ETV Bharat / bharat

ಭುವನ ಸುಂದರಿ ಜೊತೆ ಶಶಿ ತರೂರ್ ಸೆಲ್ಫಿ: ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದ ಎಂದ ಹರ್ನಾಜ್ - Shashi Tharoor tweet

ಭುವನ ಸುಂದರಿ ಹರ್ನಾಜ್ ಕೌರ್ ಸಂಧು ಜೊತೆ ಕಾಂಗ್ರೆಸ್​ ಸಂಸದ ಶಶಿ ತರೂರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ವೈಯಕ್ತಿಕವಾಗಿಯೂ ಹರ್ನಾಜ್ ಸಮಚಿತ್ತ ಮತ್ತು ಆಕರ್ಷಕ ಎಂದು ಹೊಗಳಿದ್ದಾರೆ.

Shashi Tharoor meets Miss Universe Harnaaz Sandh
ಭುವನ ಸುಂದರಿ ಜೊತೆ ಶಶಿ ತರೂರ್ ಸೆಲ್ಫಿ
author img

By

Published : Dec 16, 2021, 1:24 PM IST

ನವದೆಹಲಿ: ನಿನ್ನೆ ಭಾರತಕ್ಕೆ ಬಂದಿಳಿದ ಭುವನ ಸುಂದರಿ ಹರ್ನಾಜ್ ಕೌರ್ ಸಂಧು ಅವರನ್ನು ಕಾಂಗ್ರೆಸ್​ ಸಂಸದ ಶಶಿ ತರೂರ್ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಭೇಟಿಯ ಫೋಟೋಗಳನ್ನು ತರೂರ್ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಭಾರತಕ್ಕೆ ವಿಜಯಶಾಲಿಯಾಗಿ ಹಿಂದಿರುಗಿದ ಭುವನ ಸುಂದರಿ ಹರ್ನಾಜ್ ಸಂಧು ಅವರನ್ನು ವೈಯಕ್ತಿಕವಾಗಿ ಅಭಿನಂದಿಸಲು ಸಂತೋಷವಾಗಿದೆ. ಹೊಸ ವರ್ಷದ ರಜಾದಿನಗಳಿಗಾಗಿ ಭಾರತಕ್ಕೆ ಮರಳಲು ಅವರು ಉತ್ಸುಕರಾಗಿದ್ದು, ಅವರನ್ನು ಸ್ವಾಗತಿಸಲು ಭಾರತ ಹೆಮ್ಮೆಪಡುತ್ತದೆ. ಅವಳು ವೇದಿಕೆಯಲ್ಲಿ ಕಾಣುವಂತೆಯೇ ವೈಯಕ್ತಿಕವಾಗಿಯೂ ಸಮಚಿತ್ತ ಮತ್ತು ಆಕರ್ಷಕರಾಗಿದ್ದಾರೆ" ಎಂದು ತರೂರ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಭುವನ ಸುಂದರಿ ಪಟ್ಟ ಗೆದ್ದು ತವರಿಗೆ ಬಂದ ಮಿಸ್​ ಯುನಿವರ್ಸ್ 'ಸಂಧು'... ಅದ್ಧೂರಿ ಸ್ವಾಗತ

ತರೂರ್​ ಟ್ವೀಟ್ ಅನ್ನು ರಿಟ್ವೀಟ್​ ಮಾಡಿರುವ ಸಂಧು, "ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಖುಷಿಯಾಗಿದೆ ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.

ಡಿಸೆಂಬರ್ 13 ರಂದು ಇಸ್ರೇಲ್‌ನಲ್ಲಿ ನಡೆದ 70ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತದ ಚಂಢೀಗಢ ಮೂಲದ ಹರ್ನಾಜ್ ಸಂಧು ವಿಜೇತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.