ETV Bharat / bharat

43ನೇ ವಸಂತಕ್ಕೆ ಕಾಲಿಟ್ಟ ಶಮಿತಾ ಶೆಟ್ಟಿ.. ಗೆಳೆಯ ರಾಕೇಶ್​, ಸಹೋದರಿ ಶಿಲ್ಪಾರಿಂದ ಪ್ರೀತಿಯ ಶುಭಾಶಯ - ಬಿಗ್​ಬಾಸ್​ ಸ್ಪರ್ಧಿ ಶಮಿತಾ ಶೆಟ್ಟಿಗೆ ಜನ್ಮದಿನದ ಸಂಭ್ರಮ

ಬಿಗ್​ಬಾಸ್​ನಲ್ಲಿ ಫೇಮ್​ ಜೋಡಿಯಾಗಿದ್ದ ಶಮಿತಾ ಮತ್ತು ರಾಕೇಶ್​ ಮಧ್ಯೆ ಲವ್ವಿಡವ್ವಿ ಇದೆ ಎಂಬುದು ಜನ್ಮದಿನದ ವೇಳೆ ಬಹಿರಂಗವಾಗಿದೆ. ತನ್ನ ಗೆಳತಿಯ ಜನ್ಮದಿನದ ಹಿನ್ನೆಲೆ ರಾಕೇಶ್​ ಬಾಪಟ್​​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸರಣಿ ಫೋಟೋಗಳನ್ನು ಹಂಚಿಕೊಂಡು ಶಮಿತಾಗೆ ವಿಶೇಷ ದಿನದ ಶುಭಾಶಯ ಕೋರಿದ್ದಾರೆ. ಅಲ್ಲದೇ 'ಜನ್ಮದಿನದ ಶುಭಾಶಯಗಳು ಮೈ ಲವ್​' ಎಂದು ಬರೆದುಕೊಂಡಿದ್ದಾರೆ..

shamita-shetty
ಶಮಿತಾ ಶೆಟ್ಟಿ.
author img

By

Published : Feb 2, 2022, 2:30 PM IST

ಹೈದರಾಬಾದ್ (ತೆಲಂಗಾಣ) : ಹಿಂದಿಯ ಬಿಗ್​ಬಾಸ್​ ಸ್ಪರ್ಧಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗೆಳೆಯ ರಾಕೇಶ್​ ಬಾಪಟ್​ ಜತೆಗೆ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಬಿಗ್​ಬಾಸ್​ನಲ್ಲಿ ಫೇಮ್​ ಜೋಡಿಯಾಗಿದ್ದ ಶಮಿತಾ ಮತ್ತು ರಾಕೇಶ್​ ಮಧ್ಯೆ ಲವ್ವಿಡವ್ವಿ ಇದೆ ಎಂಬುದು ಜನ್ಮದಿನದ ವೇಳೆ ಬಹಿರಂಗವಾಗಿದೆ. ತನ್ನ ಗೆಳತಿಯ ಜನ್ಮದಿನದ ಹಿನ್ನೆಲೆಯಲ್ಲಿ ರಾಕೇಶ್​ ಬಾಪಟ್​​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸರಣಿ ಫೋಟೋಗಳನ್ನು ಹಂಚಿಕೊಂಡು ಶಮಿತಾಗೆ ವಿಶೇಷ ದಿನದ ಶುಭಾಶಯ ಕೋರಿದ್ದಾರೆ. ಅಲ್ಲದೇ 'ಜನ್ಮದಿನದ ಶುಭಾಶಯಗಳು ಮೈ ಲವ್​' ಎಂದು ಬರೆದುಕೊಂಡಿದ್ದಾರೆ.

ಇದಲ್ಲದೇ ಶಮಿತಾಳ ಅಕ್ಕ ಶಿಲ್ಪಾ ಶೆಟ್ಟಿ ಕೂಡ ತಂಗಿಯ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ. ಶಮಿತಾ, ಶಿಲ್ಪಾ ಇರುವ ಕುಟುಂಬದ ಫೋಟೋವನ್ನು ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, 'ನಾನು ನಿನ್ನನ್ನು ಯಾವಾಗಲೂ ಹೀಗೆಯೇ ನೋಡಲು ಬಯಸುತ್ತೇನೆ. ಜನ್ಮದಿನದ ಶುಭಾಶಯಗಳು ನನ್ನ ಟುಂಕಿ. ಈ ದಿನ ನಿನ್ನೆಲ್ಲಾ ಕನುಸಗಳು ಈಡೇರಲಿ. ನಿನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ. ಹಾಗೆಯೇ, ಹೆಮ್ಮ ಪಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಶಮಿತಾ ಶೆಟ್ಟಿ ಹಿಂದಿ ಬಿಗ್ ಬಾಸ್​ನ 15ನೇ ಅವತರಣಿಕೆಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡು ರಿಯಾಲಿಟಿ ಶೋನ ಟಾಪ್ 5ರಲ್ಲಿ ಸ್ಥಾನ ಪಡೆದು, ನಾಲ್ಕನೇ ಸ್ಪರ್ಧಿಯಾಗಿ ಹೊರಬಿದ್ದಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.