ETV Bharat / bharat

ಶಿವಸೇನೆ 16 ಎಂಪಿಗಳು ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸುವುದಾಗಿ ತಿಳಿಸಿದ್ದೇವೆ: ಸಂಸದ ಕೀರ್ತಿಕರ್​ - ಶಿವಸೇನೆ ಸಂಸದೆ ಗಜಾನನ ಕೀರ್ತಿಕರ್​

ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ನಾವು ಬೆಂಬಲ ಘೋಷಿಸುವುದಾಗಿ ಇಂದು ನಡೆದ ಸಭೆಯಲ್ಲಿ ತಿಳಿಸಿದ್ದೇವೆಂದು ಶಿವಸೇನೆಯ ಸಂಸದ ಗಜಾನನ ಕೀರ್ತಿಕರ್ ತಿಳಿಸಿದ್ದಾರೆ.

Shiv Sena MP Gajanan Kirtikar
Shiv Sena MP Gajanan Kirtikar
author img

By

Published : Jul 11, 2022, 6:36 PM IST

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಮುಖ್ಯ ಕಾರಣ ಬಿಜೆಪಿ ಎಂದು ಈಗಾಗಲೇ ಉದ್ಧವ್ ಠಾಕ್ರೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಇದರ ಮಧ್ಯೆ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದು ಬಹುತೇಕ ಫೈನಲ್​ ಆಗಿದೆ. ಮಾತೋಶ್ರೀಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲ 16 ಸಂಸದರು ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸುವುದಾಗಿ ಹೇಳಿಕೊಂಡಿದ್ದಾರೆ.

  • She is an NDA candidate but Droupadi Murmu belongs to the tribal community and is a woman. We should give her our support - this was the demand by all MPs (of the party). Uddhav ji told us that he will tell us his decision in a day or two: Gajanan Kirtikar, Shiv Sena MP pic.twitter.com/PRpEAE2HkJ

    — ANI (@ANI) July 11, 2022 " class="align-text-top noRightClick twitterSection" data=" ">

ಮಾತೋಶ್ರೀಯಲ್ಲಿ ನಡೆದ ಸಭೆಯಲ್ಲಿ ಶಿವಸೇನೆಯ 16 ಸಂಸದರು ಭಾಗಿಯಾಗಿದ್ದರು. ಇವರೆಲ್ಲರೂ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆಂದು ಶಿವಸೇನೆಯ ಸಂಸದೆ ಗಜಾನನ ಕೀರ್ತಿಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್​ ಅವರನ್ನ ನಾವು ಬೆಂಬಲಿಸಿದ್ದೆವು.

ಇದಾದ ಬಳಿಕ ಪ್ರಣಬ್ ಮುಖರ್ಜಿ ಅವರಿಗೂ ನಾವು ಬೆಂಬಲ ಘೋಷಣೆ ಮಾಡಿದ್ದೆವು. ಇದೀಗ ಉದ್ಧವ್ ಜೀ ಬುಡಕಟ್ಟು ಮಹಿಳೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ ಮಾಡಲಿದ್ದು, ಮುಂದಿನ ಎರಡು ದಿನಗಳಲ್ಲಿ ಉದ್ಧವ್ ಠಾಕ್ರೆ ತಮ್ಮ ನಿರ್ಧಾರ ಹೊರಹಾಕಲಿದ್ದಾರೆ ಎಂದರು.

ಇದನ್ನೂ ಓದಿರಿ: ಸಂಸದರ ಬಂಡಾಯ ಶಮನಕ್ಕೆ ಮುಂದಾದ ಉದ್ಧವ್​ ಠಾಕ್ರೆ.. ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಮಾಜಿ ಸಿಎಂ ಬೆಂಬಲ?

ಇಂದು ನಡೆದ ಸಂಸದರ ಸಭೆಯಲ್ಲಿ ಎಲ್ಲರ ನಿರ್ಧಾರ ಒಂದೇ ಆಗಿದ್ದು, ಹೀಗಾಗಿ, ನಮ್ಮ ಬೆಂಬಲ ಅವರಿಗೆ ನೀಡುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಒಟ್ಟು 18 ಸಂಸದರಿದ್ದು, ಇಂದಿನ ಸಭೆಯಲ್ಲಿ 16 ಎಂಪಿಗಳು ಭಾಗಿಯಾಗಿದ್ದರು.

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ನೇತೃತ್ವದಲ್ಲಿ ಶಿವಸೇನೆಯ 40 ಶಾಸಕರು ಬಂಡಾಯವೆದ್ದು, ಈಗಾಗಲೇ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಂಸದರು ಬಂಡಾಯದ ಬಾವುಟ ಹಾರಿಸುವ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ, ಉದ್ಧವ್ ಠಾಕ್ರೆ ಬಿಜೆಪಿಗೆ ಸಪೋರ್ಟ್ ಮಾಡುವ ಮೂಲಕ ಬಂಡಾಯ ಶಮನ ಮಾಡುವ ನಿರ್ಧಾರಕ್ಕೆ ಕೈಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.