ETV Bharat / bharat

ಅವರಿಗೆ 99.. 100ನೇ ಮರಿಮೊಮ್ಮಗನನ್ನು ನೋಡಿದ ಭಾಗ್ಯಶಾಲಿ ವೃದ್ಧೆ

1922ರಲ್ಲಿ ಹುಟ್ಟಿದ ಮಾರ್ಗರೇಟ್ ಕೊಲ್ಲರ್ ಕೆಲ ದಿನಗಳ ಕಾಲ ನನ್ ಆಗಿ ಕೆಲಸ ಮಾಡಿದ್ದರು. ವಿಲಿಯಂ ಎಂಬುವರನ್ನು ಭೇಟಿಯಾದ ನಂತರ ಅವರ ಜೀವನದಲ್ಲಿ ಹೊಸ ತಿರುವೊಂದು ಬಂದಿತು. ಕೆಲ ದಿನಗಳ ನಂತರ ಇವರಿಬ್ಬರೂ ಮದುವೆಯಾದರು. ಕಾಲಾಂತರದಲ್ಲಿ ದಂಪತಿಗೆ 11 ಮಕ್ಕಳಾದರು.

100th great grandchild
100th great grandchild
author img

By

Published : Aug 17, 2022, 11:18 AM IST

Updated : Aug 17, 2022, 11:27 AM IST

ಪೆನ್ಸಿಲ್ವೇನಿಯಾ (ಅಮೆರಿಕ): ಅದೊಂದು ಕಾಲದಲ್ಲಿ ಯುವತಿಯೊಬ್ಬಳಿದ್ದಳು. ಆಕೆ ಕ್ರಿಶ್ಚಿಯನ್ ನನ್ ಆಗಿದ್ದಳು. ಮದುವೆ ಆಗಬೇಕು ಅಂತೇಬೂ ಆಕೆಗೆ ಅಭಿಲಾಷೆ ಇರಲಿಲ್ಲ. ಆದರೂ ಅದಾವುದೂ ಸಂದರ್ಭಗಳಲ್ಲಿ ಅವರಿಗೆ ಮದುವೆಯಾಯಿತು. ಮದುವೆ ಆಗಿದ್ದಷ್ಟೇ ಅಲ್ಲ ಮಕ್ಕಳೂ ಆದವು. ಒಂದೆರಡಲ್ಲ.. ಬರೋಬ್ಬರಿ 11 ಮಕ್ಕಳ ತಾಯಿಯಾದಳು. ಹೀಗೆ ಅವರ ಕುಟುಂಬ ದೊಡ್ಡಗಾಗುತ್ತ ಸಾಗಿತು. ಅಂದಿನ ಯುವತಿ ಈಗ 99 ವರ್ಷದ ವಯೋವೃದ್ಧೆ. 99ನೇ ವರ್ಷದಲ್ಲಿ ಇವರು ತಮ್ಮ 100ನೇ ಮರಿ ಮೊಮ್ಮಗನನ್ನು ನೋಡಿದ್ದು ಮಾತ್ರ ವಿಸ್ಮಯ.

ಇವರ ಹೆಸರು ಮಾರ್ಗರೇಟ್ ಕೊಲ್ಲರ್. ಅಮೆರಿಕ ಪೆನ್ಸಿಲ್ವೇನಿಯಾದ ಮಹಿಳೆ. ತನ್ನ 100ನೇ ಮರಿ ಮೊಮ್ಮಗುವನ್ನು ನೋಡಿದ ಇವರ ಖುಷಿಗೆ ಪಾರವೇ ಇಲ್ಲವಾಗಿದೆ. ವೃದ್ಧೆಯ ಮೊಮ್ಮಗಳು ಇತ್ತೀಚೆಗೆ ತನ್ನ ಮಗುವನ್ನು ಅಜ್ಜಿಯ ಕೈಗಿಟ್ಟಾಗ ಅಜ್ಜಿಯ ಆನಂದ ಇಮ್ಮಡಿಸಿತ್ತು. ಇನ್ನು ಮಗುವಿನ ಹೆಸರನ್ನು ಕೊಲ್ಲರ್ ವಿಲಿಯಮ್ ಬಾಲ್​ಸ್ಟರ್ ಎಂದಿಟ್ಟಿರುವುದು ಮತ್ತೂ ವಿಶೇಷವಾಗಿದೆ. 100 ನೇ ಮರಿ ಮೊಮ್ಮಗುವಿನ ಹೆಸರಲ್ಲಿ ಅಜ್ಜಿಯ ಹೆಸರೂ ಸೇರಿದೆ.

1922ರಲ್ಲಿ ಹುಟ್ಟಿದ ಮಾರ್ಗರೇಟ್ ಕೊಲ್ಲರ್ ಕೆಲ ದಿನಗಳ ಕಾಲ ನನ್ ಆಗಿ ಸೇವೆ ಸಲ್ಲಿಸಿದ್ದರು. ವಿಲಿಯಂ ಎಂಬುವರನ್ನು ಭೇಟಿಯಾದ ನಂತರ ಅವರ ಜೀವನದಲ್ಲಿ ಹೊಸ ತಿರುವೊಂದು ಬಂದಿತು. ಕೆಲ ದಿನಗಳ ನಂತರ ಇವರಿಬ್ಬರೂ ಮದುವೆಯಾದರು. ಕಾಲಾಂತರದಲ್ಲಿ ದಂಪತಿಗೆ 11 ಮಕ್ಕಳಾದರು. ಆ ಮಕ್ಕಳಿಗೂ ನಂತರ ಮದುವೆಯಾಗಿ, ಅವರಿಗೂ ಮಕ್ಕಳು ಹುಟ್ಟಿ ಈಗ ಕೊಲ್ಲರ್ 100ನೇ ಮರಿಮೊಮ್ಮಗುವನ್ನು ನೋಡುವ ಸುಸಂದರ್ಭ ಒದಗಿದೆ.

ಈ ಅಪರೂಪದ ಕ್ಷಣಕ್ಕೆ ವೃದ್ಧೆ ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ತಾನು ತುಂಬಾ ಅದೃಷ್ಟಶಾಲಿ ಎಂದು ಅವರು ಹೇಳಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕೊಲ್ಲರ್​ಗೆ 100 ವರ್ಷ ತುಂಬಲಿದೆ. ಆಕೆಯ 100ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಕುಟುಂಬ ಮುಂದಾಗಿದೆ.

ಇದನ್ನು ಓದಿ: ಅಂಗೈ ಅಗಲ ಬಿಕಿನಿ ತೊಟ್ಟು ಜಿಮ್​ಗೆ ಬಂದ ಕಿಮ್ ಕಾರ್ಡಶಿಯಾನ್.. ಬೋಲ್ಡ್​ ಲುಕ್​ಗೆ ಬಿದ್ದೋದ್ರು ನೆಟಿಜನ್ಸ್​

Last Updated : Aug 17, 2022, 11:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.