ETV Bharat / bharat

ದ್ವೇಷವು ದೇಶವನ್ನು ದುರ್ಬಲಗೊಳಿಸುತ್ತದೆ, ಸಮಾಜವನ್ನು ವಿಭಜಿಸುತ್ತದೆ: ರಾಹುಲ್​ ಗಾಂಧಿ

ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಮಾಜವನ್ನು ವಿಭಜಿಸುವಲ್ಲಿ ತೊಡಗಿವೆ. ಉದ್ದೇಶಪೂರ್ವಕವಾಗಿ ದೇಶದಲ್ಲಿ ದ್ವೇಷ ಮತ್ತು ಭಯವನ್ನು ಸೃಷ್ಟಿಸುತ್ತಿವೆ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

since-bjp-came-into-power-hate-and-fear-on-rise-in-india-rahul
ದ್ವೇಷವು ದೇಶವನ್ನು ದುರ್ಬಲಗೊಳಿಸುತ್ತದೆ, ಸಮಾಜವನ್ನು ವಿಭಜಿಸುತ್ತದೆ: ರಾಹುಲ್​ ಗಾಂಧಿ
author img

By

Published : Sep 4, 2022, 7:26 PM IST

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಭಯ, ಹಿಂಸಾಚಾರ ಮತ್ತು ದ್ವೇಷ ಹೆಚ್ಚಾಗಿದೆ. ದೇಶದ ಸ್ಥಿತಿಗತಿ ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದ್ದಾರೆ.

ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ 'ಮೆಹಂಗೈ ಪರ್ ಹಲ್ಲಾ ಬೋಲ್' ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ದ್ವೇಷವು ಭಯದ ಅವತಾರದಲ್ಲಿದೆ. ಯಾವುದನ್ನಾದರೂ ಕಂಡು ಭಯಪಡುವವರಲ್ಲಿ ದ್ವೇಷವು ರೂಪುಗೊಳ್ಳುತ್ತದೆ. ಭಯಪಡದವರಿಗೆ ದ್ವೇಷದ ಭಾವನೆ ಇರುವುದಿಲ್ಲ. ಅಲ್ಲದೇ, ಆ ಭಯದ ಪ್ರಕಾರಗಳನ್ನೂ ವಿವರಿಸಿರುವ ರಾಹುಲ್​, ಭವಿಷ್ಯದ ಭಯ, ಬೆಲೆ ಏರಿಕೆಯ ಭಯ ಮತ್ತು ನಿರುದ್ಯೋಗದ ಭಯ ಎಂದು ಬಿಜೆಪಿಯನ್ನು ಗುರಿಯಾಗಿಸಿ ಹರಿಹಾಯ್ದಿದ್ದಾರೆ.

ದ್ವೇಷವು ಸಮಾಜವನ್ನು ವಿಭಜಿಸುತ್ತದೆ ಹಾಗೂ ದೇಶವನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಮಾಜವನ್ನು ವಿಭಜಿಸುವಲ್ಲಿ ತೊಡಗಿವೆ. ಉದ್ದೇಶಪೂರ್ವಕವಾಗಿ ದೇಶದಲ್ಲಿ ದ್ವೇಷ ಮತ್ತು ಭಯವನ್ನು ಸೃಷ್ಟಿಸುತ್ತಿವೆ. ಕೇಸರಿ ಪಕ್ಷ ಅಧಿಕಾರಕ್ಕೆ ಬಂದ 8 ವರ್ಷಗಳಲ್ಲಿ ರೈತರು, ದಲಿತರು, ಬಡವರು, ಸಣ್ಣ ಕೈಗಾರಿಕೆಗಳು, ಕೂಲಿಕಾರ್ಮಿಕರಿಗೆ ಏನೂ ಸಿಕ್ಕಿಲ್ಲ. ಇಬ್ಬರು ಕೈಗಾರಿಕೋದ್ಯಮಿಗಳಿಗೆ ಮಾತ್ರ ಎಲ್ಲ ಅನುಕೂಲ ಸಿಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದ್ವೇಷದ ಭಾವನೆ ಬಿಜೆಪಿಗೆ ಲಾಭ: ಮಾಧ್ಯಮಗಳು ಕೇವಲ ಇಬ್ಬರು ಕೈಗಾರಿಕೋದ್ಯಮಿಗಳಿಗೆ ಸೇರಿವೆ. ಅವರು ಇಷ್ಟಪಡುವದನ್ನೇ ತೋರಿಸುತ್ತಾರೆ ಎಂದು ಆರೋಪಿಸಿರುವ ರಾಹುಲ್​ ಗಾಂಧಿ, ಮಾಧ್ಯಮಗಳು ದೇಶವನ್ನು ಹೆದರಿಸುತ್ತಿವೆ. ದೇಶವಾಸಿಗಳಲ್ಲಿ ದ್ವೇಷದ ಭಾವನೆಯನ್ನು ಉಂಟು ಮಾಡುತ್ತಿವೆ. ಇದು ಬಿಜೆಪಿಗೆ ಲಾಭವನ್ನು ತಂದು ಕೊಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡಿದ ರಾಹುಲ್​, ಮಾಧ್ಯಮಗಳು ನಮ್ಮ ಮಾತನ್ನು ಕೇಳುವುದಿಲ್ಲ, ಸಂಸತ್ತಿನಲ್ಲಿಯೂ ಯಾವುದೇ ವಿಷಯಗಳ ಬಗ್ಗೆ ಮಾತನಾಡಲು ನಮಗೆ ಅವಕಾಶವಿಲ್ಲ, ಆದ್ದರಿಂದ ನಾವು ನೇರವಾಗಿ ಸಾರ್ವಜನಿಕರ ನಡುವೆ ಸಂಪರ್ಕ ಸಾಧಿಸಲು ನಮಗೆ ಒಂದೇ ಒಂದು ಆಯ್ಕೆಯಾಗಿದೆ. ಕಾಂಗ್ರೆಸ್ ಪಕ್ಷವು ಯಾವಾಗಲೂ ದೇಶದ ನಾಗರಿಕರೊಂದಿಗೆ ನಿಂತಿದೆ ಮತ್ತು ಅವರ ಧ್ವನಿಯನ್ನು ಎತ್ತಿದೆ. ಇಂದು ರಾಷ್ಟ್ರವನ್ನು ಆಳುವ ನಿರಂಕುಶ ಶಕ್ತಿಗಳನ್ನು ಸೋಲಿಸುವವರೆಗೂ ಅದನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.

