ETV Bharat / bharat

Video: ಕೆರೆಗೆ ಹಾರಿ ಮೃತದೇಹ ಹೊರತಂದ ಸಬ್​ ಇನ್ಸ್​ಪೆಕ್ಟರ್​ - Andhra Pradesh crime news

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಸಬ್​​​ ಇನ್ಸ್​ಪೆಕ್ಟರ್ ಒಬ್ಬರು ಕೆರೆಗೆ ಹಾರಿ ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ.

SI jumped into the lake bring out dead body
ಕೆರೆಗೆ ಹಾರಿ ಮೃತದೇಹ ಹೊರತಂದ ಸಬ್​ ಇನ್ಸ್​ಪೆಕ್ಟರ್​
author img

By

Published : Aug 5, 2021, 5:38 PM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಧೈರ್ಯವಂತ ಸಬ್​​​​ಇನ್ಸ್​ಪೆಕ್ಟರ್ ಒಬ್ಬರು ಕೆರೆಗೆ ಹಾರಿ ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತಂದಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

ವಿಶಾಖಪಟ್ಟಣಂನ ಮಾಡುಗುಲಾದಲ್ಲಿರುವ ಕೆರೆಯೊಂದರಲ್ಲಿ ಮಂಗಳವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಆದರೆ, ಯಾರೊಬ್ಬರೂ ಕೂಡ ಕೆರೆಗೆ ಜಿಗಿದು ಶವವನ್ನು ಹೊರತೆಗೆಯುವ ಸಾಹಸಕ್ಕೆ ಕೈ ಹಾಕಲಿಲ್ಲ. ಈ ವೇಳೆ ಸಬ್​ ಇನ್ಸ್​ಪೆಕ್ಟರ್ ಪಿ.ರಾಮರಾವ್ ಕೆರೆಗೆ ಹಾರಿ ಮೃತದೇಹವನ್ನು ದಡದವರೆಗೆ ಎಳೆದು ತಂದಿದ್ದಾರೆ.

ಕೆರೆಗೆ ಹಾರಿ ಮೃತದೇಹ ಹೊರತಂದ ಸಬ್​ ಇನ್ಸ್​ಪೆಕ್ಟರ್​

ರಾಮರಾವ್ ಅವರಿಗೆ ಮತ್ತೊಬ್ಬ ಸಬ್​​​ಇನ್ಸ್​ಪೆಕ್ಟರ್ ರಾಮಕೃಷ್ಣ ಹಾಗೂ ಕಾನ್ಸ್​​ಟೇಬಲ್ ವೆಂಕಟರಾವ್ ಸಹಕರಿಸಿದ್ದಾರೆ. ರಾಮ ರಾವ್​ರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಅಪರಿಚಿತ ವ್ಯಕ್ತಿಯ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.