ETV Bharat / bharat

ಶ್ರದ್ಧಾ ವಾಕರ್​ ಹತ್ಯೆ ಕೇಸ್: ಶೈಕ್ಷಣಿಕ ಪ್ರಮಾಣಪತ್ರ, ಸ್ಟೇಷನರಿ ಒದಗಿಸುವಂತೆ ಅಫ್ತಾಬ್ ಅರ್ಜಿ

ಶ್ರದ್ಧಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನಿಂದ ದೆಹಲಿ ನ್ಯಾಯಾಲಯಕ್ಕೆ ಅರ್ಜಿ- ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಲೇಖನ ಸಾಮಗ್ರಿಗಳು ಒದಗಿಸುವಂತೆ ಒತ್ತಾಯ - ಎರಡೂ ಅರ್ಜಿ ನ್ಯಾಯಾಲಯ ಶೀಘ್ರದಲ್ಲೇ ವಿಚಾರಣೆ

shraddha murder case
ಶ್ರದ್ಧಾ ವಾಕರ್​ ಹತ್ಯೆ ಕೇಸ್
author img

By

Published : Feb 13, 2023, 6:43 PM IST

ನವದೆಹಲಿ: ದೇಶಾದಂತ್ಯ ಚರ್ಚೆಗೆ ಕಾರಣವಾಗಿದ್ದ ಶ್ರದ್ಧಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ವಕೀಲರ ಮೂಲಕ ಸಾಕೇತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆರೋಪಿಯು ನ್ಯಾಯಾಲಯದಲ್ಲಿ ಎರಡು ಹೊಸ ಅರ್ಜಿಗಳನ್ನು ನೀಡಿದ್ದು, ಅದರಲ್ಲಿ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರವನ್ನು ಬಿಡುಗಡೆ ಮಾಡಲು ಮತ್ತು ಜೈಲಿನೊಳಗೆ ಸ್ಟೇಷನರಿ ಒದಗಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಇದಲ್ಲದೇ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್​ನ ಸ್ಪಷ್ಟ ಹಾರ್ಡ್ ಕಾಪಿ ಮತ್ತು ಸಾಫ್ಟ್ ಕಾಪಿಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ. ಕಳೆದ ಬಾರಿ ಚಾರ್ಜ್ ಶೀಟ್ ಸಲ್ಲಿಸುವಾಗ ಪೊಲೀಸರು ಸಾಫ್ಟ್ ಕಾಪಿಯಲ್ಲಿ ಲಭ್ಯವಾದ ಚಾರ್ಜ್ ಶೀಟ್ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ ಎಂದು ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ. ಇದಕ್ಕಾಗಿ ಇದೀಗ ಸ್ಪಷ್ಟ ಪ್ರತಿ ನೀಡುವಂತೆ ಆಗ್ರಹಿಸಿದ್ದಾರೆ. ಸಾಕೇತ್ ಕೋರ್ಟ್‌ನಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಅವರ ನ್ಯಾಯಾಲಯದಲ್ಲಿ ಎರಡೂ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಎರಡೂ ಅರ್ಜಿಗಳನ್ನು ನ್ಯಾಯಾಲಯ ಶೀಘ್ರದಲ್ಲೇ ವಿಚಾರಣೆ ನಡೆಸಲಿದೆ.

ಇದಕ್ಕೂ ಮುನ್ನ ಆರೋಪಿ ಅಫ್ತಾಬ್ ಜನವರಿ 6ರಂದು ಸಾಕೇತ್ ನ್ಯಾಯಾಲಯದಲ್ಲಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, ಮೊದಲ ಅರ್ಜಿಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಅದೇ ಸಮಯದಲ್ಲಿ, ಎರಡನೇ ಅರ್ಜಿಯ ಮೂಲಕ, ಪೂನಾವಾಲಾ ಜೈಲಿನೊಳಗೆ ಚಳಿಯಾಗುತ್ತಿದ್ದು, ಆರೋಪಿಯಲ್ಲಿ ಸಾಕಷ್ಟು ಬಟ್ಟೆಗಳಿಲ್ಲ ಎಂದು ಅಫ್ತಾಬ್ ಅಮೀನ್ ಪರ ವಕೀಲರು ಹೇಳಿದರು. ಈ ಕಾರಣಕ್ಕಾಗಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಿ ದಿನನಿತ್ಯದ ವಸ್ತುಗಳ ಜೊತೆಗೆ ಬೆಚ್ಚಗಿನ ಬಟ್ಟೆಗಳನ್ನು ಖರೀದಿಸಲು ಸಹಕರಿಸ ಬೇಕು ಎಂದು ಕೋರಿದ್ದರು.

