ETV Bharat / bharat

ಪಂಜಾಬ್‌ ಕೈ ಅಧ್ಯಕ್ಷರಾಗುತ್ತಿದ್ದಂತೆ ನವಜೋತ್‌ ಸಿಂಗ್‌ ಸಿಧು ಗುರಿ 'ಜೀತೇಗ ಪಂಜಾಬ್‌' ಮಿಷನ್‌ - ರಾಹುಲ್‌ ಗಾಂಧಿ

ಕಾಂಗ್ರೆಸ್‌ ಹೈಕಮಾಂಡ್‌ ಅಳೆದು ತೂಗಿ ನವಜೋತ್‌ ಸಿಂಗ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷರನ್ನಾಗಿ ಘೋಷಿಸಿದೆ. ಕಳೆದ ಹಲವು ದಿನಗಳಿಂದ ನಡೆದಿದ್ದ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಸಿಧು ನಡುವೆ ಮುಸುಕಿನ ಗುದ್ದಾಟ ಈಗ ಅಂತ್ಯವಾಗಿದೆ. ಇದೀಗ ಪಿಪಿಸಿಪಿ ಅಧ್ಯಕ್ಷರಾಗಿರುವ ಸಿಧು ಮುಂದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಮತ್ತೆ ಅಧಿಕಾರಕ್ಕೆ ತರುವುದು ಸೇರಿದಂತೆ ಹಲವು ಸವಾಲುಗಳು ಇವೆ. ಅದಕ್ಕಾಗಿಯೇ ಅವರು ಜೀತೇಗ ಪಂಜಾಬ್‌ ಮಿಷನ್‌ ಜಪಿಸುತ್ತಿದ್ದಾರೆ.

Sidhu makes his first remarks as PCC chief; says will give power back to people
ಪಂಜಾಬ್‌ ಕೈ ಅಧ್ಯಕ್ಷರಾಗುತ್ತಿದ್ದಂತೆ ನವಜೋತ್‌ ಸಿಂಗ್‌ ಸಿಧು ಗುರಿ 'ಜೀತೇಗ ಪಂಜಾಬ್‌' ಮಿಷನ್‌
author img

By

Published : Jul 19, 2021, 4:49 PM IST

Updated : Jul 19, 2021, 4:54 PM IST

ಹೈದರಾಬಾದ್‌: ಪಂಜಾಬ್‌ ಕಾಂಗ್ರೆಸ್‌ನಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಕೊನೆಗೂ ಬ್ರೇಕ್‌ ಬಿದ್ದಂತಾಗಿದೆ. ಡಿಸಿಎಂ ಅಥವಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಬೇಕು, ಇಲ್ಲದಿಂದ್ರೆ ಎಎಪಿ ಕದ ತಟ್ಟಲು ಮುಂದಾಗಿರುವುದಾಗಿ ಹೇಳಿದ್ದ ಕೈ ನಾಯಕ ನವಜೋತ್‌ ಸಿಂಗ್‌ ಸಿಧು ಅವರ ಬೇಡಿಕೆಗೆ ಕಾಂಗ್ರೆಸ್ ಹೈಕಮಾಂಡ್‌ ಮಣಿದಿದೆ.

ಸಿಎಂ ಅಮರೀಂದರ್‌ ಸಿಂಗ್‌ ವಿರುದ್ಧ ಅಸಮಾಧಾನಗೊಂಡಿದ್ದ ನವಜೋತ್‌ ಸಿಂಗ್‌ ಸಿಧುರನ್ನು ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷರನ್ನಾಗಿ 'ಕೈ' ಕಮಾಂಡ್‌ ಘೋಷಿಸಿದೆ. ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಮಹತ್ತರವಾದ ಜವಾಬ್ದಾರಿ ಸಿಧು ಅವರ ಹೆಗಲೇರಿದಂತಾಗಿದೆ.

ನವಜೋತ್‌ ಸಿಂಗ್‌ ಸಿಧು ಅವರ ಮುಂದೆ ಹಲವಾರು ಸವಾಲುಗಳಿದ್ದು, 'ಜೀತೇಗ ಪಂಜಾಬ್‌' ಮಿಷನ್‌ ಮಂತ್ರ ಜಪ ಆರಂಭಿಸಿದ್ದು, ಜನರ ಸಬಲೀಕರಣದ ಬಗ್ಗೆ ಮಾತುಗಳನ್ನಾಡಿದ್ದಾರೆ.

