ETV Bharat / bharat

ನೋಡಿ! ವಯನಾಡು ಘಾಟ್​ನಲ್ಲಿ ಯಮನಂತೆ ಬಂದು ಬೈಕ್​​ಗೆ ಅಪ್ಪಳಿಸಿದ ಬಂಡೆ; ಸವಾರ ಸಾವು - boulder knocked the bike

ಬೈಕ್​ನಲ್ಲಿ ತೆರಳುತ್ತಿದ್ದಾಗ ಬಂಡೆಯೊಂದು ಯಮನಂತೆ ಬಂದು ಸವಾರರಿಗೆ ಅಪ್ಪಳಿಸಿತು. ಪರಿಣಾಮ, ಬಂಡೆ ಸಮೇತವಾಗಿ ಬೈಕ್​ ಹಾಗೂ ಇಬ್ಬರು ಸವಾರರು ಕಂದಕಕ್ಕೆ ಬಿದ್ದಿರುವ ಭಯಾನಕ ವಿಡಿಯೋ ಮತ್ತೊಬ್ಬ ಬೈಕರ್‌ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಯನಾಡು ಘಾಟ್​ನಲ್ಲಿ ಬೈಕ್​​ಗೆ ಅಪ್ಪಳಿಸಿದ ಬಂಡೆ

author img

By

Published : Apr 29, 2022, 7:11 PM IST

Updated : Apr 29, 2022, 10:45 PM IST

ಕೋಯಿಕ್ಕೋಡ್​​ (ಕೇರಳ): ಬೈಕ್​ ಮೇಲೆ ಹೋಗುತ್ತಿದ್ದಾಗ ಬಂಡೆಯೊಂದು ದಿಢೀರ್‌ ಅಪ್ಪಳಿಸಿ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಕೇರಳದ ವಯನಾಡು ಘಾಟ್​ನಲ್ಲಿ ನಡೆದಿದೆ. ಬೈಕ್​ಗೆ ಬಂಡೆ ಅಪ್ಪಳಿಸುವ ದೃಶ್ಯ ಮತ್ತೊಬ್ಬ ಬೈಕ್​ ಸವಾರನ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.

ಮಲಪ್ಪುರಂ ಜಿಲ್ಲೆಯ ವನ್ಡೂರ್​ನ ಅಭಿನವ್​ (20) ಮೃತ ಸವಾರ. ಬೈಕ್​ನಲ್ಲಿದ್ದ ಮತ್ತೋರ್ವ ಅನೀಶ್​​ ಎಂಬಾತ ಗಾಯಗೊಂಡಿದ್ದಾನೆ. ವಯನಾಡು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಬೈಕ್​ನಲ್ಲಿ ವೇಗವಾಗಿ ಹೋಗುತ್ತಿದ್ದಾಗ ತಿರುವಿನಲ್ಲಿ ಬೆಟ್ಟದಿಂದ ಬಂಡೆಕಲ್ಲು ಅಷ್ಟೇ ರಭಸವಾಗಿ ರಸ್ತೆಗುರುಳಿದೆ. ರಸ್ತೆ ಮೇಲೆ ಪುಟಿದು ಬೈಕ್​​ ಸವಾರನ ತಲೆಗೆ ಅಪ್ಪಳಿಸಿದೆ. ಇದರಿಂದ ಬಂಡೆಯೊಂದಿಗೆ ಬೈಕ್​ ಕೂಡ ಕಂದಕಕ್ಕೆ ಬಿತ್ತು.

ಏ.16ರಂದು ಈ ಘಟನೆ ನಡೆದಿದೆ. ಇದೇ ರಸ್ತೆಯನ್ನು ಸಾವಿರಾರು ಜನರು ಬಳಕೆ ಮಾಡುತ್ತಿದ್ದು, ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ವಿಷಯ ತಿಳಿದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಅನೀಶ್​​ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಯಾವುದಕ್ಕೂ ಕಡಿಮೆಯಲ್ಲ ಸ್ತ್ರೀ ಶಕ್ತಿ: 200 ಎಕರೆಯಲ್ಲಿ 800 ಮಹಿಳೆಯರ ಸಾಮೂಹಿಕ ಕೃ(ಖು)ಷಿ

Last Updated : Apr 29, 2022, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.