶದಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಐಜಿ) ಓಂ ಪ್ರಕಾಶ್ ತಿಳಿಸಿದ್ದಾರೆ.
ಯುವತಿಯ ತಂದೆ ಕಾಜುವಾಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮನೋಜ್ ಮತ್ತು ಭಾಗೀರಥ್ ಜೊತೆಗೆ ಮತ್ತೊಬ್ಬ ಯುವಕನ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಕುಟುಂಬಸ್ಥರು ಇತರ ಯುವಕರು ಭಾಗಿಯಾದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಭರವಸೆ ನೀಡಿದ್ದಾರೆ.
ಇದನ್ನೂಓದಿ: ಮದುವೆ ನಿರಾಕರಿಸಿದ ಸಾಫ್ಟ್‌ವೇರ್ ಇಂಜಿನಿಯರ್ ಕೊಲೆ ಯತ್ನ; ಕಿಡಿಗೇಡಿ ಯುವಕ ಸೆರೆ