ETV Bharat / bharat

ಖ್ಯಾತ ಗಾಯಕ, ಸಂಗೀತ ಸಂಯೋಜಕ ಬಪ್ಪಿ ಲಹಿರಿ ಇನ್ನಿಲ್ಲ - Singer-composer Bappi Lahiri

ಖ್ಯಾತ ಸಂಗೀತ ಸಂಯೋಜಕ, ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹಿರಿ ಮುಂಬೈನ ಆಸ್ಪತ್ರೆಯಲ್ಲಿ ಇಂದು ವಿಧಿವಶರಾದರು.

Singer-composer Bappi Lahiri dies in Mumbai hospital, says doctor
ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ವಿಧಿವಶ
author img

By

Published : Feb 16, 2022, 8:06 AM IST

Updated : Feb 16, 2022, 9:43 AM IST

ಮುಂಬೈ: 1980 ಮತ್ತು 90ರ ದಶಕಗಳಲ್ಲಿ ಭಾರತದಲ್ಲಿ ಡಿಸ್ಕೋ ಸಂಗೀತ ಜನಪ್ರಿಯಗೊಳಿಸಿದ್ದ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಹಿರಿ (69) ಆರೋಗ್ಯ ಸಮಸ್ಯೆಗಳಿಂದ ಇಂದು ವಿಧಿವಶರಾಗಿದ್ದಾರೆ.

ಮುಂಬೈನ ಜುಹುವಿನಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬಪ್ಪಿ ಲಹಿರಿ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು.

ಮನೆಗೆ ತೆರಳಿದ ನಂತರ ಮಂಗಳವಾರ ಮತ್ತೆ ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಪ್ಪಿ ಲಹಿರಿ ಓಎಸ್​ಎ (OSA- Obstructive Sleep Apnea) ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ದೀಪಕ್ ನಾಮಜೋಶಿ ಪಿಟಿಐಗೆ ತಿಳಿಸಿದ್ದಾರೆ.

ಚಲ್ತೆ ಚಲ್ತೇ, ಡಿಸ್ಕೋ ಡ್ಯಾನ್ಸರ್ ಮತ್ತು ಶರಾಬಿಯಂತಹ ಹಲವಾರು ಹಾಡುಗಳನ್ನು ಬಾಲಿವುಡ್‌ಗೆ ನೀಡಿ ಬಪ್ಪಿ ಲಹರಿ ಹೆಸರುವಾಸಿಯಾಗಿದ್ದರು. ಇವರ ಕೊನೆಯ ಹಾಡು 2020ರ ಬಾಘಿ-3 ಚಿತ್ರದ್ದಾಗಿತ್ತು.

ಏನಿದು ಒಎಸ್​ಎ?: ಒಎಸ್​ಎ (ಅಬ್ಸ್​ಟ್ರಕ್ಟಿವ್ ಸ್ಲೀಪ್​ ಅಪ್ನಿಯಾ) ಎಂಬುದು ಉಸಿರಾಟದ ತೊಂದರೆಯಾಗಿದೆ. ವ್ಯಕ್ತಿಗೆ ಬಾಯಿ ಅಥವಾ ಮೂಗಿನಿಂದ ಉಸಿರಾಡಬಹುದು. ಬಾಯಿ ಅಥವಾ ಮೂಗಿನಿಂದ ಉಸಿರಾಡಿದಾಗ ಒಳಗೆ ಎಳೆದುಕೊಳ್ಳುವ ಗಾಳಿ ಒಂದೇ ಕೊಳವೆಯ ಮೂಲಕ ಶ್ವಾಸಕೋಶಗಳಿಗೆ ತಲುಪುತ್ತದೆ.

ಆದರೆ ಒಎಸ್​ಎ ಎಂಬ ಅನಾರೋಗ್ಯಕ್ಕೆ ಈಡಾಗುವ ವ್ಯಕ್ತಿಗಳು ಮಲಗಿದ್ದಾಗ, ಅವರ ನಾಲಿಗೆಯ ಒಳಭಾಗ, ಆ ಉಸಿರುಕೊಳವೆಗೆ ಅಡ್ಡಿಯಾಗಿ, ಉಸಿರಾಡಲು ಅಸಾಧ್ಯವಾಗುತ್ತದೆ. ಆ ವ್ಯಕ್ತಿಗಳು ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪುತ್ತಾರೆ. ಬಪ್ಪಿ ಲಹಿರಿ ಅವರೂ ಒಎಸ್​ಎಗೆ ತುತ್ತಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ: ಬಪ್ಪಿ ಲಹಿರಿ ಅವರ ಸಂಗೀತವು ಎಲ್ಲವನ್ನೂ ಒಳಗೊಳ್ಳುತ್ತದೆ. ವೈವಿಧ್ಯಮಯ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತದೆ. ತಲೆಮಾರುಗಳಾದ್ಯಂತ ಜನರು ಅವರ ಸಂಗೀತವನ್ನು ಆಸ್ವಾದಿಸುತ್ತಾರೆ. ಬಪ್ಪಿ ಲಹಿರಿ ಅವರ ಲವಲವಿಕೆಯ ಸ್ವಭಾವವನ್ನು ನಾವು ಕಳೆದುಕೊಳ್ಳುತ್ತಿದ್ದಾರೆ. ಅವರ ನಿಧನದಿಂದ ದುಃಖವಾಗಿದೆ. ಅವರ ನಿಧನಕ್ಕೆ ನನ್ನ ಸಂತಾಪ.. ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

