ETV Bharat / bharat

ಹೈದರಾಬಾದ್​ ರೇಪ್​ ಕೇಸ್​: ಅಶ್ಲೀಲ ಚಿತ್ರ ನೋಡಿ ಬಾಲಕಿ ರೇಪ್​ ಮಾಡಿದ ಆರೋಪಿಗಳು - Hyderabad girl rape case

ಹೈದರಾಬಾದ್​ನ ಹಯಾತ್​ನಗರದಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ದಿಗ್ಭ್ರಮೆ ಉಂಟು ಮಾಡುವ ಸಂಗತಿಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಮೊಬೈಲ್​ನಲ್ಲಿ ಪೋರ್ನ್​ ವಿಡಿಯೋ ನೋಡಿ ಪ್ರೇರಿತರಾಗಿ ಸಹಪಾಠಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಗೊತ್ತಾಗಿದೆ.

Shocking facts on gangrape in Hyderabad
ಹೈದರಾಬಾದ್​ ರೇಪ್​ ಕೇಸ್
author img

By

Published : Dec 1, 2022, 5:03 PM IST

ಹೈದರಾಬಾದ್​: ಇಲ್ಲಿನ ಹಯಾತ್‌ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದ ಅಪ್ರಾಪ್ತೆಯ ಅತ್ಯಾಚಾರ ಕೇಸ್​ ತನಿಖೆಯಲ್ಲಿ ಹಲವು ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ. ಅಪ್ರಾಪ್ತ ಆರೋಪಿಗಳು ಅಶ್ಲೀಲ ವಿಡಿಯೋಗಳಿಗೆ ಮಾರುಹೋಗಿ ಅದನ್ನೇ ಪ್ರಯೋಗಿಸುವ ಸಲುವಾಗಿ ಬಾಲಕಿಯನ್ನು ರೇಪ್​ ಮಾಡಿರುವುದು ಗೊತ್ತಾಗಿದೆ.

ರೇಪ್​ಗಾಗಿ ನಡೆದಿತ್ತು ಪೂರ್ವ ಯೋಜನೆ: ಬಾಲಕಿಯನ್ನು ರೇಪ್​ ಮಾಡುವ ಯೋಜನೆಯ ಹಿಂದೆ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರಮುಖ ಆರೋಪಿಯ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಗೀಳು ಕಾರಣವಾಗಿತ್ತು. ತನ್ನಿಬ್ಬರು ಸಹಪಾಠಿಗಳಿಗೂ ಇದರ ಹುಚ್ಚು ಅಂಟಿಸಿದ್ದ ಆತ, ತನ್ನ ಮೊಬೈಲ್​ನಲ್ಲಿ ದಿನವೂ ನೀಲಿಚಿತ್ರಗಳನ್ನು ವೀಕ್ಷಿಸುತ್ತಿದ್ದ. ಬಳಿಕ ಅದನ್ನು ತನ್ನ ಗೆಳೆಯರಿಗೂ ತೋರಿಸುತ್ತಿದ್ದ.

ಪ್ರತಿದಿನ ಶಾಲೆ ಬಿಟ್ಟ ನಂತರ ನಿರ್ಜನ ಪ್ರದೇಶಗಳಿಗೆ ಹೋಗುತ್ತಿದ್ದ ಆರೋಪಿಗಳು, ಆ ರೀತಿಯ ವಿಡಿಯೋಗಳನ್ನು ನೋಡುತ್ತಿದ್ದರು. ಇದು ಹಲವು ತಿಂಗಳುಗಳ ಕಾಲ ನಡೆದಿದೆ. ಬಳಿಕ ಇದರಿಂದ ಪ್ರೇರೇಪಿತರಾಗಿ ವಿಡಿಯೋದಲ್ಲಿರುವಂತೆಯೇ ಪ್ರಯೋಗಿಸಬೇಕು ಎಂದು ನಿರ್ಧರಿಸಿ, ತನ್ನದೇ ಶಾಲೆಯ ಸಹಪಾಠಿ ಬಾಲಕಿಯನ್ನು ಆಯ್ದುಕೊಂಡಿದ್ದಾರೆ.

ಬಳಿಕ ಆರೋಪಿಗಳು ಯೋಜನೆ ರೂಪಿಸಿದ್ದಾರೆ. ಸಂತ್ರಸ್ತೆಯ ಜೊತೆಗೆ ಉತ್ತಮ ಸ್ನೇಹ ಸಂಪಾದಿಸಿ ಬಳಿಕ, ಮೊದಲೇ ನಿರ್ಧರಿಸಿದಂತೆ ಪುಸ್ತಕ ನೀಡುವ ನೆಪದಲ್ಲಿ ಆಕೆಯ ಮನೆಗೆ ತೆರಳಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅದರಲ್ಲಿ ಒಬ್ಬ ಈ ಎಲ್ಲಾ ಕೃತ್ಯವನ್ನು ವಿಡಿಯೋ ಮಾಡಿದ್ದಾನೆ ಎಂದು ತನಿಖೆಯಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ.

ಮಾನವ ಹಕ್ಕುಗಳ ಆಯೋಗ ಗರಂ: ಸೂಕ್ಷ್ಮ ಪ್ರಕರಣವಾದ ಅತ್ಯಾಚಾರ ಕೇಸ್​ ಬಗ್ಗೆ ಸಂತ್ರಸ್ತೆ ಓದುತ್ತಿರುವ ಶಾಲೆಯ ಚಿತ್ರ ಮತ್ತು ಆಕೆಯ ನಿವಾಸದ ಸ್ಥಳವನ್ನು ಮಾಧ್ಯಮಗಳು ಭಿತ್ತರಿಸಿದ ಬಗ್ಗೆ ಮಾನವ ಹಕ್ಕುಗಳ ಆಯೋಗ ಗರಂ ಆಗಿದೆ. ಕಾನೂನಿನ ಪ್ರಕಾರ ಅತ್ಯಾಚಾರಕ್ಕೆ ಒಳಗಾದವರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವುದು ನಿಷಿದ್ಧವಾಗಿದೆ. ಆದರೆ, ಕೆಲ ನಿಯತಕಾಲಿಕೆಗಳು ಮತ್ತು ಟಿವಿ ಮಾಧ್ಯಮಗಳು ಈ ನಿಯಮ ಮೀರಿದ್ದು ಕೋಪಕ್ಕೆ ಕಾರಣವಾಗಿದೆ. ಇದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಾನವ ಹಕ್ಕುಗಳ ಆಯೋಗ ಆದೇಶಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಓದಿ: ಅಗ್ನಿವೀರ್ ನೇಮಕಾತಿ: ಮಹಿಳಾ ಸೇನಾ ಪೊಲೀಸ್ ಭರ್ತಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.