ನವದೆಹಲಿ: ಕೋವಿಡ್ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಟ್ವೀಟ್ಗೆ ಚಿದಂಬರಂ ರಿಟ್ವೀಟ್ ಮಾಡಿದ್ದಾರೆ. ಆದರೆ ಪ್ರಸ್ತುತ ಆರೋಗ್ಯ ಸಚಿವರ ಟ್ವೀಟ್ ಡಿಲೀಟ್ ಆಗಿದೆ. " ಮೇ ದಿನ! ಮೇ ದಿನ! 130 ಕೋಟಿ ಜನರನ್ನು ಹೊತ್ತ ಹಡಗು 2021ರಲ್ಲಿ ಮುಳುಗುತ್ತಿದೆ. ನಮ್ಮನ್ನು ರಕ್ಷಿಸಿ, ಕನಿಷ್ಠಪಕ್ಷ ನನ್ನನ್ನಾದರೂ ಉಳಿಸಿ" ಎಂದು ಬರೆದುಕೊಂಡಿದ್ದಾರೆ.
-
Re-tweeting Health Minister (his original tweet was invisible)
— P. Chidambaram (@PChidambaram_IN) May 1, 2021 " class="align-text-top noRightClick twitterSection" data="
“May Day! May Day!
The Ship IN 2021 with 130 cr on board is sinking.
Save Us! At least Save Me!”
">Re-tweeting Health Minister (his original tweet was invisible)
— P. Chidambaram (@PChidambaram_IN) May 1, 2021
“May Day! May Day!
The Ship IN 2021 with 130 cr on board is sinking.
Save Us! At least Save Me!”Re-tweeting Health Minister (his original tweet was invisible)
— P. Chidambaram (@PChidambaram_IN) May 1, 2021
“May Day! May Day!
The Ship IN 2021 with 130 cr on board is sinking.
Save Us! At least Save Me!”
ಇದನ್ನೂ ಓದಿ: ಭಾರತದಲ್ಲಿ ಕೋವಿಡ್ ತಾಂಡವ.. ಒಂದೇ ದಿನ 4 ಲಕ್ಷ ಕೇಸ್ ಪತ್ತೆ, 3,523 ಮಂದಿ ಸೋಂಕಿಗೆ ಬಲಿ
ಭೀಕರ ಕೊರೊನಾ ಅಲೆಯಲ್ಲಿ ಸಿಲುಕಿರುವ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,01,993 ಹೊಸ ಪ್ರಕರಣಗಳು ಮತ್ತು 3,523 ಸಾವು ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆಯೊಂದಿಗೆ ದೇಶದ ವೈದ್ಯಕೀಯ ವಲಯ ತೀವ್ರ ಸಂಕಷ್ಟದಲ್ಲಿದೆ.