ಅಲ್ಲದೇ, ಎಲ್ಲ ಸಂಸ್ಥೆಗಳು ಒತ್ತಡಕ್ಕೆ ಸಿಲುಕಿರುವುದರಿಂದ ಪ್ರತಿಪಕ್ಷಗಳಿಗೆ ಜನರ ಬಳಿಗೆ ಹೋಗದೆ ಬೇರೆ ದಾರಿಯಿಲ್ಲ. ನೇರವಾಗಿ ಜನರ ಬಳಿಗೆ ಹೋಗಿ ಸರ್ಕಾರದ ನಿಜ ಬಣ್ಣವನ್ನು ಹೇಳುತ್ತೇವೆ. ಈ ಹಿಂದೆ ನಮ್ಮ ಯುಪಿಎ ಸರ್ಕಾರ 27 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿತ್ತು. ಆದರೆ, ಈಗಿನ ಸರ್ಕಾರ ಬಡವರನ್ನು ಮತ್ತೆ ಬಡತನಕ್ಕೆ ತಳ್ಳಿದೆ ಎಂದು ಹೇಳಿದರು.

ಕಾರ್ಪೊರೇಟ್‌ಗಳಿಗೆ ಅಚ್ಛೇ ದಿನ್: ಮೋದಿ ಸರ್ಕಾರ ಕಾರ್ಪೊರೇಟ್‌ಗಳು ಮತ್ತು ಅವರ ಸ್ನೇಹಿತರಿಗಾಗಿ ಕೆಲಸ ಮಾಡುತ್ತಿದೆ. ಅವರಿಗೆ ಮಾತ್ರವೇ ಅಚ್ಛೇ ದಿನ್ ಬಂದಿದೆ. ಸಾಮಾನ್ಯ ಜನರಿಗಾಗಿ ಅಚ್ಛೇ ದಿನ್ ಅಲ್ಲ. ಮೊಸರು, ಹಾಲು, ಮಜ್ಜಿಗೆ ಮತ್ತು ಎಲ್ಲ ಪ್ರಮುಖ ಖಾದ್ಯ ವಸ್ತುಗಳಿಗೂ ಜಿಎಸ್‌ಟಿ ಹೇರಲಾಗಿದೆ ಎಂದು ರಾಹುಲ್ ಕಿಡಿಕಾರಿದರು.

ದೇಶವು ಇಂದು ಆರ್ಥಿಕ ಮತ್ತು ಇತರ ರಂಗಗಳಲ್ಲಿ ಯಾವ ಸಮಸ್ಯೆ ಎದುರಿಸುತ್ತಿದೆ. ಇದರ ಶ್ರೇಯಸ್ಸು ಬೇಜವಾಬ್ದಾರಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಆದರೆ, ನಾವು ನಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ. ನಾವು ದೇಶದ ಬಡ ಮತ್ತು ವಂಚಿತ ಜನರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು ಅವರ ಧ್ವನಿಯಾಗುತ್ತೇವೆ ಎಂದು ಪುನರುಚ್ಛರಿಸಿದರು.

ಇದನ್ನೂ ಓದಿ: ಗುಜರಾತ್​ ಯೂತ್ ಕಾಂಗ್ರೆಸ್ ಅಧ್ಯಕ್ಷ ವಘೇಲಾ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.