ETV Bharat / bharat

ಪ್ರತಿಪಕ್ಷದ ಸರ್ವಸಮ್ಮತ ಅಭ್ಯರ್ಥಿಗಳು ಕಣಕ್ಕಿಳಿದರೆ ಬಿಜೆಪಿಗೆ ಸಂಕಷ್ಟ: ಶಶಿ ತರೂರ್ - ಪ್ರತಿಪಕ್ಷದ ಸರ್ವಸಮ್ಮತ ಅಭ್ಯರ್ಥಿ ಕಣಕ್ಕಿಳಿದರೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರತಿಪಕ್ಷಗಳು ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ಸ್ಪರ್ಧೆ ಒಡ್ಡಬಹುದು ಎಂದು ಶಶಿ ತರೂರ್ ಹೇಳಿದ್ದಾರೆ.

ಪ್ರತಿಪಕ್ಷದ ಸರ್ವಸಮ್ಮತ ಅಭ್ಯರ್ಥಿಗಳು ಕಣಕ್ಕಿಳಿದರೆ ಬಿಜೆಪಿಗೆ ಸಂಕಷ್ಟ: ಶಶಿ ತರೂರ್

author img

By

Published : Feb 17, 2023, 6:13 PM IST

ನವದೆಹಲಿ : ದೇಶದಲ್ಲಿ ನಡೆಯಲಿರುವ 2024ರ ಸಾರ್ವತ್ರಿಕ ಚುನಾವಣೆಗಳು ರೋಚಕವಾಗಿರಲಿವೆ ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಓರ್ವ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾದಲ್ಲಿ ಆಡಳಿತಾರೂಢ ಬಿಜೆಪಿಗೆ ಅಗ್ನಿಪರೀಕ್ಷೆ ಎದುರಾಗಲಿದೆ ಎಂದಿದ್ದಾರೆ. 2019ರಲ್ಲಿ ಸಾರಾಸಗಟಾಗಿ ಗೆಲುವುದು ಸಾಧಿಸಿದಂತೆ ಬಿಜೆಪಿಗೆ ಈ ಬಾರಿ ಸಾಧ್ಯವಾಗಲಾರದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಪ್ರತಿಪಕ್ಷಗಳ ಒಕ್ಕೂಟದ ನೇತೃತ್ವ ವಹಿಸಬೇಕೆಂದು ನೀವು ಬಯಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹೊರತುಪಡಿಸಿದರೆ ರಾಷ್ಟ್ರಮಟ್ಟದ ಪಕ್ಷವಾಗಿರುವ ಕಾಂಗ್ರೆಸ್ ಈಗಾಗಲೇ ಸಹಜವಾಗಿಯೇ ಆ ಸ್ಥಾನದಲ್ಲಿದೆ. ದೇಶದಲ್ಲಿ ಹಲವಾರು ಕಡೆಗಳಲ್ಲಿ ನಾವು ಬಿಜೆಪಿಗಿಂತ ಹೆಚ್ಚು ಬಲಿಷ್ಠವಾಗಿದ್ದೇವೆ. ಉದಾಹರಣೆಗೆ ನನ್ನ ತವರು ರಾಜ್ಯ ಕೇರಳ ಹಾಗೂ ತಮಿಳುನಾಡುಗಳನ್ನು ನೋಡಿ ಎಂದರು. ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಸ್ಥಾನಮಾನ, ಐತಿಹಾಸಿಕ ಪರಂಪರೆ, ಬಹುಮಟ್ಟಿಗೆ ಎಲ್ಲೆಡೆ ಅಸ್ತಿತ್ವವನ್ನು ಹೊಂದಿರುವ ಪಕ್ಷ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅದು ಅನಿವಾರ್ಯವಾಗಿ ಪ್ರತಿಪಕ್ಷಗಳ ಯಾವುದೇ ಒಕ್ಕೂಟದ ಮುಂಚೂಣಿಯಲ್ಲಿರುತ್ತದೆ ಮತ್ತು ಪ್ರತಿಪಕ್ಷಗಳ ಸರ್ಕಾರ ರಚನೆಯ ಸಂದರ್ಭ ಬಂದರೂ ಅದು ಮುಂಚೂಣಿಯಲ್ಲಿರುತ್ತದೆ ಎಂದು ತರೂರ್ ಹೇಳಿದರು.

ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಕ್ರಮವಾಗಿ ಶೇ 31 ಮತ್ತು 37 ಮತಗಳನ್ನು ಗಳಿಸಿ ಜಯಶಾಲಿಯಾಗಿದೆ ಎಂದರೆ ಮುಖ್ಯವಾಗಿ ಪ್ರತಿಪಕ್ಷಗಳು ಬಿಜೆಪಿಯ ಆಟಕ್ಕೆ ಬಲಿಯಾಗಿರುವುದೇ ಕಾರಣ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ ಮತ್ತು ಇದರಿಂದ ಪಾಠ ಕಲಿಯಬೇಕಿದೆ ಎಂದು ತರೂರ್ ನುಡಿದರು. ಪ್ರತಿಪಕ್ಷಗಳ ಏಕತೆಗೆ ಒತ್ತು ನೀಡಿದ ತರೂರ್, ಇದು ಚುನಾವಣಾ ಪೂರ್ವ ಮೈತ್ರಿಯಾಗಿರಬಹುದು ಅಥವಾ ಬುದ್ಧಿವಂತಿಕೆಯಿಂದ ಸ್ಥಾನಗಳ ಆಯ್ಕೆ ಹೀಗೆ ಯಾವುದೇ ರೂಪದಲ್ಲಿರಬಹುದು. ಬಿಜೆಪಿ ವಿರುದ್ಧ ಸಾಧ್ಯವಾದಷ್ಟು ಪ್ರಬಲ ವಿರೋಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆತ ಸ್ಪಷ್ಟವಾದ ಮುನ್ನಡೆ ಪಡೆಯುತ್ತಾನೆ. ಅಲ್ಲದೆ ಚುನಾವಣಾ ಫಲಿತಾಂಶದ ನಂತರ ಆಗಿನ ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ತರೂರ್ ಹೇಳಿದರು.

2019 ರಿಂದ ದೇಶದಲ್ಲಿ ಬಹಳ ಮಹತ್ವದ ವಸ್ತು ಬದಲಾವಣೆಗಳಾಗಿವೆ ಎಂದ ಅವರು, ಬಿಜೆಪಿಯ ಮಾಜಿ ಮಿತ್ರ ಪಕ್ಷ ಜೆಡಿಯು ಪ್ರತಿಪಕ್ಷಗಳೊಂದಿಗೆ ಕೈಜೋಡಿಸಿರುವ ಬಿಹಾರದ ಉದಾಹರಣೆಯನ್ನು ಉಲ್ಲೇಖಿಸಿದರು. 2019 ರಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ದಾಖಲೆ ಸಂಖ್ಯೆಯ ಸ್ಥಾನಗಳನ್ನು ಗೆದ್ದ ನಂತರ ಪರಿಸ್ಥಿತಿ ಬಹಳಷ್ಟು ಬದಲಾಗಿದೆ. ಈಗ ಬಿಹಾರದಲ್ಲಿ ಅದರ ಜೊತೆಗೆ ಅದರ ಮಿತ್ರ ಇಲ್ಲ. ಅದೇ ರೀತಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದ ಅಥವಾ ಒಂದು ಸ್ಥಾನವನ್ನು ಹೊರತುಪಡಿಸಿ ಎಲ್ಲವನ್ನೂ ಗೆದ್ದ ಇತರ ರಾಜ್ಯಗಳಿವೆ. 2024 ರಲ್ಲಿ ಆ ಮಾದರಿಯು ಅಷ್ಟು ಸುಲಭವಾಗಿ ಪುನರಾವರ್ತನೆಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ತರೂರ್ ಹೇಳಿದರು.

ಎಐಸಿಸಿ ಅಧ್ಯಕ್ಷೀಯ ಚುನಾವಣೆ ಮತ್ತು ಭಾರತ್ ಜೋಡೋ ಯಾತ್ರೆಯು ಪಕ್ಷವನ್ನು ಪುನರುಜ್ಜೀವನಗೊಳಿಸಿದೆಯೇ ಮತ್ತು 2024 ಕ್ಕೆ ಅದನ್ನು ಗಂಭೀರ ಲೆಕ್ಕಾಚಾರಕ್ಕೆ ತಂದಿದೆಯೇ ಎಂಬ ಪ್ರಶ್ನೆಗೆ, ತಾನು ಹಾಗೆ ಭಾವಿಸುತ್ತೇನೆ ಎಂದರು. ಚುನಾವಣೆಗಳು ಪಕ್ಷವನ್ನು ಬಲಪಡಿಸಿವೆ ಎಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಯ ನಂತರ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ಹೇಳಿದ್ದರು ಎಂದು ಅವರು ನೆನಪಿಸಿಕೊಂಡರು.

ಇದನ್ನೂ ಓದಿ: ಕೊರೊನಾ ಸಾವು, ಕೇಂದ್ರ ಬಜೆಟ್​ ಅಂಶಗಳ ಬಗ್ಗೆ ಕಾಂಗ್ರೆಸ್‌ ಸಂಸದ ಶಶಿ ತರೂರ್​ ಚರ್ಚೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.