ಇದೇ ಮೊದಲ ಬಾರಿಗೆ ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಗ್ರ ಸ್ಥಾನಕ್ಕೇರಿರುವ ಕ್ರಿಕೆಟರ್‌ ಕಂ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು, ಕಾಂಗ್ರೆಸ್‌ ಹೈಕಮಾಂಡ್‌ಗೆ ಟ್ವೀಟ್‌ ಮೂಲಕ ಧನ್ಯವಾದ ಹೇಳಿದ್ದು, ರಾಜ್ಯದಲ್ಲಿ ಜನರು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂಬ ಆಶ್ವಾಸನೆಯನ್ನು ತಮ್ಮ ನಾಯಕರಿಗೆ ನೀಡಿದ್ದಾರೆ.

  • Will work along every member of Congress family in Punjab to fulfil the mission of #JittegaPunjab as a humble Congress worker to Give Power of the People Back to the People through the #PunjabModel & High Command’s 18 Point Agenda ... My Journey has just begun !!

    — Navjot Singh Sidhu (@sherryontopp) July 19, 2021 " class="align-text-top noRightClick twitterSection" data=" ">

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಗಾಂಧಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ಮಹತ್ತರವಾದ ಜವಾಬ್ದಾರಿಯನ್ನು ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಅಭಾರಿಯಾಗಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

  • Today, to work further for the same dream & strengthen the invincible fort of @INCIndia, Punjab. I am grateful to Hon’ble Congress President Sonia Gandhi Ji, Shri @RahulGandhi Ji & Smt @priyankagandhi Ji for bestowing their faith in me & giving me this pivotal responsibility 🙏🏼

ಪಂಜಾಬ್‌ ಕಾಂಗ್ರೆಸ್ ಕುಟುಂಬದ ಎಲ್ಲಾ ಸದಸ್ಯರನ್ನು ಒಟ್ಟಾಗಿ ಕೊಂಡೊಯ್ಯುವ ಮೂಲಕ 'ಜೀತೇಗ ಪಂಜಾಬ್‌' ಮಿಷನ್‌ ಅವನ್ನು ಸಾಕಾರಗೊಳಿಸುತ್ತೇವೆ. ಹೈಕಮಾಂಡ್‌ನ 18 ಅಂಶಗಳ ಅಜೆಂಡಾ ಮತ್ತು ಪಂಜಾಬ್‌ ಮಾದರಿಗೆ ನಮ್ಮ ಕಾರ್ಯಕರ್ತರು ಹಾಗೂ ಜನರು ಮತ್ತೊಮ್ಮೆ ಅಧಿಕಾರ ನೀಡುತ್ತಾರೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಗೆಹರಿಯದ ಪಂಜಾಬ್‌ 'ಕೈ' ಬಿಕ್ಕಟ್ಟು: ಮತ್ತೆ ಸೋನಿಯಾ ಭೇಟಿ ಮಾಡಿದ ಸಿಧು

ಕಳೆದ ಹಲವು ತಿಂಗಳುಗಳಿಂದ ಪಂಜಾಬ್‌ ಕಾಂಗ್ರೆಸ್‌ ರಾಜಕೀಯ ಗುದ್ದಾಟ ಮುಕ್ತಾಯವಾಗಿದ್ದು, ನಿನ್ನೆ ಸಂಜೆ ಕಾಂಗ್ರೆಸ್‌ ಹೈಕಮಾಂಡ್‌ ಸಿಧು ಅವರನ್ನು ಪಂಜಾಬ್‌ನಲ್ಲಿ ತನ್ನ ಪಕ್ಷದ ಮುಖ್ಯಸ್ಥರೆಂದು ಘೋಷಿಸಿದೆ. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಸಿಧು ಪರಸ್ಪರ ಜಗಳವಾಡುತ್ತಿದ್ದರೂ, ಗಾಂಧಿ ಕುಟುಂಬ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಕೆಲವು ದಿನಗಳ ಹಿಂದಷ್ಟೇ ಸಿಧು ಹೇಳಿದ್ದರು.

Last Updated : Jul 19, 2021, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.