ETV Bharat / bharat

ಶೋಪಿಯಾನ್​​ನಲ್ಲಿ ಬೆಳ್ಳಂಬೆಳಗ್ಗೆ ಎನ್​ಕೌಂಟರ್: ಓರ್ವ ಉಗ್ರ ಹತ - ಶೋಪಿಯಾನ್​​ನಲ್ಲಿ ಬೆಳ್ಳಂಬೆಳಗ್ಗೆ ಎನ್​ಕೌಂಟರ್

ಬೆಳ್ಳಂಬೆಳಗ್ಗೆ ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆ ಓರ್ವ ಉಗ್ರನ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ.

Shopian encounter
Shopian encounter
author img

By

Published : Apr 1, 2022, 9:23 AM IST

ಶೋಪಿಯಾನ್​(ಜಮ್ಮು): ಕಣಿವೆ ನಾಡು ಜಮ್ಮು-ಕಾಶ್ಮೀರದ ಶೋಪಿಯಾನ್‌​ನ ತುರ್ಕವಾಂಗಮ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಎನ್​ಕೌಂಟರ್ ನಡೆದಿದ್ದು, ಕಾರ್ಯಾಚರಣೆಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದಾನೆ. ದಕ್ಷಿಣ ಕಾಶ್ಮೀರದ ಶೋಪಿಯಾನ್​​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಿನ್ನೆ ರಾತ್ರಿಯಿಂದಲೂ ಗುಂಡಿನ ಚಕಮಕಿ ನಡೆಯುತ್ತಿದೆ.

ಎನ್​ಕೌಂಟರ್ ನಡೆಯುತ್ತಿರುವ ಕಾರಣ ಶೋಪಿಯಾನ್​ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್​ ಸೇವೆ ಸ್ಥಗಿತಗೊಳಿಸಲಾಗಿದ್ದು, ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿವೆ. ಅಡಗಿ ಕುಳಿತಿರುವ ಇತರೆ ಭಯೋತ್ಪಾದಕರಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕಣಿವೆನಾಡಿನ ವಿವಿಧ ಪ್ರದೇಶಗಳಲ್ಲಿ ಅವಿತು ಕುಳಿತಿರುವ ಉಗ್ರರು, ಸಿಆರ್​ಪಿಎಫ್​, ಪೊಲೀಸ್ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ.

ಬಾಂಬ್ ಎಸೆದ ಬುರ್ಖಾಧಾರಿ ಬಂಧನ: ಸೋಪೋರ್​​ದಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೋರ್ವಳು ಸಿಆರ್​​ಪಿಎಫ್​​ ಶಿಬಿರದ ಮೇಲೆ ಬಾಂಬ್ ಎಸೆದು ಪರಾರಿಯಾಗಿದ್ದ ಘಟನೆ ಮಾರ್ಚ್​ 30ರಂದು ನಡೆದಿತ್ತು. ಆಕೆಯ ಬಂಧನ ಮಾಡುವಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.