ಮುಂಬೈ: ವಿಧಾನಸಭೆಯ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಶಿವಸೇನೆ ಶಾಸಕ ಭಾಸ್ಕರ್ ಜಾಧವ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಮಿಮಿಕ್ರಿ ಮಾಡುವ ಮೂಲಕ ಸದನವನ್ನು ನಗೆಗಡಲಲ್ಲಿ ತೇಲಿಸಿದರು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಹುಷಾರಿಲ್ಲದ ಕಾರಣ ಈ ವರ್ಷ ನಾಗ್ಪುರದ ಬದಲಾಗಿ ಮುಂಬೈನಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಇದೇ ವೇಳೆ, ಮೊದಲ ದಿನವಾದ ಇಂದು ಶಾಸಕ ಭಾಸ್ಕರ್ ಜಾಧವ್ ಅವರು ಪ್ರಧಾನಿ ಮೋದಿ ಅವರನ್ನು ಮಿಮಿಕ್ರಿ ಮಾಡಿದರು.
ಈ ಮಿಮಿಕ್ರಿ ನಂತರ ಸದನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ವಿರೋಧಿಗಳು ಆಕ್ರಮಣಕಾರಿ ನಿಲುವು ತಾಳಿದ್ದು, ಜಾಧವ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ಭಾಸ್ಕರ್ ಜಾಧವ್ ಅವರು, ಪ್ರತಿ ಭಾರತೀಯನಿಗೆ 15 ಲಕ್ಷ ರೂಪಾಯಿ ಕಪ್ಪು ಹಣ ವಾಪಸ್ನಿಂದ ಕೊಡಬಹುದು ಎಂಬ ಸುಳ್ಳು ಭರವಸೆ ನೀಡಿದ 'ಜುಮ್ಲಾ' ಕುರಿತು ಪ್ರಧಾನಿಯನ್ನು ಅನುಕರಿಸಿದರು. ಸದನದ ಸದಸ್ಯರು ಇಂಧನ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಇದೇ ವೇಳೆ ಭಾಸ್ಕರ್ ಜಾಧವ್ ಅವರು ಮೋದಿಯವರನ್ನು ಅನುಕರಿಸಿ, ಚುನಾವಣೆಗೂ ಮುನ್ನ ಕಪ್ಪುಹಣ ಭಾರತಕ್ಕೆ ತಂದು ರೈತರ ಖಾತೆಗೆ 15 ಕೋಟಿ ಹಾಕುವುದಾಗಿ ಭರವಸೆ ನೀಡಿದ್ದರು ಅದು ಏನಾಯಿತು ಎಂದು ಪ್ರಶ್ನಿಸಿದರು.
ಕೋಪಗೊಂಡ ದೇವೇಂದ್ರ ಫಡ್ನವಿಸ್ : ಭಾಸ್ಕರ್ ಜಾಧವ್ ಅವರು ನರೇಂದ್ರ ಮೋದಿಯನ್ನು ಅನುಕರಿಸಿದ ನಂತರ ವಿರೋಧ ಪಕ್ಷದವರು ವಿಧಾನಸಭೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಪ್ರತಿಪಕ್ಷದ ನಾಯಕರಾದ ದೇವೇಂದ್ರ ಫಡ್ನವೀಸ್ ಮತ್ತು ಸುಧೀರ್ ಮುಂಗಟಿವಾರ್ ಅವರು ಭಾಸ್ಕರ್ ಜಾಧವ್ ಕ್ಷಮೆಯಾಚಿಸಬೇಕು ಮತ್ತು ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.