ETV Bharat / bharat

ಸಿಲ್ಕ್ಯಾರಾ ಸುರಂಗ ಅವಘಡ: ತುಂಡಾದ ಯಂತ್ರ ತೆರವಿಗೆ ಪ್ಲಾಸ್ಮಾ ಕಟ್ಟರ್ ಆಗಮನ - ಸುರಂಗದ ಅವಶೇಷ

Silcara tunnel accident update: ಸಿಲ್ಕ್ಯಾರಾ ಸುರಂಗದಡಿ ಸಿಲುಕಿದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Silkyara Tunnel collapse: Plasma cutter flown in to remove auger blades from rubble

author img

By PTI

Published : Nov 26, 2023, 2:08 PM IST

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದ ಅವಶೇಷಗಳಡಿ ಸಿಲುಕಿರುವ ಆಗರ್ ಯಂತ್ರದ ಭಾಗಗಳನ್ನು ಕತ್ತರಿಸಿ ಹೊರತೆಗೆಯಲು ಹೈದರಾಬಾದ್‌ನಿಂದ ಪ್ಲಾಸ್ಮಾ ಕಟ್ಟರ್ ಅನ್ನು ಭಾನುವಾರ ಇಲ್ಲಿಗೆ ತರಿಸಲಾಗಿದೆ. ರಕ್ಷಣಾ ಕಾರ್ಯವನ್ನು ಪುನರಾರಂಭಿಸಲು ಆಗರ್ ಯಂತ್ರವನ್ನು ಸಂಪೂರ್ಣವಾಗಿ ಹೊರತೆಗೆಯುವುದು ಅಗತ್ಯವಾಗಿದೆ. ಆಗರ್ ಯಂತ್ರ ಹೊರತೆಗೆದರೆ ಮಾತ್ರ ಮ್ಯಾನುವಲ್ ಆಗಿ ಪೈಪ್​ಗಳನ್ನು ಅವಶೇಷಗಳಡಿ ತೂರಿಸಿ ರಕ್ಷಣಾ ಮಾರ್ಗ ಸಿದ್ಧಪಡಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಲ್ಕ್ಯಾರಾ ಸುರಂಗದ ಅವಶೇಷಗಳಡಿ ಕಳೆದ 14 ದಿನಗಳಿಂದ 41 ಕಾರ್ಮಿಕರು ಸಿಲುಕಿದ್ದು, ಇವರನ್ನು ಹೊರತರಲು ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, "ಹೈದರಾಬಾದ್​ನಿಂದ ತರಲಾದ ಪ್ಲಾಸ್ಮಾ ಯಂತ್ರ ಇಂದು ಬೆಳಿಗ್ಗೆಯಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಕತ್ತರಿಸುವಿಕೆ ವೇಗವಾಗಿ ನಡೆಯುತ್ತಿದೆ. ಇನ್ನೂ 14 ಮೀಟರ್ ದೂರ ಕೊರೆಯಬೇಕಿದೆ" ಎಂದು ಹೇಳಿದರು. ಒಂದು ಡ್ರಿಲ್ ಯಂತ್ರವನ್ನು ಸಹ ಬೆಟ್ಟದ ಮೇಲೆ ನಿಯೋಜಿಸಲಾಗಿದ್ದು, ಇದು ಸುರಂಗದೊಳಗೆ ಲಂಬವಾಗಿ ರಂಧ್ರ ಕೊರೆಯಲಿದೆ. ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಎಂಜಿನಿಯರ್ಸ್​ನ ಮದ್ರಾಸ್ ಸ್ಯಾಪ್ಪರ್ಸ್​ ಘಟಕವು ಭಾನುವಾರ ಸ್ಥಳಕ್ಕೆ ಆಗಮಿಸಿದೆ.

ಕುಸಿದ ಸಿಲ್ಕ್ಯಾರಾ ಸುರಂಗದ ಅವಶೇಷಗಳ ಮಧ್ಯೆ ಕೊರೆಯುತ್ತಿದ್ದ ಆಗರ್ ಯಂತ್ರದ ಬ್ಲೇಡ್​ಗಳು ಶುಕ್ರವಾರ ರಾತ್ರಿ ಅವಶೇಷಗಳಲ್ಲಿ ಸಿಲುಕಿಕೊಂಡಿವೆ. ಹೀಗಾಗಿ ರಕ್ಷಣಾ ಮಾರ್ಗ ಕೊರೆಯುವ ಪರ್ಯಾಯ ವಿಧಾನಗಳ ಬಗ್ಗೆ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಉಳಿದ 10 ಅಥವಾ 12 ಮೀಟರ್ ಉದ್ದದಷ್ಟು ಹಸ್ತಚಾಲಿತವಾಗಿ ಕೊರೆಯುವಿಕೆ ಅಥವಾ ಮೇಲಿನಿಂದ 86 ಮೀಟರ್ ಕೆಳಗೆ ರಂಧ್ರ ಕೊರೆಯುವಿಕೆ ಹೀಗೆ ಎರಡು ಪರ್ಯಾಯ ರಕ್ಷಣಾ ವಿಧಾನಗಳತ್ತ ಈಗ ಗಮನಹರಿಸಲಾಗಿದೆ.

ಉತ್ತರಾಖಂಡದ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಂದು ಭಾಗ ಕುಸಿದ ನಂತರ ನವೆಂಬರ್ 12ರಂದು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಕಾರ್ಮಿಕರು ಸುರಂಗದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದಾರೆ. ಆರು ಇಂಚು ಅಗಲದ ಪೈಪ್ ಮೂಲಕ ಅವರಿಗೆ ಆಹಾರ, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಇಲ್ಲಿಯವರೆಗೆ 46 ಮೀಟರ್ (151 ಅಡಿ) ಮಾರ್ಗ ಕೊರೆಯಲಾಗಿದ್ದು, ಕಾರ್ಮಿಕರನ್ನು ರಕ್ಷಿಸಲು ಇನ್ನೂ 12 ಮೀಟರ್ (40 ಅಡಿ) ವರೆಗೆ ಅಗೆಯಬೇಕಾಗಿದೆ. ಸಿಕ್ಕಿಬಿದ್ದ ಕಾರ್ಮಿಕರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರಾಗಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆಯನ್ನು ಸಮರ್ಥವಾಗಿ ಹತ್ತಿಕ್ಕಲಾಗಿದೆ: ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.