ETV Bharat / bharat

ಶಶಿ ತರೂರ್​ ಪ್ರಣಾಳಿಕೆಯ ನಕ್ಷೆಯಲ್ಲಿ ಕಾಶ್ಮೀರ ಮಾಯ.. ಭೇಷರತ್​ ಕ್ಷಮೆ ಕೋರಿದ ಹಿರಿಯ ಕಾಂಗ್ರೆಸ್ಸಿಗ

ಅಖಂಡ ಭಾರತವನ್ನು ಜೋಡಿಸಲು ರಾಹುಲ್​ ಗಾಂಧಿ ಪಾದಯಾತ್ರೆ ನಡೆಸುತ್ತಿದ್ದರೆ, ಅದೇ ಪಕ್ಷದ ಹಿರಿಯ ನಾಯಕ ಶಶಿ ತರೂರ್​ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ದೇಶದ ಮುಕುಟ ಕಾಶ್ಮೀರವನ್ನು ಬಿಟ್ಟ ನಕ್ಷೆ ತೀವ್ರ ಟೀಕೆಗೆ ಗುರಿಯಾಗಿದೆ.

shashi-tharoor-map-blunder-in-manifesto
ಶಶಿ ತರೂರ್​ ಪ್ರಣಾಳಿಕೆಯ ನಕ್ಷೆಯಲ್ಲಿ ಕಾಶ್ಮೀರ ಮಾಯ
author img

By

Published : Oct 1, 2022, 7:06 AM IST

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೇರಳದ ಹಿರಿಯ ರಾಜಕಾರಣಿ ಶಶಿ ತರೂರ್​ ಬಿಡುಗಡೆ ಮಾಡಿದ ಪ್ರಣಾಳಿಕೆ ವಿವಾದ ಸೃಷ್ಟಿಸಿದೆ. ಇದರಲ್ಲಿ ಚಿತ್ರಿಸಲಾಗಿರುವ ಭಾರತದ ಮ್ಯಾಪ್​ನಲ್ಲಿ ದೇಶದ ಮುಕುಟ ಮಣಿಯಾದ ಕಾಶ್ಮೀರವೇ ಮಾಯವಾಗಿದೆ. ಇದು ಭಾರಿ ಟೀಕೆಗೆ ಗುರಿಯಾಗಿದ್ದು, ಕಾಂಗ್ರೆಸ್​ ನಾಯಕ ಭೇಷರತ್​ ಕ್ಷಮೆ ಕೋರಿದ್ದಾರೆ.

ಬಿಡುಗಡೆಯಾದ ಪ್ರಣಾಳಿಕೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಕಾಶ್ಮೀರ ಮತ್ತು ಲಡಾಖ್​ ಅನ್ನು ಕೈಬಿಡಲಾಗಿದೆ. ಇದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ದೇಶದ ಅವಿಭಾಜ್ಯ ಅಂಗವಾದ ಕಾಶ್ಮೀರವನ್ನು ಮ್ಯಾಪ್​ನಲ್ಲಿ ಬಿಟ್ಟಿರುವುದನ್ನು ಬಿಜೆಪಿ ಟೀಕಿಸಿದೆ.

ದೇಶಕ್ಕೆ ಅವಮಾನ, ತೋಡೋ ಕಾರ್ಯಸೂಚಿ: ನಕ್ಷೆಯಲ್ಲಿ ಕಾಶ್ಮೀರವನ್ನು ಬಿಟ್ಟಿದ್ದಕ್ಕೆ ಮುಗಿಬಿದ್ದಿರುವ ಬಿಜೆಪಿ, "ಇದು ದೇಶಕ್ಕೆ ಮಾಡಿದ ಅವಮಾನ. ಕಾಂಗ್ರೆಸ್​ ವಿಭಜಕ ಕಾರ್ಯಸೂಚಿ ಈ ಮೂಲಕ ಕಾಣುತ್ತದೆ. ಇತ್ತ ರಾಹುಲ್​ ಗಾಂಧಿ ಜೋಡೋ ಭಾರತ ನಡೆಸುತ್ತಿದ್ದಾರೆ ಎಂತಹ ವಿಪರ್ಯಾಸ" ಎಂದು ತರಾಟೆಗೆ ತೆಗೆದುಕೊಂಡಿದೆ.

  • Re the troll storm on a manifesto map: No one does such things on purpose. A small team of volunteers made a mistake. We rectified it immediately &I apologise unconditionally for the error. Here’s the manifesto:
    English: https://t.co/aKPpji9Z8M
    Hindi: https://t.co/7tnkY9kTiO

    — Shashi Tharoor (@ShashiTharoor) September 30, 2022 " class="align-text-top noRightClick twitterSection" data=" ">

ಭೇಷರತ್​ ಕ್ಷಮೆ ಕೋರಿದ ತರೂರ್​: ತಪ್ಪಾದ ನಕ್ಷೆಗೆ ತೀವ್ರ ಟೀಕೆ ಕೇಳಿ ಬಂದ ಬಳಿಕ ತಕ್ಷಣವೇ ಮ್ಯಾಪ್​ ಸರಿಪಡಿಸಿ, ಭೇಷರತ್​ ಕ್ಷಮೆ ಕೋರಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಶಶಿ ತರೂರ್​ ಅವರು, "ಯಾರೂ ಉದ್ದೇಶಪೂರ್ವಕವಾಗಿ ಇಂತಹ ಕೆಲಸಗಳನ್ನು ಮಾಡುವುದಿಲ್ಲ. ತಪ್ಪನ್ನು ತಕ್ಷಣವೇ ಸರಿಪಡಿಸಿದ್ದೇವೆ. ಬೇಷರತ್ತಾಗಿ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷರ ಚುನಾವಣೆಯ ಅಖಾಡದಲ್ಲಿ ಶಶಿ ತರೂರ್ ಅಲ್ಲದೇ, ರಾಜ್ಯಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಾರ್ಖಂಡ್ ಮಾಜಿ ಸಚಿವ ಕೆ.ಎನ್. ತ್ರಿಪಾಠಿ ಇದ್ದಾರೆ. ಗಾಂಧಿ ಕುಟುಂಬದ ಬೆಂಬಲ ಇರುವುದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗುವುದು ಖಚಿತ ಎನ್ನಲಾಗ್ತಿದೆ.

ಓದಿ: ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಕಾಯ್ದೆ ಉಲ್ಲಂಘಿಸಿದ್ರೆ ಯಾವ ಶಿಕ್ಷೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.