ETV Bharat / bharat

ಸಿಧು ಸಲಹೆಗಾರ ಮುಸ್ತಾಫಾ ಕೋಮು ಸೌಹಾರ್ದತೆ ಕದಡಲು ಯತ್ನಿಸುತ್ತಿದ್ದಾರೆ : ಬಿಜೆಪಿ ಆರೋಪ - ಬಿಜೆಪಿ ರಾಷ್ಟ್ರೀಯ ವಕ್ತಾರ ಶಾಜಿಯಾ ಇಲ್ಮಿ ಆರೋಪ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಶಾಜಿಯಾ ಇಲ್ಮಿ ಅವರು ಪಂಜಾಬ್ ಮಾಜಿ ಪೊಲೀಸ್ ಡಿಜಿ ಮೊಹಮ್ಮದ್ ಮುಸ್ತಫಾ ಅವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಕೋಮು ಸೌಹಾರ್ದತೆ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ..

Shazia Ilmi accused the former Punjab DG  Shazia Ilmi accused Mohammad Mustafa  Shazia Ilmi accuses Sidhu's aide Mohammad Mustafa  ಸಿಧು ಸಲಹೆಗಾರ ಮುಸ್ತಾಫಾ ಕೋಮು ಸೌಹಾರ್ದತೆ ಕದಡಲು ಯತ್ನಿಸುತ್ತಿದ್ದಾರೆ  ಬಿಜೆಪಿ ರಾಷ್ಟ್ರೀಯ ವಕ್ತಾರ ಶಾಜಿಯಾ ಇಲ್ಮಿ ಆರೋಪ  ಪಂಜಾಬ್ ವಿಧಾನಸಭೆ ಚುನಾವಣೆ
ಸಿಧು ಸಲಹೆಗಾರ ಮುಸ್ತಾಫಾ
author img

By

Published : Jan 22, 2022, 2:29 PM IST

ನವದೆಹಲಿ : ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಪ್ರಮುಖ ಆಯಕಟ್ಟಿನ ಸಲಹೆಗಾರರೂ ಆಗಿರುವ ಪಂಜಾಬ್ ಮಾಜಿ ಪೊಲೀಸ್ ಡಿಜಿ ಮೊಹಮ್ಮದ್ ಮುಸ್ತಫಾ ಅವರು ಪಂಜಾಬ್ ವಿಧಾನಸಭೆಗೂ ಮುನ್ನ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಕೋಮು ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಾಜಿಯಾ ಇಲ್ಮಿ ಆರೋಪಿಸಿದ್ದಾರೆ.

ನಿರ್ದಿಷ್ಟ ಸಮುದಾಯಕ್ಕೆ ಅವರ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಿದರೆ ನಿಯಂತ್ರಿಸಲಾಗದ ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ' ಎಂದು ಬೆದರಿಕೆ ಹಾಕುತ್ತಿದ್ದಾರೆ ಅಂತಾ ಆರೋಪಿಸಿ ಬಿಜೆಪಿ ಪಂಜಾಬ್ ಯುವ ಘಟಕದ ವಕ್ತಾರ ಚಿರಂಶು ರತ್ತನ್ ಅವರು ಮುಸ್ತಫಾ ಅವರ ಉದ್ದೇಶಿತ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ.

ಓದಿ: ಹಾಲು, ನೀರು, ವಿದ್ಯುತ್ ದರ ಏರಿಕೆ.. ಸಿಎಂ ಸ್ಪಷ್ಟನೆ ಹೇಳಿದ್ದೇನು?

ಈ ಕುರಿತು ಪ್ರತಿಕ್ರಿಯಿಸಿದ ಇಲ್ಮಿ, ನಮ್ಮ ತಂಡ ಮತ್ತು ಚಿರಂಶು ಅವರಿಗೆ ವಿಡಿಯೋ ಸಿಕ್ಕಿದ್ದು, ಮುಸ್ಲಿಂ ಪ್ರಾಬಲ್ಯವಿರುವ ಮಲೇರ್‌ಕೋಟ್ಲಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸ್ತಫಾ ನೀಡಿದ ಭಾಷಣ ಇದಾಗಿದೆ. ಇದು ದ್ವೇಷಪೂರಿತ ಭಾಷಣವಾಗಿದ್ದು, ಅವರು ದ್ವೇಷ ಸಾಧಿಸಲು ಯತ್ನಿಸುತ್ತಿದ್ದಾರೆ. ಪಂಜಾಬ್ ಚುನಾವಣೆಗೆ ಮುನ್ನ ಇಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಹಿಂಸಾಚಾರ ಮತ್ತು ಕೋಮು ಸೌಹಾರ್ದವನ್ನು ಕದಡುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರ ಪ್ರಕಾರ, ಪಂಜಾಬ್ ಸಚಿವೆ ರಜಿಯಾ ಸುಲ್ತಾನಾ ಅವರ ಪತಿ ಮುಸ್ತಫಾ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಮಲೇರ್‌ಕೋಟ್ಲಾದಿಂದ ಈ ವಿಡಿಯೋ ಆಗಿದೆ. ಚುನಾವಣಾ ಆಯೋಗವು ಈ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಮಲೇರ್‌ಕೋಟ್ಲಾದಿಂದ ಶಾಸಕರಾಗಿರುವ ರಜಿಯಾ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.