  • Shri Bappi Lahiri Ji’s music was all encompassing, beautifully expressing diverse emotions. People across generations could relate to his works. His lively nature will be missed by everyone. Saddened by his demise. Condolences to his family and admirers. Om Shanti. pic.twitter.com/fLjjrTZ8Jq

    — Narendra Modi (@narendramodi) February 16, 2022 " class="align-text-top noRightClick twitterSection" data=" ">

1. ಚಿನ್ನದ ಮೇಲೆ ಬಪ್ಪಿ ಅವರಿಗೆ ಭಾರಿ ಒಲವು: ಬಪ್ಪಿ ಲಹಿರಿ ಸಾಮಾನ್ಯವಾಗಿ ತಮ್ಮ ಮೈಮೇಲೆಲ್ಲಾ ಹೇರಳವಾಗಿ ಚಿನ್ನ ಧರಿಸುತ್ತಾರೆ. ಇದಕ್ಕೆ ಸಂದರ್ಶವೊಂದರಲ್ಲಿ ಕಾರಣ ತಿಳಿಸಿದ ಅವರು, ಅಮೆರಿಕದ ಪಾಪ್ ಸಿಂಗರ್ ಎಲ್ವಿಸ್ ಪ್ರಿಸ್ಲೆ ಕೆಲವೊಂದು ಕಾನ್ಸರ್ಟ್​ಗಳಲ್ಲಿ ಅಪಾರ ಪ್ರಮಾಣದ ಚಿನ್ನ ಧರಿಸುತ್ತಾರೆ. ಅವರಿಂದ ನಾನು ಪ್ರಭಾವಿತನಾದೆ ಎಂದಿದ್ದರು.

ಇದರ ಜೊತೆಗೆ ನಾನು ಯಶಸ್ವಿ ವ್ಯಕ್ತಿಯಾಗಿದ್ದು, ನನ್ನದೇ ಆದ ಇಮೇಜ್ ಸೃಷ್ಟಿಸಿಕೊಳ್ಳಬೇಕು. ಆದ್ದರಿಂದ ನಾನು ಚಿನ್ನವನ್ನು ಹೆಚ್ಚಾಗಿ ಧರಿಸುತ್ತೇನೆ. ಚಿನ್ನವನ್ನು ಧರಿಸುವುದು ನನಗೆ ಅದೃಷ್ಟದ ಸಂಕೇತ ಎಂದು ಅವರು ಹೇಳಿಕೊಂಡಿದ್ದರು.

2. ಚುನಾವಣೆಗೆ ಸ್ಪರ್ಧಿಸಿದ್ದ ಬಪ್ಪಿ: 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಶ್ರೀರಾಮಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಪ್ಪಿ ಪರಾಭವಗೊಂಡಿದ್ದರು. ನಾಮಪತ್ರ ಸಲ್ಲಿಕೆ ವೇಳೆ ತನ್ನ ಬಳಿ 754 ಗ್ರಾಂ ಚಿನ್ನ ಮತ್ತು 4.62 ಕೆಜಿ ಬೆಳ್ಳಿ ಇದೆ ಎಂದು ಹೇಳಿಕೊಂಡಿದ್ದರು. ಈಗ ಅವರ ಬಳಿ ಎಷ್ಟು ಚಿನ್ನವಿದೆ ಎಂಬುದು ಅಧಿಕೃತವಾಗಿ ತಿಳಿದಿಲ್ಲ. ಬಪ್ಪಿ ಅವರ ಒಟ್ಟು ಆಸ್ತಿ 20 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ಬಪ್ಪಿ ಲಹಿರಿ

3. ಕನ್ನಡದಲ್ಲೂ ಹಾಡಿದ ಬಪ್ಪಿ: ಕೇವಲ ಬಾಲಿವುಡ್ ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು, ಬೆಂಗಾಲಿ, ಗುಜರಾತಿ ಭಾಷೆಯ ಸಿನಿಮಾಗಳಲ್ಲೂ ಬಪ್ಪಿ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಆಫ್ರಿಕಾದಲ್ಲಿ ಶೀಲ, ಕೃಷ್ಣ ನೀ ಬೇಗನೇ ಬಾರೋ, ಪೊಲೀಸ್ ಮತ್ತು ದಾದಾ, ಗುರು ಮತ್ತು 2014ರಲ್ಲಿ ತೆರೆಕಂಡ ಲವ್ ಇನ್ ಮಂಡ್ಯ ಚಿತ್ರದಲ್ಲೂ ಬಪ್ಪಿ ಲಹಿರಿ ಹಾಡಿರುವ ಹಾಡುಗಳಿವೆ.

ಇದನ್ನೂ ಓದಿ: ಶಾಯರಿ ಲೋಕದ ತಾರೆ ಮಿರ್ಜಾ ಗಾಲಿಬ್ ಸಮಾಧಿ ಶಿಥಿಲ

Last Updated : Feb 16, 2022, 9:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.