ETV Bharat / bharat

ಸಿಧು ಮೂಸೆವಾಲಾ ಪೋಷಕರಿಂದ ಅಮಿತ್ ಶಾ ಭೇಟಿ? - Union Home Minister Amit Shah

ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಪೋಷಕರು ಇಂದು ಚಂಡೀಗಢದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗ್ತಿದೆ.

Sidhu Moosewala parents may meet Union Home Minister
ಸಿಧು ಮೂಸೆವಾಲಾ ಪೋಷಕರಿಂದ ಅಮಿತ್ ಶಾ ಭೇಟಿ
author img

By

Published : Jun 4, 2022, 10:42 AM IST

ಚಂಡೀಗಢ(ಪಂಜಾಬ್​): ಪಂಜಾಬ್ ಗಾಯಕ ಸಿಧು ಮುಸೇವಾಲಾ ಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಧು ಮುಸೇವಾಲಾ ಅಭಿಮಾನಿಗಳು ಹಾಗೂ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಭಗವಂತ್ ಮಾನ್ ಸಿಧು ಕುಟುಂಬದವರನ್ನು ಭೇಟಿ ಮಾಡಿದರು ಮತ್ತು ಹಂತಕರ ಪತ್ತೆಗೆ 15 ದಿನಗಳ ಕಾಲಾವಕಾಶವನ್ನು ಕೇಳಿದ್ದಾರೆ.

ಅಮಿತ್ ಶಾ ಭೇಟಿ ಸಾಧ್ಯತೆ: ಸಿಧು ಮುಸೇವಾಲಾ ಅವರ ತಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಸಿದ್ದು ಮೂಸೆವಾಲ ಪೋಷಕರಿಗೆ ಆಹ್ವಾನ ನೀಡಲಾಗಿದೆ. ಆದರೆ, ಈ ಬಗ್ಗೆ ಸಿದ್ದು ಮೂಸೆವಾಲಾ ಕುಟುಂಬಸ್ಥರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗುರುವಾರ, ಸಿದ್ದು ಮೂಸೆವಾಲಾ ಅವರ ತಂದೆ ಅಮಿತ್ ಶಾ ಅವರಿಗೆ ಪತ್ರ ಬರೆದು ತಮ್ಮ ಮಗನ ಹತ್ಯೆಯ ಬಗ್ಗೆ ಕೇಂದ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಕೇಂದ್ರ ಸಚಿವ ಅಮಿತ್ ಶಾ ಇಂದು ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ನಾಲ್ಕನೇ ಆವೃತ್ತಿಯನ್ನು ಉದ್ಘಾಟಿಸಲು ಚಂಡೀಗಢದ ಪಂಚಕುಲಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಅಮಿತ್ ಶಾ ಅವರು ಸಿಧು ಮುಸೆವಾಲಾ ಅವರ ತಂದೆಯೊಂದಿಗೆ ಸಭೆ ನಡೆಸಬಹುದು ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಗುಂಡಿಟ್ಟು ಪಂಜಾಬಿ ಗಾಯಕನ ಬರ್ಬರ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.