ETV Bharat / bharat

ಶ್ರದ್ಧಾ ವಾಕರ್​ ಹತ್ಯೆ ಕೇಸ್​: ದೇಹ 35 ತುಂಡು ಮಾಡಿ, ಮೂಳೆ ಗ್ರೈಂಡರ್​ನಲ್ಲಿ ಪುಡಿ ಮಾಡಿದ್ದನಂತೆ ಅಫ್ತಾಬ್​ - Shraddha murder case charge sheet

ದೆಹಲಿಯ ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ- 35 ತುಂಡುಗಳನ್ನಾಗಿ ಮಾಡಿ ಶ್ರದ್ಧಾ ಕೊಲೆ- ಲಿವಿಂಗ್​ ಗೆಳತಿಯ ಹತ್ಯೆ ಮಾಡಿದ ಹಂತಕ- ಆರೋಪಿ ಅಫ್ತಾಬ್​ ಪೂನಾವಾಲಾ ತಪ್ಪೊಪ್ಪಿಗೆ ಹೇಳಿಕೆ- 6 ಸಾವಿರ ಪುಟಗಳ ಚಾರ್ಜ್​ಶೀಟ್​ ಕೋರ್ಟ್​ಗೆ ಸಲ್ಲಿಕೆ- ದೆಹಲಿ ಪೊಲೀಸರಿಂದ ಶ್ರದ್ಧಾ ಕೇಸ್​ ತನಿಖೆ

shraddha-murder-case
ಶ್ರದ್ಧಾ ವಾಕರ್​ ಹತ್ಯೆ ಕೇಸ್
author img

By

Published : Feb 8, 2023, 7:04 AM IST

ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್​ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಅಂಶ ಹೊರಬಿದ್ದಿದೆ. ಕತ್ತು ಹಿಸುಕಿ ಕೊಂದ ಬಳಿಕ ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಮೂಳೆಯನ್ನು ಗ್ರೈಂಡರ್​ ಮೂಲಕ ಪುಡಿ ಮಾಡಿದ್ದ. ಬಳಿಕ ತುಂಡುಗಳನ್ನು ಒಂದೊಂದಾಗಿ ಬಿಸಾಡಿ ಬರುತ್ತಿದ್ದ ಎಂಬುದು ಬಯಲಾಗಿದೆ.

ಪ್ರಕರಣದ ತನಿಖೆ ನಡೆಸಿದ ದೆಹಲಿ ಪೊಲೀಸರು ಸಾಕೇತ್​ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಈ ಅಂಶವಿದೆ. ಹಂತಕ ಅಫ್ತಾಬ್​ ಪೂನಾವಾಲಾ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಂತೆ, ಶ್ರದ್ಧಾಳನ್ನು ಕೊಂದು, ದೇಹವನ್ನು ಯಾವ ರೀತಿ ವಿಲೇವಾರಿ ಮಾಡಿದೆ ಎಂಬ ಬಗ್ಗೆ ಸಂಪೂರ್ಣವಾಗಿ ಬಾಯ್ಬಿಟ್ಟಿದ್ದಾನೆ.

ಚಾರ್ಜ್​​ಶೀಟ್​ನಲ್ಲಿದೆ ಭಯಾನಕ ಅಂಶಗಳು: ಕಳೆದ ವರ್ಷ ಮೇ 18 ರಂದು ಶ್ರದ್ಧಾಳನ್ನು ಕೊಂದ ನಂತರ ಪೂನಾವಾಲಾ ರಾತ್ರಿ ವೇಳೆ ಹಾರ್ಡ್​ವೇರ್​ ಅಂಗಡಿಗೆ ತೆರಳಿ ಹರಿತವಾದ ಆಯುಧವನ್ನು ಖರೀದಿಸಿದ್ದ. ಫ್ಲಾಟ್‌ಗೆ ಹಿಂತಿರುಗಿ ಶ್ರದ್ಧಾಳ ದೇಹವನ್ನು ಸ್ನಾನಗೃಹಕ್ಕೆ ಎಳೆದೊಯ್ದಿದ್ದಾನೆ. ಅಲ್ಲಿ ಹರಿತವಾದ ಆಯುಧದಿಂದ ಎರಡೂ ಕೈಗಳನ್ನು 3 ತುಂಡುಗಳು, ಕಾಲುಗಳನ್ನು ತಲಾ 3 ತುಂಡು, ತಲೆಯನ್ನು ಒಂದು ಭಾಗ, ತೊಡೆಯನ್ನು 2 ಭಾಗ ಸೇರಿದಂತೆ ಇಡೀ ದೇಹವನ್ನು 35 ತುಂಡುಗಳನ್ನಾಗಿ ಮಾಡಿದ್ದ.

ಕತ್ತರಿಸಿ ತುಂಡುಗಳನ್ನು ಮೊದಲು ಪಾಲಿಥಿನ್​ ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ಇರಿಸಿದ್ದ. ಇದರ ಬಳಿಕ ದೇಹ ದುರ್ವಾಸನೆ ಬೀರದಿರಲು, ಮರುದಿನ ಅಂದರೆ ಮೇ 19 ರಂದು 25 ಸಾವಿರ ರೂ. ನೀಡಿ ರೆಫ್ರಿಜರೇಟರ್ ಖರೀದಿಸಿದ್ದ. ತುಂಡರಿಸಿದ ದೇಹವನ್ನು ಅದರಲ್ಲಿಟ್ಟು ವಾಸನೆ ಬಾರದಂತೆ ನೋಡಿಕೊಂಡಿದ್ದ. ರಕ್ತದ ಕಲೆ ಮತ್ತು ವಾಸನೆಯನ್ನು ಶುಚಿಗೊಳಿಸಲು ಬ್ಲಿಂಕಿಟ್​ ಆ್ಯಪ್​ ಮೂಲಕ ಟಾಯ್ಲೆಟ್ ಕ್ಲೀನರ್, ಬ್ಲೀಚಿಂಗ್​, ಹ್ಯಾಂಡ್‌ವಾಶ್ ಮತ್ತು ಇತರ ವಸ್ತುಗಳನ್ನು ಖರೀದಿಸಿದ್ದ.

