ಬದ್ಗಾಮ್: ಜಮ್ಮು- ಕಾಶ್ಮೀರದಲ್ಲಿ ಬದ್ಗಾಮ್ ಜಿಲ್ಲೆಯಲ್ಲಿ ಕಳೆದ ರಾತ್ರಿ ಉಗ್ರರಿಂದ ಹತ್ಯೆಯಾದ ಕಿರುತೆರೆ ನಟಿ ಅಮ್ರೀನ್ ಭಟ್ ಅವರ ಕುಟುಂಬ ಅವರ ಸಾವಿಗೆ ನ್ಯಾಯ ಕೇಳಿದ್ದಾರೆ. ಅಮ್ರೀನ್ ಭಟ್ ತಂದೆ ಖಜರ್ ಮಹಮ್ಮದ್ ಮಾತನಾಡಿ, ಆಕೆ ನನಗೆ ಮಗಳಾಗಿರಲಿಲ್ಲ, ಮಗನ ಥರ ಇದ್ದಳು. ನನ್ನ ಮಗನನ್ನು ಕಳೆದುಕೊಂಡಂತಾಗಿದೆ. ಅವಳ ಯಾವ ತಪ್ಪಿಗೆ ಈ ಶಿಕ್ಷೆ, ಅವಳ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ರಾತ್ರಿ ಯಾರೋ ಇಬ್ಬರು ಮನೆಯ ಬಳಿ ಬಂದು ಮಗಳ ಬಳಿ ಶೂಟಿಂಗ್ಗೆಗೆ ಬರುವಂತೆ ಕರೆದಿದ್ದಾರೆ. ಆದರೆ ಮಗಳು ಅವರ ಜೊತೆ ಶೂಟಿಂಗ್ಗೆ ಹೋಗುವುದಿಲ್ಲ ಎಂದು ಹೇಳಿದ್ದಾಳೆ. ಆ ಸಂದರ್ಭ ಆಕೆಯನ್ನು ಅವರು ಗುಂಡಿಕ್ಕಿ ಕೊಂದಿದ್ದಾರೆ. ಅವಳು ನನಗೆ ಮಗನಂತಿದ್ದಳು ಎಂದು ತಂದೆ ಖಜರ್ ಮಹಮ್ಮದ್ ಕಣ್ಣೀರು ಹಾಕಿದರು.
ಅವಳ ಮನೆ ಬಳಿ ಇಬ್ಬರು ಆಕೆಯನ್ನು ಶೂಟಿಂಗ್ಗೆ ಬರುವಂತೆ ಕರೆಯಲು ಬಂದಿದ್ದರು. ಆಗ ಅಮ್ರೀನ್ ಮನೆಯಿಂದ ಹೊರಗೆ ಬರುತ್ತಿದ್ದಂತೆ ಅವಳನ್ನು ಗುಂಡಿಕ್ಕಿ ಕೊಂದಿದ್ದಾರೆ. ಅವಳು ಯಾರಿಗೆ ಏನು ಅನ್ಯಾಯ ಮಾಡಿದ್ದಾಳೆ ಎಂದು ಅವಳನ್ನು ಸಾಯಿಸಿದ್ದಾರೆ ಎಂದು ಆಕೆಯ ಬಾವ ಜುಬೈರ್ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕಿರುತೆರೆ ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು