ETV Bharat / bharat

ಸರ್ವಿಸ್ ರಿವಾಲ್ವರ್​ನಿಂದ ಗುಂಡಿಕ್ಕಿ ಸಬ್​​ಇನ್ಸ್​​ಪೆಕ್ಟರ್​ ಆತ್ಮಹತ್ಯೆ

author img

By

Published : May 13, 2022, 8:54 PM IST

ಕರ್ತವ್ಯನಿರತ ಪೊಲೀಸ್​ ಸಬ್​ ಇನ್ಸ್​​ಪೆಕ್ಟರ್​ ಒಬ್ಬರು ಸರ್ವಿಸ್ ರಿವಾಲ್ವರ್​​​ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

SI committed suicide by shooting his service revolver

ಕಾಕಿನಾಡ(ಆಂಧ್ರಪ್ರದೇಶ): ಇಲ್ಲಿನ ಕಾಕಿನಾಡ ಜಿಲ್ಲೆಯ ಸರ್ಪಾವರಂನ ಸಬ್​​ಇನ್ಸ್​​ಪೆಕ್ಟರ್​ ಗೋಪಾಲಕೃಷ್ಣ ಸರ್ವಿಸ್​ ರಿವಾಲ್ವರ್​​ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಸಂಚಲನ ಮೂಡಿಸಿದೆ. 2014ರಲ್ಲಿ ಎಸ್​​​ಐ ಆಗಿ ಆಯ್ಕೆಯಾಗಿದ್ದ ಇವರು ಸದ್ಯ ಪೂರ್ವ ಗೋದಾವರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಸರ್ವಿಸ್ ರಿವಾಲ್ವರ್​ನಿಂದ ಗುಂಡಿಕ್ಕಿ ಸಬ್​​ಇನ್ಸ್​​ಪೆಕ್ಟರ್​ ಆತ್ಮಹತ್ಯೆ

2021ರ ಆಗಸ್ಟ್​ನಿಂದ ಕಾಕಿನಾಡ ಜಿಲ್ಲೆಯ ಸರ್ಪವರಂ ಪೊಲೀಸ್ ಠಾಣೆಯಲ್ಲಿ ಎಸ್​​ಐ ಆಗಿ ಸೇವೆ ಸಲ್ಲಿಸುತ್ತಿದ್ದು, ಕುಟುಂಬದೊಂದಿಗೆ ನಾಗಮಲ್ಲಿತೋಟ ಜಂಕ್ಷನ್​​​ನಲ್ಲಿ ವಾಸವಾಗಿದ್ದರು. ನಿನ್ನೆ ಮುಖ್ಯಮಂತ್ರಿ ಬಂದೋಬಸ್ತ್​ ಕರ್ತವ್ಯಕ್ಕೆ ತೆರಳಿ, ವಾಪಸ್​ ಆಗಿದ್ದರು. ಬೆಳಗ್ಗೆ 5 ಗಂಟೆಗೆ ಸರ್ವಿಸ್​ ರಿವಾಲ್ವರ್​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತೊಂದು ಕೋಣೆಯಲ್ಲಿ ಮಲಗಿದ್ದರು.

ಲಭ್ಯವಾಗಿರುವ ಮಾಹಿತಿ ಪ್ರಕಾರ ಕರ್ತವ್ಯದಲ್ಲಿನ ಒತ್ತಡದಿಂದಾಗಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಇದರ ಮಧ್ಯೆ ಗುಂಡು ತಪ್ಪಾಗಿ ಹಾರಿ ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್​​.ಪಿ. ರವೀಂದ್ರನಾಥ್​ ಆಗಮಿಸಿ, ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಮಂಡ್ಯದಲ್ಲಿ ಸನ್ನಿ​ ಹುಟ್ಟುಹಬ್ಬ.. ರಕ್ತದಾನ ಶಿಬಿರ, ಭರ್ಜರಿ ಬಾಡೂಟ ಹಂಚಿದ ಅಭಿಮಾನಿಗಳು!

ಘಟನೆಗೆ ಸಂಬಂಧಿಸಿದಂತೆ ಗೋಪಾಲಕೃಷ್ಣ ಪತ್ನಿ ನೀಡಿರುವ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಎಲ್ಲ ರೀತಿಯಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಕಾಕಿನಾಡು ಡಿಎಸ್ಪಿ ಭೀಮಾರಾವ್​ ತಿಳಿಸಿದ್ದಾರೆ. ಎಸ್​​ಐ ನಿಧನದಿಂದ ಕುಟುಂಬ ಹಾಗೂ ಹೂಟ್ಟೂರಾದ ನವಾಬಪೇಟೆ ಶೋಕ ಸಾಗರದಲ್ಲಿ ಮುಳುಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.