ಪಣಜಿ: ಉತ್ತರ ಕನ್ನಡದ ಅಂಕೋಲಾ ಬಳಿ ಅಪಘಾತಕ್ಕಿಡಾಗಿರುವ ಕೇಂದ್ರ ಆಯುಷ್ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಸದ್ಯ ಗೋವಾದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗೋವಾ ಸಿಎಂ ಹೇಳಿಕೆ ನೀಡಿದ್ದಾರೆ.
ಸಚಿವರ ಆರೋಗ್ಯ ವಿಚಾರಣೆಗೆ ತೆರಳಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಗೋವಾ ವೈದ್ಯಕೀಯ ಕಾಲೇಜ್ನ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ. ಸದ್ಯ ದೆಹಲಿ ಏಮ್ಸ್ ವೈದ್ಯರ ತಂಡ ಗೋವಾಗೆ ಬರುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಅವರನ್ನ ದೆಹಲಿಗೆ ರವಾನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
-
Met with the team of doctors at Goa Medical College where RRM Shri Shripad Naik is undergoing treatment for injuries due to road accident. They have spoken to Director, Delhi AIIMS and a team will come to Goa for consultation. If needed, he might be taken to Delhi for treatment. pic.twitter.com/WaBnLpsIcb
— Rajnath Singh (@rajnathsingh) January 12, 2021 " class="align-text-top noRightClick twitterSection" data="
">Met with the team of doctors at Goa Medical College where RRM Shri Shripad Naik is undergoing treatment for injuries due to road accident. They have spoken to Director, Delhi AIIMS and a team will come to Goa for consultation. If needed, he might be taken to Delhi for treatment. pic.twitter.com/WaBnLpsIcb
— Rajnath Singh (@rajnathsingh) January 12, 2021Met with the team of doctors at Goa Medical College where RRM Shri Shripad Naik is undergoing treatment for injuries due to road accident. They have spoken to Director, Delhi AIIMS and a team will come to Goa for consultation. If needed, he might be taken to Delhi for treatment. pic.twitter.com/WaBnLpsIcb
— Rajnath Singh (@rajnathsingh) January 12, 2021
ಗೋವಾಗೆ ತೆರಳಿ ಕೇಂದ್ರ ಆಯುಷ್ ಸಚಿವರ ಆರೋಗ್ಯದ ಮಾಹಿತಿ ಪಡೆದುಕೊಂಡ ಬಳಿಕ ಅಲ್ಲಿನ ವೈದ್ಯರೊಂದಿಗೆ ತುರ್ತು ಸಭೆ ನಡೆಸಿದರು. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ತೆರಳುತ್ತಿದ್ದ ವೇಳೆ ಕಾರು ಉತ್ತರ ಕನ್ನಡದ ಹೊಸಕಂಬಿ ಬಳಿ ಪಲ್ಟಿಯಾಗಿತ್ತು. ಈ ವೇಳೆ ಸಚಿವರ ಪತ್ನಿ ವಿಜಯಾ ನಾಯಕ್ ಹಾಗೂ ಆಪ್ತ ಕಾರ್ಯದರ್ಶಿ ದೀಪಕ್ ಗುಮೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು.
ಓದಿ: ಅಪಾಯದಿಂದ ಪಾರಾದ ಕೇಂದ್ರ ಸಚಿವ ಶ್ರೀಪಾದ್ ನಾಯಕ್, ಆರೋಗ್ಯ ವಿಚಾರಿಸಲು ಗೋವಾಕ್ಕೆ ಬರಲಿರುವ ರಕ್ಷಣಾ ಸಚಿವ