ಮೇ 19-20 ರ ಮಧ್ಯರಾತ್ರಿ 2 ಗಂಟೆಗೆ ದೇಹದ ತುಂಡೊಂದನ್ನು ಮೆಹ್ರೌಲಿ- ಗುರುಗ್ರಾಮ್ ರಸ್ತೆಯಲ್ಲಿರುವ ಚತ್ತರ್‌ಪುರ ಪಹಾರಿ ಕಾಡಿನಲ್ಲಿ ಬಿಸಾಡಿ ಬಂದಿದ್ದ. ಅದೇ ದಿನ ರಾತ್ರಿ ಜೊಮ್ಯಾಟೊ ಆ್ಯಪ್​ ಮೂಲಕ ಚಿಕನ್​ ರೋಲ್​ ತರಿಸಿಕೊಂಡು ತಿಂದಿದ್ದ. ಹತ್ಯೆ ಮಾಡಿದ ಮೂರು ದಿನಗಳ ಬಳಿಕ ಸಾಕಷ್ಟು ನೀರಿನ ಕ್ಯಾನ್​ಗಳನ್ನು ಆನ್​ಲೈನ್​ ಮೂಲಕ ತರಿಸಿಕೊಂಡಿದ್ದ ಎಂಬುದು ಚಾರ್ಜ್​ಶೀಟ್​ನಲ್ಲಿದೆ.

ಶ್ರದ್ಧಾ ಹತ್ಯೆ ಬಳಿಕ ಮತ್ತೊಂದು ಹುಡುಗಿಗೆ ಗಾಳ: ಶ್ರದ್ಧಾ ವಾಕರ್​ಳನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯೊಳಗೆ ಇಟ್ಟುಕೊಂಡಿದ್ದಾಗಲೇ ಡಬಲ್​ ಡೇಟಿಂಗ್​ ಆ್ಯಪ್​ ಮೂಲಕ ಮತ್ತೊಂದು ಹುಡುಗಿಯ ಜೊತೆಗೆ ಸಂಪರ್ಕ ಬೆಳೆಸಿಕೊಂಡಿದ್ದ. ಇದಲ್ಲದೇ, ಆ ಹುಡುಗಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಹೀಗೆ ಹಲವಾರು ಬಾರಿ ಅವರು ಮನೆಯಲ್ಲೇ ತಂಗಿದ್ದರು. ಹೊಸ ಹುಡುಗಿ ಬಂದಾಗ ಶ್ರದ್ಧಾ ದೇಹವನ್ನು ರೆಫ್ರಿಜರೇಟರ್​ನಿಂದ ಹೊರತೆಗೆದು ಅದನ್ನು ಅಡುಗೆ ಮನೆಯ ಕ್ಯಾಬಿನ್​ನಲ್ಲಿ ಇಟ್ಟು, ಹೋದ ಬಳಿಕ ಅದನ್ನು ಮತ್ತೆ ಫ್ರೀಜರ್​ ಒಳಗೆ ಇಡುತ್ತಿದ್ದ ಎಂದು ಹಂತಕ ಹೇಳಿಕೊಂಡಿದ್ದಾನೆ.

ಹತ್ಯೆ ಮಾಡಿದ್ದು, ಗೊತ್ತಾಗದಿರಲಿ ಎಂದು ಶ್ರದ್ಧಾಳ ಇನ್​ಸ್ಟಾಗ್ರಾಂ​ ಖಾತೆಯನ್ನು ತನ್ನ ಮೊಬೈಲ್​ ಮೂಲಕ ಬಳಸಿ, ಸ್ನೇಹಿತರೊಂದಿಗೆ ಚಾಟ್​ ಮಾಡುತ್ತಿದ್ದ. ಕೊಲೆ ಮಾಡಿದ ದಿನ ಅವಳ ಖಾತೆಯಿಂದ 55 ಸಾವಿರ ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಶ್ರದ್ಧಾಳ ಮೊಬೈಲ್​ ಅನ್ನು ಮುಂಬೈನಲ್ಲಿ ಎಸೆದು ಬಂದಿದ್ದ. ತನಿಖೆಯ ವೇಳೆ ಪೊಲೀಸರು ಶ್ರದ್ಧಾಳ ದೇಹದ 35 ತುಂಡುಗಳಲ್ಲಿ 20 ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಚಾರ್ಜ್​ಶೀಟ್ ಹೇಳುತ್ತದೆ.

ಪ್ರಕರಣ ತನಿಖೆ ನಡೆಸಿದ ದೆಹಲಿ ಪೊಲೀಸರು ಜನವರಿ 24 ರಂದು 6629 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಚಾರ್ಜ್​ಶೀಟ್ ಸ್ವೀಕರಿಸಿರುವ ಕೋರ್ಟ್​ ಪ್ರಕರಣವನ್ನು ಫೆಬ್ರವರಿ 21 ಕ್ಕೆ ಮುಂದೂಡಿದೆ.

ಓದಿ: ಇದು ಮೋದಿ-ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್​: ಸ್ಪೀಕರ್ ಎಚ್ಚರಿಕೆ ಹೀಗಿತ್ತು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.