ಮುಂಬೈ(ಮಹಾರಾಷ್ಟ್ರ): ನೂತನ ರಾಷ್ಟ್ರಪತಿ ಆಯ್ಕೆಗೋಸ್ಕರ ನಡೆಯುವ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಉದ್ಧವ್ ಠಾಕ್ರೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಮತ್ತಷ್ಟು ಬಲ ಬಂದಿದೆ. ಇದರ ಜೊತೆಗೆ ಶಿವಸೇನೆಯಲ್ಲಿ ಉಂಟಾಗಬಹುದಾಗಿದ್ದ ಮತ್ತೊಂದು ಬಂಡಾಯದ ಬೀಸಿ ಶಮನ ಮಾಡುವ ಕೆಲಸವನ್ನ ಮಾಜಿ ಮುಖ್ಯಮಂತ್ರಿ ಮಾಡಿದ್ದಾರೆ.
-
Shiv Sena will support Droupadi Murmu for Presidential elections: Shiv Sena chief Uddhav Thackeray pic.twitter.com/Y6LrGWdlVc
— ANI (@ANI) July 12, 2022 " class="align-text-top noRightClick twitterSection" data="
">Shiv Sena will support Droupadi Murmu for Presidential elections: Shiv Sena chief Uddhav Thackeray pic.twitter.com/Y6LrGWdlVc
— ANI (@ANI) July 12, 2022Shiv Sena will support Droupadi Murmu for Presidential elections: Shiv Sena chief Uddhav Thackeray pic.twitter.com/Y6LrGWdlVc
— ANI (@ANI) July 12, 2022
ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲೆ ಶಿವಸೇನೆಯ ಸಂಸದರು ಒತ್ತಡ ಹೇರಿದ್ದರು. ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಬಹುತೇಕ ಸಂಸದರು ಎನ್ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು ಎಂಬ ಸಲಹೆ ನೀಡಿದ್ದರು.
ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಈ ನಿರ್ಧಾರ ಹೊರಹಾಕಿದ್ದಾರೆ. ಮಾತೋಶ್ರೀಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಶಿವಸೇನೆಯ 16 ಸಂಸದರು ಭಾಗಿಯಾಗಿದ್ದರು. ಇವರೆಲ್ಲರೂ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಶಿವಸೇನೆಯ ಸಂಸದೆ ಗಜಾನನ ಕೀರ್ತಿಕರ್ ಹೇಳಿದ್ದರು. ಜೊತೆಗೆ ಮುಂದಿನ ಎರಡು ದಿನಗಳಲ್ಲಿ ಉದ್ಧವ್ ಠಾಕ್ರೆ ತಮ್ಮ ನಿರ್ಧಾರ ಹೊರಹಾಕಲಿದ್ದಾರೆ ಎಂದಿದ್ದರು. ಇದರ ಜೊತೆಗೆ ಶಿವಸೇನೆಯ ಸಂಸದರಿಗೆ ಪಕ್ಷ ತೊರೆಯದಂತೆ ಷರತ್ತು ವಿಧಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಶಿವಸೇನೆ 16 ಎಂಪಿಗಳು ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸುವುದಾಗಿ ತಿಳಿಸಿದ್ದೇವೆ: ಸಂಸದ ಕೀರ್ತಿಕರ್
ಯಶವಂತ್ ಸಿನ್ಹಾ ಆಯ್ಕೆಗೆ ಒಪ್ಪಿಗೆ ಸೂಚಿಸಿದ್ದ ಉದ್ಧವ್ ಠಾಕ್ರೆ: ಮಹಾರಾಷ್ಟ್ರದಲ್ಲಿ ಶಿವಸೇನೆಯ ಏಕನಾಥ್ ಶಿಂದೆ ಬಳಗ ಬಂಡಾಯ ಏಳುವ ಮೊದಲು ವಿಪಕ್ಷಗಳ ಒಮ್ಮತದಂತೆ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ಸೂಚನೆ ಮಾಡಿದ್ದರು. ಆದರೆ, ಇದೀಗ ಸೇನೆ ತನ್ನ ನಿರ್ಧಾರ ಹಿಂಪಡೆದುಕೊಂಡಿದ್ದು, ಎನ್ಡಿಎಗೆ ಜೈಕಾರ ಹಾಕಿದೆ.
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ನೇತೃತ್ವದಲ್ಲಿ ಶಿವಸೇನೆಯ 40 ಶಾಸಕರು ಬಂಡಾಯವೆದ್ದು, ಈಗಾಗಲೇ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಂಸದರು ಬಂಡಾಯದ ಬಾವುಟ ಹಾರಿಸುವ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ, ಉದ್ಧವ್ ಠಾಕ್ರೆ ಬಿಜೆಪಿಗೆ ಸಪೋರ್ಟ್ ಮಾಡುವ ಮೂಲಕ ಬಂಡಾಯ ಶಮನ ಮಾಡುವ ನಿರ್ಧಾರಕ್ಕೆ ಕೈಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಒಟ್ಟು 19 ಸಂಸದರು ಇದ್ದಾರೆ.