ಫೆಬ್ರವರಿ 7 ರಂದು ಅಫ್ತಾಬ್ ಅಮೀನ್ ಪೂನಾವಾಲಾ ಪ್ರಕರಣದ 6,629 ಪುಟಗಳ ವಿಸ್ತೃತ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದರಲ್ಲಿ ಶ್ರದ್ಧಾಳ ಜೊತೆಗೆ ಲಿವ್​ ಇನ್​ ರಿಲೇಶನ್​ ಇದ್ದ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ವರ್ಷ ಮೇ ತಿಂಗಳಲ್ಲಿ ಆಕೆಯನ್ನು 35 ತುಂಡುಗಳನ್ನಾಗಿ ಕತ್ತರಿಸಿದ್ದ. ಸಾಕ್ಷ್ಯ ನಾಶ ಮಾಡಲು ಆಕೆ ಮೂಳೆನ್ನು ಗ್ರೈಂಡರ್​ನಲ್ಲಿ ಪುಡಿ ಮಾಡಿದ್ದ ಎಂಬ ವಿಚಾರ ಚಾರ್ಜ್​ ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಇಬ್ಬರ ನಡುವಿನ ಪ್ರೇಮ ಸಂಬಂಧ ಮತ್ತು ಗಲಾಟೆ ಮುಂತಾದ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಆರೋಪ ಸಲ್ಲಿಸಲಾಗಿದೆ.

ಪ್ರಕರಣ: ದೆಹಲಿಯ ಮೆಹ್ರಾಲಿ ಪ್ರದೇಶದಲ್ಲಿ 28 ವರ್ಷದ ಅಫ್ತಾಬ್ ಕಳೆದ ವರ್ಷ ಮೇ ತಿಂಗಳಲ್ಲಿ ಶ್ರದ್ಧಾಳನ್ನು ಕೊಲೆ ಮಾಡಿದ್ದ. ಶ್ರದ್ಧಾ ಅಫ್ತಾಬ್‌ನ ಜೊತೆಯಲ್ಲಿ ಲಿವ್ ಇನ್ ರ ರಿಲೇಶನ್​ ಶಿಫ್​ನಲ್ಲಿದ್ದಳು. ಪೂನಾವಲಾ ಶ್ರದ್ಧಾಳನ್ನು ಬರ್ಬರವಾಗಿ ಕೊಂದು ಅವರ ದೇಹವನ್ನು ಸುಮಾರು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ಮನೆಯಲ್ಲಿ ಫ್ರಿಡ್ಜ್‌ನಲ್ಲಿ ಈ ತುಂಡುಗಳನ್ನು ಇಟ್ಟುಕೊಂಡು ಹಲವಾರು ದಿನಗಳ ಕಾಲ ರಾಜಧಾನಿಯ ವಿವಿಧ ಭಾಗಗಳಲ್ಲಿ ಎಸೆದಿದ್ದ. ಮತ್ತೊಂದೆಡೆ, ಶ್ರದ್ಧಾ ಅವರ ತಂದೆ ವಿಕಾಸ್ ಅವರ ದೂರಿನ ಮೇರೆಗೆ ದೆಹಲಿ ಪೊಲೀಸರು ನವೆಂಬರ್ 10 ರಂದು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಇದರ ನಂತರ, ನವೆಂಬರ್ 12 ರಂದು ಈ ಪ್ರಕರಣದಲ್ಲಿ ಅಫ್ತಾಬ್​ನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಶ್ರದ್ಧಾ ವಾಕರ್​ ಹತ್ಯೆ ಕೇಸ್​: ದೇಹ 35 ತುಂಡು ಮಾಡಿ, ಮೂಳೆ ಗ್ರೈಂಡರ್​ನಲ್ಲಿ ಪುಡಿ ಮಾಡಿದ್ದನಂತೆ ಅಫ್ತಾಬ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.