ಮುಂಬೈ: ಪಂಚರಾಜ್ಯ ಚುನಾವಣೆ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದ್ದು, ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಕೇರಳದಲ್ಲಿ ಎಲ್ಡಿಎಫ್ ಮೈತ್ರಿಕೂಟ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ಗೆಲುವಿನತ್ತ ದಾಪುಗಾಲು ಹಾಕಿವೆ.
ಈ ಮೂರು ರಾಜ್ಯಗಳಲ್ಲಿ ಮ್ಯಾಜಿಕ್ ನಂಬರ್ ಮೀರಿ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಟ್ವೀಟ್ ಮಾಡಿ ಮೂರು ಪಕ್ಷಗಳ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
-
Congratulations @MamataOfficial on your stupendous victory!
— Sharad Pawar (@PawarSpeaks) May 2, 2021 " class="align-text-top noRightClick twitterSection" data="
Let us continue our work towards the welfare of people and tackling the Pandemic collectively.
">Congratulations @MamataOfficial on your stupendous victory!
— Sharad Pawar (@PawarSpeaks) May 2, 2021
Let us continue our work towards the welfare of people and tackling the Pandemic collectively.Congratulations @MamataOfficial on your stupendous victory!
— Sharad Pawar (@PawarSpeaks) May 2, 2021
Let us continue our work towards the welfare of people and tackling the Pandemic collectively.
ನಿಮ್ಮ ಅದ್ಭುತ ಗೆಲುವಿಗೆ ಅಭಿನಂದನೆಗಳು ಮಮತಾ ಬ್ಯಾನರ್ಜಿ. ಜನರ ಕಲ್ಯಾಣ ಮತ್ತು ಸಾಂಕ್ರಾಮಿಕ ರೋಗ ಒಟ್ಟಾಗಿ ನಿಭಾಯಿಸುವತ್ತ ಕೆಲಸ ಮುಂದುವರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಅಭಿನಂದನೆಗಳು ಸ್ಟಾಲಿನ್. ಈ ಗೆಲುವಿಗೆ ನೀವು ನಿಜವಾಗಿಯೂ ಅರ್ಹರು. ನಿಮ್ಮೆ ಮೇಲೆ ನಂಬಿಕೆ ಇಟ್ಟಿರುವ ಜನರ ಸೇವೆ ಸಲ್ಲಿಸಲು ನಿಮಗೆ ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
-
Congratulations @mkstalin on your win, a truly well deserved victory! Wishing you the best to serve people who have instilled their faith in you!
— Sharad Pawar (@PawarSpeaks) May 2, 2021 " class="align-text-top noRightClick twitterSection" data="
">Congratulations @mkstalin on your win, a truly well deserved victory! Wishing you the best to serve people who have instilled their faith in you!
— Sharad Pawar (@PawarSpeaks) May 2, 2021Congratulations @mkstalin on your win, a truly well deserved victory! Wishing you the best to serve people who have instilled their faith in you!
— Sharad Pawar (@PawarSpeaks) May 2, 2021
ಕೇರಳ ಚುನಾವಣೆಯಲ್ಲಿ ಸತತ ಐತಿಹಾಸಿಕ ಗೆಲುವು ದಾಖಲು ಮಾಡಿದ್ದಕ್ಕಾಗಿ ಅಭಿನಂದನೆಗಳು. ಒಟ್ಟಾಗಿ ಈ ಚುನಾವಣೆಯಲ್ಲಿ ನಾವು ಹೋರಾಡಿದ್ದೇವೆ. ಇದೀಗ ಒಟ್ಟಿಗೆ ಕೋವಿಡ್ ವಿರುದ್ಧ ಹೋರಾಡೋಣ ಎಂದು ಶರದ್ ಪವಾರ್ ಅವರು ಸಿಎಂ ಪಿಣರಾಯಿ ವಿಜಯನ್ ಅವರಿಗೆ ಕರೆ ನೀಡಿದ್ದಾರೆ.
-
Congratulations to Mr. @vijayanpinarayi on a historical consecutive victory in the Kerala elections.
— Sharad Pawar (@PawarSpeaks) May 2, 2021 " class="align-text-top noRightClick twitterSection" data="
Together we fought these elections and now together we will fight the battle against Covid!
">Congratulations to Mr. @vijayanpinarayi on a historical consecutive victory in the Kerala elections.
— Sharad Pawar (@PawarSpeaks) May 2, 2021
Together we fought these elections and now together we will fight the battle against Covid!Congratulations to Mr. @vijayanpinarayi on a historical consecutive victory in the Kerala elections.
— Sharad Pawar (@PawarSpeaks) May 2, 2021
Together we fought these elections and now together we will fight the battle against Covid!
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಈಗಾಗಲೇ 206ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ತಮಿಳುನಾಡಿನಲ್ಲಿ ಟಿಎಂಕೆ 142 ಹಾಗೂ ಕೇರಳದಲ್ಲಿ ಎಲ್ಡಿಎಫ್ 93ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.