ಸಿಧಿ/ಮಧ್ಯಪ್ರದೇಶ: ಸಿಧಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆ ಮತ್ತಿಬ್ಬರ ಶವಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು, ಎಲ್ಲಾ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿನ್ನೆ ಬೆಳಗ್ಗೆ 58 ಪ್ರಯಾಣಿಕರಿದ್ದ ಬಸ್ ಸಿಧಿಯಿಂದ ಸತ್ನಾಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬನ್ಸಾಗರ್ ಕಾಲುವೆಗೆ ಬಸ್ ಉರುಳಿ ಬಿದ್ದಿತ್ತು. ಕಾಲುವೆಯಲ್ಲಿ ಹೆಚ್ಚು ನೀರಿದ್ದ ಕಾರಣ ಹಾಗೂ ನೀರಿನ ಹರಿವಿನ ವೇಗ ಸಹ ಹೆಚ್ಚಾಗಿದ್ದ ಕಾರಣ ಪ್ರಯಾಣಿಕರು ಬಸ್ ಒಳಗಿಂದ ಹೊರಬರಲಾಗದೇ ಮೃತಪಟ್ಟಿದ್ದಾರೆ.
ಮೃತರಿಗೆ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿವೆ.
ಇದನ್ನೂ ಓದಿ:ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಬೆಳಗಾವಿಯಲ್ಲಿ ಆರೋಪಿ ಬಂಧನ