ETV Bharat / bharat

ಶ್ರದ್ಧಾ ಹತ್ಯೆ ಪ್ರಕರಣ: ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನ 14 ದಿನಗಳವರೆಗೆ ವಿಸ್ತರಿಸಿದ ಕೋರ್ಟ್​​ - ಈಟಿವಿ ಭಾರತ ಕನ್ನಡ

ಪ್ರಸ್ತುತ ತಿಹಾರ್​ ಜೈಲಿನಲ್ಲಿರುವ ಆರೋಪಿ ಅಫ್ತಾಬ್​ನನ್ನು ಸಾಕೇತ್​​ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರುಪಡಿಸಲಾಯಿತು.

shraddha-murder-case-court-extends-aaftab-judicial-custody-for-14-days
ಶ್ರದ್ಧಾ ಹತ್ಯೆ ಪ್ರಕರಣ: ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿದ ನ್ಯಾಯಾಲಯ
author img

By

Published : Dec 9, 2022, 2:04 PM IST

ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್​ ಅಮೀನ್​ ಪೂನಾವಾಲಾ ನ್ಯಾಯಾಂಗ ಬಂಧನವನ್ನು ಸಾಕೇತ್ ನ್ಯಾಯಾಲಯವು 14 ದಿನಗಳವರೆಗೆ ವಿಸ್ತರಿಸಿದೆ.

ಪ್ರಸ್ತುತ ತಿಹಾರ್​ ಜೈಲಿನಲ್ಲಿರುವ ಆರೋಪಿ ಅಫ್ತಾಬ್​ನನ್ನು ಸಾಕೇತ್​​ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರುಪಡಿಸಲಾಯಿತು. ಅಫ್ತಾಬ್​ ಪ್ರಕರಣದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಮತ್ತು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದನ್ನು ಮನಗಂಡ ಸಾಕೇತ್​ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.

ಪ್ರಕರಣದ ಹಿನ್ನೆಲೆ: ಅಫ್ತಾಬ್ ಮತ್ತು ಶ್ರದ್ಧಾ ವಾಕರ್​​ ಡೇಟಿಂಗ್ ಆ್ಯಪ್​ ಮೂಲಕ ಪರಿಚಯವಾದರು. ನಂತರ ಪ್ರೀತಿಸಿ, ಮುಂಬೈನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಳಿಕ ದೆಹಲಿಗೆ ವಲಸೆ ಹೋಗಿ ಅಲ್ಲಿ ನೆಲೆಸಿದ್ದರು. ಶ್ರದ್ಧಾ ತಂದೆ ನೀಡಿದ ನಾಪತ್ತೆ ದೂರಿನ ಮೇರೆಗೆ ಪೊಲೀಸರು ನವೆಂಬರ್ 10 ರಂದು ಎಫ್ಐಆರ್ ದಾಖಲಿಸಿದ್ದರು. ಅಲ್ಲದೇ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಪೊಲೀಸರು ಅಫ್ತಾಬ್​ನನ್ನು ಬಂಧಿಸಿದ್ದರು.

ಅಫ್ತಾಬ್​ ತನ್ನ ಗೆಳತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಮಾಡಿ, ತನ್ನ ಮನೆಯ ಪ್ರಿಡ್ಜ್​​ನಲ್ಲಿ ಇಟ್ಟು ರಾತ್ರಿ ವೇಳೆ ಅವುಗಳನ್ನು ನಗರದ ಹಲವು ಭಾಗಗಳಲ್ಲಿ ಎಸೆದು ಬರುತ್ತಿದ್ದ ಎಂಬ ಮಾಹಿತಿ ಹೊರಬಂದಿತ್ತು.

ಇದನ್ನೂ ಓದಿ:ಕೋಪದಲ್ಲಿ ಕತ್ತು ಹಿಸುಕಿ ಕೊಂದು 35 ಪೀಸ್​ ಮಾಡಿದೆ: ಕೋರ್ಟ್​ಗೆ ತಿಳಿಸಿದ ಶ್ರದ್ಧಾ ಹಂತಕ ಅಫ್ತಾಬ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.