ETV Bharat / bharat

ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣ.. ಮುಂಬೈನ ಸಮುದ್ರಕ್ಕೆ ಮೊಬೈಲ್​ ಎಸೆದ ಆರೋಪಿ ಅಫ್ತಾಬ್​? - ಅಫ್ತಾಬ್ ಪೂನಾವಾಲಾ

ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್​​ ಪೂನಾವಾಲಾ ಸಾಕ್ಷ್ಯ ನಾಶ ಹಿನ್ನೆಲೆಯಲ್ಲಿ ಮೊಬೈಲ್​ ಅನ್ನು ಮುಂಬೈ ಸಮೀಪದ ಸಮುದ್ರಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಮುಂಬೈನ ಸಮುದ್ರ
ಮುಂಬೈನ ಸಮುದ್ರ
author img

By

Published : Nov 24, 2022, 8:37 PM IST

ಮುಂಬೈ (ಮಹಾರಾಷ್ಟ್ರ): ದೆಹಲಿಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ವಾಲ್ಕರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೆ ಹೊಸ ಹೊಸ ಸಂಗತಿಗಳು ಹೊರ ಬೀಳುತ್ತಿವೆ. ಇದೀಗ ಆರೋಪಿ, ಗೆಳೆಯ ಅಫ್ತಾಬ್​ ಪೂನಾವಾಲಾ ಶ್ರದ್ಧಾಳ ಮೊಬೈಲ್​ ಅನ್ನು ಮಹಾರಾಷ್ಟ್ರದ ಮುಂಬೈ ಸಮೀಪದ ಭಾಯಂದರ್​ ಕೊಲ್ಲಿಯಲ್ಲಿ ಎಸೆದಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಈ ಹಿನ್ನೆಲೆ ದೆಹಲಿ ಪೊಲೀಸರ ತಂಡ ಗುರುವಾರ ಮುಂಬೈ ಸಮೀಪದ ಭಾಯಂದರ್ ಕೊಲ್ಲಿಯಲ್ಲಿ ಮೊಬೈಲ್ ಫೋನ್‌ಗಾಗಿ ಹುಡುಕಾಟ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ ದೆಹಲಿ ಪೊಲೀಸ್​ ತಂಡವು ಮುಂಬೈ ಬಳಿಯ ವಸಾಯಿ ಪ್ರದೇಶದಲ್ಲಿ ಮೊಕ್ಕಾಂ ಹೂಡಿದೆ.

ಮುಂಬೈನ ಸಮುದ್ರದಲ್ಲಿ ಶ್ರದ್ಧಾ ವಾಲ್ಕರ್ ಮೊಬೈಲ್ ಹುಡುಕುತ್ತಿರುವ ದೆಹಲಿ ಪೊಲೀಸರ ತಂಡ

ಶ್ರದ್ಧಾ ವಾಲ್ಕರಳನ್ನು ಆಕೆಯ ಸ್ನೇಹಿತ ಅಫ್ತಾಬ್ ಪೂನಾವಾಲಾ 35 ತುಂಡುಗಳಾಗಿ ಕತ್ತರಿಸಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಂದ ದಿನದಿಂದಲೂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೀಗ ಆರೋಪಿಯು ಸಾಕ್ಷ್ಯ ನಾಶ ಮಾಡಿರುವ ಹಿನ್ನೆಲೆಯಲ್ಲಿ ಮೊಬೈಲ್​ ಅನ್ನು ಸಮುದ್ರಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಇದೇ ವೇಳೆ ಆರೋಪಿ ಅಫ್ತಾಬ್​ ಪೂನಾವಾಲಾನ ಸ್ನೇಹಿತರು, ಸಂಬಂಧಿಕರು ಮತ್ತು ಬಾಡಿಗೆಗೆ ನೀಡಿದ್ದ ಫ್ಲ್ಯಾಟ್‌ಗಳ ಮಾಲೀಕರ ಹೇಳಿಕೆಗಳನ್ನು ಸಹ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಓದಿ: ಶ್ರದ್ಧಾ ವಾಲ್ಕರ್​ ಅಫ್ತಾಬ್​ ಮಾದಕ ವ್ಯಸನಿಯಾಗಿದ್ದ ಎಂದು ಹೇಳಿದ್ದಳು: ನಟ ಇಮ್ರಾನ್ ನಜೀರ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.