ETV Bharat / bharat

ಮೂಢನಂಬಿಕೆಯ ಪರಮಾವಧಿ..! ಋತುಮತಿಯಾದ ವಿದ್ಯಾರ್ಥಿನಿಯರಿಗೆ ಸಸಿ ನೆಡದಂತೆ ಶಿಕ್ಷಕಿಯ ತಾಕೀತು - Etv Bharat kannada

ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಅನೇಕ ರೀತಿಯ ಮೂಢನಂಬಿಕೆ ಜಾರಿಯಲ್ಲಿವೆ. ಸದ್ಯ ಅಂತಹದೊಂದು ಘಟನೆ ಬಾಲಕಿಯರ ಶಾಲೆಯಲ್ಲಿ ನಡೆದಿದೆ. ಇದರಿಂದ ವಿದ್ಯಾರ್ಥಿನಿಯರು ಶಾಕ್​ಗೊಳಗಾಗಿದ್ದಾರೆ.

Government Girls Ashram School
Government Girls Ashram School
author img

By

Published : Jul 25, 2022, 3:32 PM IST

ನಾಸಿಕ್(ಮಹಾರಾಷ್ಟ್ರ): ಭಾರತ ಒಂದೆಡೆ ಆಧುನಿಕ ತಂತ್ರಜ್ಞಾನದತ್ತ ಸಾಗುತ್ತಿದ್ದರೆ, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಮೂಢನಂಬಿಕೆ ಇಂದಿಗೂ ಜೀವಂತವಾಗಿದೆ. ಅಂತಹ ಘಟನೆವೊಂದು ಇದೀಗ ಮಹಾರಾಷ್ಟ್ರದ ನಾಶಿಕ್​​ನಲ್ಲಿ ನಡೆದಿದೆ. ಋತುಮತಿಯಾದ ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ಸಸಿ ನೆಡದಂತೆ ಶಿಕ್ಷಕಿಯೊಬ್ಬರು ಆದೇಶ ಹೊರಡಿರುವ ಘಟನೆ ನಡೆದಿದೆ. ಈ ಬಗ್ಗೆ ವಿದ್ಯಾರ್ಥಿನಿ ಈ ಟಿವಿ ಭಾರತದ ಮುಂದೆ ತಮ್ಮ ಅಳಲು ಹೇಳಿಕೊಂಡಿದ್ದಾರೆ.

ಈಟಿವಿ ಭಾರತ ಮುಂದೆ ಅಳಲು ಹೇಳಿಕೊಂಡ ವಿದ್ಯಾರ್ಥಿನಿ

ನಾಸಿಕ್​​ನ ತ್ರಯಂಬಕೇಶ್ವರ ತಾಲೂಕಿನ ದೇವಗಾಂವ್​​ನ ಸರ್ಕಾರಿ ಬಾಲಕಿಯ ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಳೆಯಾಗುತ್ತಿರುವ ಕಾರಣ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಶಿಕ್ಷಕಿ ಆರ್​​ಟಿ ದೇವರೆ ಭಾಗಿಯಾಗಿದ್ದರು. ಋತುಮತಿಯಾದ ವಿದ್ಯಾರ್ಥಿನಿಯರು ಸಸಿ ನೆಡಬಾರದು ಎಂಬ ವಿಚಿತ್ರ ಆದೇಶ ಹೊರಡಿಸಿದ್ದಾರೆ. ಶಿಕ್ಷಕಿಯ ಈ ಆದೇಶ ಕೇಳಿ ಕೆಲ ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದಾರೆ. ಜೊತೆಗೆ ಅವಮಾನಕ್ಕೊಳಗಾಗಿದ್ದಾರೆ.

ಇದನ್ನೂ ಓದಿರಿ: ಅಂಧತ್ವ ಮೆಟ್ಟಿ ನಿಂತ ಬಾಲೆ.. CBSE 12ನೇ ತರಗತಿಯಲ್ಲಿ 496 ಅಂಕಗಳಿಸಿ ದೇಶಕ್ಕೆ ಮೊದಲ ಸ್ಥಾನ

ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಜೊತೆ ಮಾತನಾಡಿರುವ ವಿದ್ಯಾರ್ಥಿನಿ, ಕಳೆದ ವರ್ಷ ಶಾಲಾ ಆವರಣದಲ್ಲಿ ಸಸಿ ನೆಟ್ಟಿದ್ದೆವು. ಆದರೆ, ಅವು ಬದುಕುಳಿದಿಲ್ಲ. ಹೀಗಾಗಿ, ಈ ವರ್ಷ ಮತ್ತೊಮ್ಮೆ ಸಸಿ ನೆಡಲಾಗ್ತಿದೆ. ಆದರೆ, ಶಿಕ್ಷಕಿ ಈ ರೀತಿಯಾಗಿ ಆದೇಶ ಹೊರಡಿಸಿದ್ದಾರೆ. ಒಂದೇ ಒಂದು ಸಸಿ ಸಹ ನೆಡಲು ಬಿಡಲಿಲ್ಲ ಎಂದು ಆರೋಪಿಸಿದ್ದಾರೆ. ಇನ್ನೂ 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡುವುದಾಗಿ ಶಿಕ್ಷಕಿ ಬೆದರಿಕೆ ಸಹ ಹಾಕಿದ್ದಾರೆಂದು ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.